BCCI Contract List: ಆಟಗಾರರಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದಾಗಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ತಮ್ಮ ಕೇಂದ್ರ ಒಪ್ಪಂದಗಳನ್ನು ಕಳೆದುಕೊಳ್ಳಬೇಕಾಯಿತು. ವಾಸ್ತವವಾಗಿ, ಈ ಇಬ್ಬರೂ ಆಟಗಾರರು ಮಂಡಳಿಯ ಮಾತನ್ನು ಕಡೆಗಣಿಸಿ.. ದೇಶೀಯ ಕ್ರಿಕೆಟ್‌ನಲ್ಲಿ ಆಡಲಿಲ್ಲ, ಇದರಿಂದಾಗಿ ಅವರು ತಮ್ಮ ಕೇಂದ್ರ ಒಪ್ಪಂದಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ... ಆದರೆ ಇದೀಗ ಅಯ್ಯರ್ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬೀಳುತ್ತಿದೆ..
ಶ್ರೇಯಸ್ ಮತ್ತು ಇಶಾನ್ ಭಾರತೀಯ ತಂಡದ ಭಾಗವಾಗಿರದೇ ಈ ಇಬ್ಬರೂ ಆಟಗಾರರು ರಣಜಿ ಟ್ರೋಫಿಯಲ್ಲಿ ತಮ್ಮ ತಂಡಕ್ಕಾಗಿ ಆಡಲಿಲ್ಲ... ಈ ಬಗ್ಗೆ ಬಿಸಿಸಿಐ ಎಲ್ಲಾ ಆಟಗಾರರಿಗೆ ಎಚ್ಚರಿಕೆ ನೀಡಿತ್ತು ಇದರ ಹೊರತಾಗಿಯೂ ಇವರಿಬ್ಬರ ನಡೆಗಳನ್ನು ನೋಡಿದ ಭಾರತ ಕ್ರಿಕೆಟ್ ಮಂಡಳಿ ಸಿಟ್ಟಿಗೆದ್ದು ಕೇಂದ್ರ ಗುತ್ತಿಗೆಯಿಂದ ಕೈಬಿಟ್ಟಿದೆ..
ಇದನ್ನೂ ಓದಿ-Shivarajkumar: "ನನ್ನ ಪತ್ನಿ ಸಂಸದೆ ಆಗಬೇಕು ಎಂಬ ಆಸೆಯಿದೆ": ಸೆಂಚುರಿ ಸ್ಟಾರ್ ಮಾತು!
ವರದಿಯ ಪ್ರಕಾರ, ಶ್ರೇಯಸ್ ಅಯ್ಯರ್ ಗಾಯದ ಕಾರಣಕ್ಕಾಗಿ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡಲು ನಿರಾಕರಿಸಿದ್ದರು.. ಆದರೆ ಅದೇ ವೇಳೆ ಅವರು ಕೆಕೆಆರ್ ಕ್ಯಾಂಪ್ ತಲುಪಿದ್ದಾರೆ.. ಇದರಿಂದಾಗಿ ಕ್ರಿಕೆಟ್ ಮಂಡಳಿ ಮತ್ತಷ್ಟು ಕೆರಳಿದೆ. ಆಟಗಾರರ ಕೇಂದ್ರ ಒಪ್ಪಂದಗಳಿಗೆ ಸಹಿ ಹಾಕಬೇಕಾಗಿದ್ದ ಅಗರ್ಕರ್ ಅವರು ಅಯ್ಯರ್ ಅವರ ವರ್ತನೆಯಿಂದ ಬೇಸೋತ್ತು.. ಅವರನ್ನು ಕೇಂದ್ರ ಒಪ್ಪಂದದಿಂದ ಕೈಬಿಡಲಾಗಿದೆ..
ಈ ಹಿಂದೆ ಬಲಗೈ ಬ್ಯಾಟ್ಸ್‌ಮನ್ ಬಿಸಿಸಿಐನ ಕೇಂದ್ರ ಒಪ್ಪಂದದಲ್ಲಿ ಗ್ರೇಡ್ ಬಿ ಭಾಗವಾಗಿದ್ದರು, ಇದರಿಂದ ಅವರು ವಾರ್ಷಿಕವಾಗಿ 3 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದರು.. ಆದರೆ ಈಗ ಅವರನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಯ್ಕೆಯಾಗಿದ್ದ ಅವರು.. ಮುಂದಿನ ಹಂತದಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ, ಕೊನೆಯ ಮೂರು ಪಂದ್ಯಗಳಿಗೆ ತಂಡದಲ್ಲಿ ಉಳಿಯಲಾಗಲಿಲ್ಲ.. ಇದಾದ ನಂತರ ರಣಜಿ ಟ್ರೋಫಿಯಲ್ಲಿ ಆಡುವಂತೆ ಅಯ್ಯರ್ ಅವರನ್ನು ಕೇಳಲಾಯಿತು ಆದರೆ ಅಯ್ಯರ್ ನಿರಾಕರಸಿದ್ದರು.. ಅದಕ್ಕಾಗಿಯೇ ಬಿಸಿಸಿಐ ಇಷ್ಟು ದೊಡ್ಡ ಕ್ರಮ ಕೈಗೊಂಡಿದೆ.
ಇದನ್ನೂ ಓದಿ-Ram Charan: ವಿಮಾನದಲ್ಲಿ ಸುಸ್ತಾಗಿ ಮಲಗಿದ್ದ ಮಡದಿ ಕಾಲು ಒತ್ತಿದ ಗೇಮ್ ಚೇಂಜರ್: ವೈರಲ್ ವಿಡಿಯೋ !!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.