MS Dhoni Captaincy: ಅನುಭವಿ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಅವರ ನಾಯಕತ್ವದಲ್ಲಿ ಅನೇಕ ಆಟಗಾರರಿಗೆ ಅವಕಾಶಗಳನ್ನು ನೀಡಿದ್ದರು. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಆಟಗಾರರು ಇಂದು ಉನ್ನತ ಮಟ್ಟವನ್ನು ತಲುಪಿದ್ದಾರೆ. ಆದರೆ ಅವರ ನಾಯಕತ್ವದಲ್ಲಿ ಪಂದ್ಯವನ್ನು ಆಡಲು ಸಾಧ್ಯವಾಗದ ಕೆಲವರು ಆಟಗಾರರು ಸಹ ಇದ್ದಾರೆ. ಅದರಲ್ಲಿ ಒಬ್ಬನ ಬಗ್ಗೆ ನಾವಿಂದು ಮಾತನಾಡಲಿದ್ದೇವೆ.
ಇದನ್ನೂ ಓದಿ: ಐಫೋನ್’ಗೆ ಪೈಪೋಟಿ ಕೊಡಲು ಬರ್ತಿದೆ ಅದ್ಭುತ ಸ್ಮಾರ್ಟ್ಫೋನ್: 7000mAh ಬ್ಯಾಟರಿಯ ಈ ಫೋನ್ ಬೆಲೆ 9000ಕ್ಕಿಂತಲೂ ಕಮ್ಮಿ!
ಈ ಆಟಗಾರ ಬೇರಾರು ಅಲ್ಲ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್‌ಮನ್ ನಿಶಾಂತ್ ಸಿಂಧು. ಇದೀಗ ದುಲೀಪ್ ಟ್ರೋಫಿ ಪಂದ್ಯದಲ್ಲಿ ನಿಶಾಂತ್ ಅದ್ಭುತ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆದರೆ ಕಳೆದ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಲು ಧೋನಿ ಅವರಿಗೆ ಒಂದೇ ಒಂದು ಅವಕಾಶ ನೀಡಲಿಲ್ಲ.
ಧ್ರುವ್ ಶೋರೆ ಅವರ ಸಂಯಮದ ಶತಕದ ನೆರವಿನಿಂದ ಉತ್ತರ ವಲಯ ಬುಧವಾರ ಈಶಾನ್ಯ ವಲಯ ವಿರುದ್ಧದ ನಾಲ್ಕು ದಿನಗಳ ದುಲೀಪ್ ಟ್ರೋಫಿ ಕ್ವಾರ್ಟರ್ ಫೈನಲ್ ನ ಮೊದಲ ದಿನದಾಟದ ಅಂತ್ಯಕ್ಕೆ 87 ಓವರ್ ಗಳಲ್ಲಿ 6 ವಿಕೆಟ್ ಗೆ 306 ರನ್ ಗಳಿಸಿದೆ. ನಿಶಾಂತ್ ಸಿಂಧು ಅಜೇಯ 76 ರನ್ ಗಳ ಅರ್ಧಶತಕದೊಂದಿಗೆ ಇನ್ನಿಂಗ್ಸ್ ಅನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಡೆಲ್ಲಿ ಆಟಗಾರ ಧ್ರುವ್ ಈ ಪಂದ್ಯಕ್ಕೂ ಮುನ್ನ ಅತ್ಯುತ್ತಮ ಫಾರ್ಮ್ ನಲ್ಲಿ ಓಡುತ್ತಿದ್ದು, ಇದೀಗ ಅದೇ ಲಯವನ್ನು ಮುಂದುವರೆಸಿದ್ದಾರೆ. 2022-23 ರ ರಣಜಿ ಋತುವಿನ ಏಳು ಪಂದ್ಯಗಳಲ್ಲಿ 95.44 ರ ಅತ್ಯುತ್ತಮ ಸರಾಸರಿಯಲ್ಲಿ 859 ರನ್ ಗಳಿಸಿದರು. ಇದರಲ್ಲಿ ಮೂರು ಶತಕಗಳು ಸೇರಿವೆ.
ಇದನ್ನೂ ಓದಿ: 9 ಪಂದ್ಯ, 9 ನಗರ, 8400 ಕಿಮೀ ಪ್ರಯಾಣ: 2023ರ ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾ ದಾಟಬೇಕು ಈ ಹಾದಿ!
31ರ ಹರೆಯದ ಧ್ರುವ್ ಶೋರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. ನಾರ್ತ್ ಈಸ್ಟ್ ಟಾಸ್ ಗೆದ್ದು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಆದರೆ, ಧ್ರುವ್ ತಮ್ಮ ವೇಗಿಗಳಾದ ಜೋತಿನ್ ಸಿಂಗ್, ಪಲ್ಜೋರ್ ತಮಾಂಗ್ ಮತ್ತು ದಿಪ್ಪು ಸಂಗ್ಮಾ ವಿರುದ್ಧ ಕ್ರೀಸ್ ನಲ್ಲಿ ನೆಲೆಗೊಳ್ಳಲು ತಮ್ಮ ಸಮಯವನ್ನು ತೆಗೆದುಕೊಂಡರು. ಈಶಾನ್ಯ ವೇಗಿಗಳು ಪಿಚ್ ನಿಂದ ಸ್ವಲ್ಪ ಸಹಾಯ ಪಡೆಯುತ್ತಿದ್ದರು. ಆದರೆ ಅವರ ವೇಗದ ಬೌಲಿಂಗ್ ನಿಂದ ಧ್ರುವ್ ಮತ್ತು ಅವರ ಆರಂಭಿಕ ಪ್ರಶಾಂತ್ ಚೋಪ್ರಾ ಅವರನ್ನು ಬೇಗನೆ ಔಟ್ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಮೊದಲ 15 ಓವರ್ ಗಳಲ್ಲಿ ಉತ್ತರ ವಲಯ ತಂಡ 29 ರನ್ ಗಳಿಸಲಷ್ಟೇ ಶಕ್ತವಾಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.