ಕೇನ್ ವಿಲಿಯಮ್ಸನ್‌ಗೆ ಕೊರೊನಾ ಪಾಸಿಟಿವ್: ಪಂದ್ಯದಿಂದ ಹೊರಬಿದ್ದ ಆಟಗಾರ!

ತಂಡದಲ್ಲಿರುವ ಉಳಿದ ಆಟಗಾರರಿಗೂ ಕೊರೊನಾ ಟೆಸ್ಟ್‌ ನಡೆಸಲಾಗಿದ್ದು, ನೆಗೆಟಿವ್‌ ಬಂದಿದೆ. ಸದ್ಯ ಕೇನ್ ವಿಲಿಯಮ್ಸನ್ ಬದಲಿಗೆ ಹ್ಯಾಮಿಶ್ ರುದರ್‌ಫೋರ್ಡ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಖಚಿತಪಡಿಸಿದ್ದಾರೆ.   

Written by - Bhavishya Shetty | Last Updated : Jun 10, 2022, 01:31 PM IST
  • ಕೇನ್ ವಿಲಿಯಮ್ಸನ್‌ಗೆ ಕೋವಿಡ್ ಪಾಸಿಟಿವ್‌
  • ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಆಟಗಾರ
  • ಐದು ದಿನಗಳ ಕಾಲ ಕ್ವಾರೆಂಟೈನ್‌ಗೆ ಒಳಪಟ್ಟ ನಾಯಕ
ಕೇನ್ ವಿಲಿಯಮ್ಸನ್‌ಗೆ ಕೊರೊನಾ ಪಾಸಿಟಿವ್: ಪಂದ್ಯದಿಂದ ಹೊರಬಿದ್ದ ಆಟಗಾರ!  title=
new Zealand

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ಗೆ ಕೋವಿಡ್ ತಗುಲಿದೆ. ಪರಿಣಾಮ ಶುಕ್ರವಾರ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಕೇನ್ ವಿಲಿಯಮ್ಸನ್ ಹೊರಗುಳಿದಿದ್ದಾರೆ. 

ಇದನ್ನೂ ಓದಿ: ಪತ್ನಿ ತಮ್ಮ ಪತಿ ಜೊತೆ ಈ ರಹಸ್ಯ ಎಂದಿಗೂ ಹೇಳಿಕೊಳ್ಳುವುದಿಲ್ಲವಂತೆ!

ಅಭಿಮಾನಿಗಳಿಗೆ ಕೆಟ್ಟ ಸುದ್ದಿ: 
ಕೇನ್ ವಿಲಿಯಮ್ಸನ್ ಬದಲಿಗೆ ಟಾಮ್ ಲ್ಯಾಥಮ್ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕತ್ವ ವಹಿಸಲಿದ್ದಾರೆ. ಕೇನ್ ವಿಲಿಯಮ್ಸನ್ ಅವರ ರಾಪಿಡ್ ಆಂಟಿಜೆನ್ ಟೆಸ್ಟ್ (RAT) ಅನ್ನು ಗುರುವಾರ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಸದ್ಯ ಅವರನ್ನು ಐದು ದಿನಗಳ ಕಾಲ ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. 

ತಂಡದಲ್ಲಿರುವ ಉಳಿದ ಆಟಗಾರರಿಗೂ ಕೊರೊನಾ ಟೆಸ್ಟ್‌ ನಡೆಸಲಾಗಿದ್ದು, ನೆಗೆಟಿವ್‌ ಬಂದಿದೆ. ಸದ್ಯ ಕೇನ್ ವಿಲಿಯಮ್ಸನ್ ಬದಲಿಗೆ ಹ್ಯಾಮಿಶ್ ರುದರ್‌ಫೋರ್ಡ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಖಚಿತಪಡಿಸಿದ್ದಾರೆ. 

ಇದನ್ನು ಓದಿ: ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಬಿಗ್‌ ಟ್ವಿಸ್ಟ್‌: ಮಾಸ್ಟರ್‌ಮೈಂಡ್‌ ಹೆಸರು ಬೆಳಕಿಗೆ!

ಇನ್ನು ಇಂತಹ ಮಹತ್ವದ ಪಂದ್ಯದಿಂದ ಕೇನ್ ವಿಲಿಯಮ್ಸನ್‌ ಹೊರಬಿದ್ದಿರುವುದು ತಂಡಕ್ಕೆ ಭಾರೀ ನಷ್ಟದಂತಾಗಿದೆ. ಹಮೀಶ್ ರುದರ್‌ಫೋರ್ಡ್ ಈ ಹಿಂದೆ ಟೆಸ್ಟ್ ತಂಡದಲ್ಲಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News