ಆಡಿದ 2ನೇ ಪಂದ್ಯದಲ್ಲೇ ದಾಖಲೆ... ನಿತೀಶ್ ರೆಡ್ಡಿ ಅಬ್ಬರಕ್ಕೆ ಕ್ರಿಕೆಟ್‌ ಜಗತ್ತೇ ತಬ್ಬಿಬ್ಬು!‌ ಕೊಹ್ಲಿ ರೆಕಾರ್ಡ್‌ ಬ್ರೇಕ್‌; ಸಚಿನ್, ಗವಾಸ್ಕರ್‌ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್‌

Nitish Reddy Record: ಈ ಪಂದ್ಯ ಭಾರತ ತಂಡಕ್ಕೆ ಅಥವಾ ಅವರ ಅಭಿಮಾನಿಗಳಿಗೆ ಸ್ಮರಣೀಯವಾಗಿರಲಿಲ್ಲ ಎಂಬುದು ಸತ್ಯ. ಆದರೆ 21 ವರ್ಷದ ಯುವ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದಾರೆ.

Written by - Bhavishya Shetty | Last Updated : Dec 9, 2024, 03:21 PM IST
    • ಪಿಂಕ್ ಬಾಲ್ ಟೆಸ್ಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡಿರುವ ಆಸ್ಟ್ರೇಲಿಯಾ
    • ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ
    • ಟ್ರಾವಿಸ್ ಹೆಡ್ ಭಾರತದ ವಿರುದ್ಧ ಮೂರನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಆಡಿದ 2ನೇ ಪಂದ್ಯದಲ್ಲೇ ದಾಖಲೆ... ನಿತೀಶ್ ರೆಡ್ಡಿ ಅಬ್ಬರಕ್ಕೆ ಕ್ರಿಕೆಟ್‌ ಜಗತ್ತೇ ತಬ್ಬಿಬ್ಬು!‌ ಕೊಹ್ಲಿ ರೆಕಾರ್ಡ್‌ ಬ್ರೇಕ್‌; ಸಚಿನ್, ಗವಾಸ್ಕರ್‌ ಸಮಕ್ಕೆ ನಿಂತೇಬಿಟ್ಟ ಟೀಂ ಇಂಡಿಯಾದ ಸ್ಟಾರ್‌  title=
Nitish Kumar Reddy

Nitish Reddy: ಪಿಂಕ್ ಬಾಲ್ ಟೆಸ್ಟ್‌ನಲ್ಲಿ ತಮ್ಮ ಪ್ರಾಬಲ್ಯವನ್ನು ಕಾಯ್ದುಕೊಂಡಿರುವ ಆಸ್ಟ್ರೇಲಿಯಾ, ಅಡಿಲೇಡ್ ಟೆಸ್ಟ್ ಅನ್ನು ಭಾರತದ ವಿರುದ್ಧ ದಾಖಲೆಯ ಸಮಯದಲ್ಲಿ ಗೆದ್ದು ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಪರ್ತ್ ಟೆಸ್ಟ್‌ನಲ್ಲಿ ಹೀನಾಯ ಸೋಲಿನ ನಂತರ, ಡೇ-ನೈಟ್ ಟೆಸ್ಟ್ ಆಡಲು ಬಂದಿದ್ದ ಆಸ್ಟ್ರೇಲಿಯ ತಂಡವು ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಸ್ಕಾಟ್ ಬೋಲ್ಯಾಂಡ್ ಅವರ ವೇಗಿ ತ್ರಿವಳಿಗಳ ಬಲದಿಂದ ಎರಡು ಬಾರಿ ಭಾರತವನ್ನು ಆಲ್ ಔಟ್ ಮಾಡಿ 10 ವಿಕೆಟ್‌ಗಳಿಂದ ಗೆದ್ದಿತು. ಟ್ರಾವಿಸ್ ಹೆಡ್ ಭಾರತದ ವಿರುದ್ಧ ಮೂರನೇ ಬಾರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಇದನ್ನೂ ಓದಿ: ಈ ಎರಡು ಕಾಯಿಲೆ ಇದ್ದವರು ಯಾವತ್ತೂ ಹಸಿರು ಬಟಾಣಿ ಸೇವಿಸಬೇಡಿ...!

ನಿತೀಶ್ ಕುಮಾರ್ ರೆಡ್ಡಿ ಇತಿಹಾಸ:
ಈ ಪಂದ್ಯ ಭಾರತ ತಂಡಕ್ಕೆ ಅಥವಾ ಅವರ ಅಭಿಮಾನಿಗಳಿಗೆ ಸ್ಮರಣೀಯವಾಗಿರಲಿಲ್ಲ ಎಂಬುದು ಸತ್ಯ. ಆದರೆ 21 ವರ್ಷದ ಯುವ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರ ಮನ ಗೆದ್ದಿದ್ದಾರೆ. ಇದರೊಂದಿಗೆ ಎರಡನೇ ಟೆಸ್ಟ್‌ನಲ್ಲಿಯೇ ಇತಿಹಾಸ ಸೃಷ್ಟಿಸಿದ್ದಾರೆ. ಭಾರತೀಯ ಬ್ಯಾಟ್ಸ್‌ಮನ್ ನಿತೀಶ್ ಕುಮಾರ್ ರೆಡ್ಡಿ, ಅವರು ತಮ್ಮ ನಾಲ್ಕು ಆರಂಭಿಕ ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಮೂರರಲ್ಲಿ ತಂಡದ ಅಗ್ರ ಸ್ಕೋರರ್ ಆಗಿದ್ದಾರೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಸರಣಿಯಲ್ಲಿ ಸುನಿಲ್ ಗವಾಸ್ಕರ್ ಈ ಸಾಧನೆ ಮಾಡಿದ್ದರು.

ಇವರಲ್ಲದೆ, ಸಚಿನ್ ತೆಂಡೂಲ್ಕರ್ ಕೂಡ ತಮ್ಮ ವೃತ್ತಿಜೀವನದಲ್ಲಿ ಮೂರು ಬಾರಿ ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ ಎರಡು ಬಾರಿ ಗರಿಷ್ಠ ಸ್ಕೋರರ್ ಎಂದೆನಿಸಿಕೊಂಡಿದ್ದರು. ಇದೀಗ ನಿತೀಶ್‌ ಅವರು ಆಡಿದ 4 ಇನ್ನಿಂಗ್ಸ್‌ಗಳಲ್ಲಿ ಮೂರರಲ್ಲಿ ಭಾರತದ ಗರಿಷ್ಠ ಸ್ಕೋರರ್ ಆಗಿದ್ದಾರೆ.

ಇದನ್ನೂ ಓದಿ: ತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಬೋಳು ತಲೆಯಲ್ಲಿಯೂ ಹುಟ್ಟುತ್ತದೆ ಕೂದಲು! ಬಿಳಿ ಕೂದಲಿಗೂ ಇದೇ ಶಾಶ್ವತ ಪರಿಹಾರ

ಈ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಕೇವಲ 81 ಓವರ್‌ಗಳನ್ನು ಮಾತ್ರ ಬ್ಯಾಟ್ ಮಾಡಲು ಸಾಧ್ಯವಾಯಿತು. ಆಸ್ಟ್ರೇಲಿಯಾವು ಕೇವಲ ಏಳು ಸೆಷನ್‌ಗಳಲ್ಲಿ ಗೆದ್ದಿತ್ತು. ಐದು ವಿಕೆಟ್‌ಗೆ 128 ರನ್‌ಗಳೊಂದಿಗೆ ದಿನದಾಟ ಆರಂಭಿಸಿದ ಭಾರತ ಮೊದಲ ಓವರ್‌ನಲ್ಲಿಯೇ ರಿಷಬ್ ಪಂತ್ (28) ವಿಕೆಟ್ ಕಳೆದುಕೊಂಡಿತು. ನಿತೀಶ್ ಕುಮಾರ್ ರೆಡ್ಡಿ (42 ರನ್, 47 ಎಸೆತ) ಧೈರ್ಯ ತೋರಿ ತಂಡದ ಸ್ಕೋರನ್ನು 175 ರನ್ ಗಳಿಗೆ ಕೊಂಡೊಯ್ದು ಇನಿಂಗ್ಸ್ ಸೋಲು ತಪ್ಪಿಸುವಲ್ಲಿ ಯಶಸ್ವಿಯಾದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News