ಏಕದಿನ ವಿಶ್ವಕಪ್ ಸೆಮೀಸ್’ಗೆ ಈ ತಂಡಗಳು ಎಂಟ್ರಿ ಕೊಡೋದು ಪಕ್ಕಾ! ಭಾರತಕ್ಕೂ ಇದೆಯೇ ಸ್ಥಾನ?

Muttiah Muralitharan Prediction: ಶ್ರೀಲಂಕಾದ ಶ್ರೇಷ್ಠ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಈ ವರ್ಷ ಅಕ್ಟೋಬರ್-ನವೆಂಬರ್‌ ನಲ್ಲಿ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್‌ ನ ಸೆಮಿಫೈನಲ್‌ ಗೆ ಹೋಗುವ 4 ತಂಡಗಳನ್ನು ಹೆಸರಿಸಿದ್ದಾರೆ. “ಉಪಖಂಡದಲ್ಲಿ ವಿಶ್ವಕಪ್ ನಡೆಯುತ್ತಿದೆ.

Written by - Bhavishya Shetty | Last Updated : Jun 28, 2023, 08:54 AM IST
    • ಅಕ್ಟೋಬರ್-ನವೆಂಬರ್‌ ನಲ್ಲಿ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್‌ ನ ಸೆಮಿಫೈನಲ್‌
    • ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಾ ಪಂದ್ಯದ ಮೂಲಕ ಮಹಾ ಕ್ರಿಕೆಟ್ ಕುಂಭಮೇಳ ಪ್ರಾರಂಭಗೊಳ್ಳಲಿದೆ
    • ಇಂಗ್ಲೆಂಡ್‌ ನ ಆದಿಲ್ ರಶೀದ್ ತಮ್ಮ ನೆಚ್ಚಿನ ಬೌಲರ್ ಆಗಿರುತ್ತಾರೆ ಎಂದ ಮುತ್ತಯ್ಯ ಮುರಳೀಧರನ್
ಏಕದಿನ ವಿಶ್ವಕಪ್ ಸೆಮೀಸ್’ಗೆ ಈ ತಂಡಗಳು ಎಂಟ್ರಿ ಕೊಡೋದು ಪಕ್ಕಾ! ಭಾರತಕ್ಕೂ ಇದೆಯೇ ಸ್ಥಾನ?  title=
Muttiah Muralitharan

Muttiah Muralitharan Prediction: ಐಸಿಸಿ 2023 ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ ಮತ್ತು ಅಂತಿಮ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ. ಅಕ್ಟೋಬರ್ 15 ರಂದು ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮಹಾ ಪಂದ್ಯದ ಮೂಲಕ ಮಹಾ ಕ್ರಿಕೆಟ್ ಕುಂಭಮೇಳ ಪ್ರಾರಂಭಗೊಳ್ಳಲಿದೆ. 2023ರ ವಿಶ್ವಕಪ್ ಟೂರ್ನಿಗೆ ಇನ್ನೂ 4 ತಿಂಗಳು ಬಾಕಿ ಇದೆ. ಆದರೆ ಅದಕ್ಕೂ ಮುನ್ನ ಯಾವ 4 ತಂಡಗಳು ಸೆಮಿಫೈನಲ್‌ ಗೆ ಪ್ರವೇಶಿಸಲಿವೆ ಎಂದು ಈಗಾಗಲೇ ಭವಿಷ್ಯ ನುಡಿಯಲಾಗಿದೆ.

ಇದನ್ನೂ ಓದಿ: ಏಷ್ಯಾದ ಪ್ರತಿಷ್ಠಿತ ಎಕ್ಸ್‌30 ಚಾಂಪಿಯನ್‌ಶಿಪ್‌ನಲ್ಲಿ ಮುಂಬೈನ 11ರ PoR ಹಮ್ಜಾಗೆ ಬೆಳ್ಳಿ ಪದಕ

ಶ್ರೀಲಂಕಾದ ಶ್ರೇಷ್ಠ ಸ್ಪಿನ್ ಬೌಲರ್ ಮುತ್ತಯ್ಯ ಮುರಳೀಧರನ್ ಈ ವರ್ಷ ಅಕ್ಟೋಬರ್-ನವೆಂಬರ್‌ ನಲ್ಲಿ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್‌ ನ ಸೆಮಿಫೈನಲ್‌ ಗೆ ಹೋಗುವ 4 ತಂಡಗಳನ್ನು ಹೆಸರಿಸಿದ್ದಾರೆ. “ಉಪಖಂಡದಲ್ಲಿ ವಿಶ್ವಕಪ್ ನಡೆಯುತ್ತಿದೆ. ಆದ್ದರಿಂದ ಸ್ಪಿನ್ನರ್‌ ಗಳ ಪಾತ್ರ ದೊಡ್ಡದಾಗಿರುತ್ತದೆ. ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ಸೆಮಿಫೈನಲ್‌ ಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಬಹುದು” ಎಂದು ಅವರು ಹೇಳಿದ್ದಾರೆ. ಮುರಳೀಧರನ್, “ನಾನು ಭಾರತ-ಇಂಗ್ಲೆಂಡ್ ಪಂದ್ಯವನ್ನು ಎದುರು ನೋಡುತ್ತಿದ್ದೇನೆ. ಇದು ಕಠಿಣ ಪಂದ್ಯವಾಗಿರುತ್ತದೆ. ಸದ್ಯಕ್ಕೆ ಇಂಗ್ಲೆಂಡ್ ಉತ್ತಮವಾಗಿ ಆಡುತ್ತಿದೆ. ದೇಶೀಯ ಪರಿಸ್ಥಿತಿಗಳಿಂದಾಗಿ ಭಾರತವು ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬುತ್ತೇನೆ” ಎಂದಿದ್ದಾರೆ.

ಆದರೆ ಇಂಗ್ಲೆಂಡ್‌ ನ ಆದಿಲ್ ರಶೀದ್ ತಮ್ಮ ನೆಚ್ಚಿನ ಬೌಲರ್ ಆಗಿರುತ್ತಾರೆ ಎಂದು ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ. “ಭಾರತದಲ್ಲಿರುವ ಉಪಖಂಡದ ತಂಡಗಳಿಗೆ ಪಿಚ್ ನೆರವಾಗಲಿದೆ. ಅಫ್ಘಾನಿಸ್ತಾನದ ಬ್ಯಾಟಿಂಗ್ ದುರ್ಬಲವಾಗಿದೆ, ಆದರೆ ಅವರು ಅತ್ಯುತ್ತಮ ಸ್ಪಿನ್ ಬೌಲರ್‌ಗಳನ್ನು ಹೊಂದಿದ್ದಾರೆ. ಈ ವಿಚಾರದಲ್ಲಿ ಶ್ರೀಲಂಕಾ ಮತ್ತು ಭಾರತ ಕೂಡ ಹಿಂದೆ ಬಿದ್ದಿಲ್ಲ. ಭಾರತ ಮತ್ತು ಶ್ರೀಲಂಕಾ ಎರಡು ತಂಡಗಳು ಫೈನಲ್‌ ಗೆ ತಲುಪುವ ಸಾಧ್ಯತೆ ಇದೆ. 1987 ರಲ್ಲಿ (ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ನಡೆದಾಗ) ಕೊನೆಯ ಬಾರಿಗೆ ಉಪಖಂಡದಲ್ಲಿ ಅತ್ಯುತ್ತಮ ಎರಡು ತಂಡಗಳು ಫೈನಲ್‌ ನಲ್ಲಿ ಕಾಣಿಸಿಕೊಂಡವು ಮತ್ತು 2011 ರಲ್ಲಿ ಅತ್ಯುತ್ತಮ ತಂಡವು ಗೆದ್ದಿತು” ಎಂದರು.

ಇದನ್ನೂ ಓದಿ: Jasprit Bumrah: ತಂಡಕ್ಕೆ ಜಸ್ಪ್ರೀತ್ ಬುಮ್ರಾ ವಾಪಸಾತಿ ಬಗ್ಗೆ ಬಿಗ್‌ ಅಪ್ಡೇಟ್!

12 ವರ್ಷಗಳ ನಂತರ ಭಾರತ ವಿಶ್ವಕಪ್‌ ಗೆ ಆತಿಥ್ಯ:

ಸ್ಥಳಗಳನ್ನು ಪ್ರಕಟಿಸಿದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ, 'ಈಶಾನ್ಯದ ಹೆಬ್ಬಾಗಿಲು' ಗುವಾಹಟಿಯಿಂದ ವಿಶ್ವಕಪ್ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಗುವಾಹಟಿ ತಿರುವನಂತಪುರ ಮತ್ತು ಹೈದರಾಬಾದ್ ನಲ್ಲಿ ಅಭ್ಯಾಸ ಪಂದ್ಯ, 132,000 ಸಾಮರ್ಥ್ಯದ ವಿಶ್ವದ ಅತಿದೊಡ್ಡ ಕ್ರೀಡಾ ಕ್ರೀಡಾಂಗಣವಾಗಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಮತ್ತು ವಿಶ್ವಕಪ್ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಲಿವೆ. 12 ವರ್ಷಗಳ ಸುದೀರ್ಘ ಅಂತರದ ಬಳಿಕ ಭಾರತ ವಿಶ್ವಕಪ್‌ ಗೆ ಆತಿಥ್ಯ ವಹಿಸಲಿದೆ. 2021 ರಲ್ಲಿ T20 ವಿಶ್ವಕಪ್‌ ನ ಆತಿಥೇಯರಾಗಿದ್ದರೂ ಸಹ ಕೋವಿಡ್ -19 ಕಾರಣದಿಂದ ದುಬೈನಲ್ಲಿ ಆಯೋಜಿಸಬೇಕಾಯಿತು. ಇದೀಗ ಭಾರತದಲ್ಲಿ ವಿಶ್ವಕಪ್ ಆಯೋಜಿಸಲು ಉತ್ಸುಕರಾಗಿದ್ದೇವೆ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News