Cricket News: "ದುರಹಂಕಾರ ತುಂಬಿ ತುಳುಕುತ್ತಿದೆ.." ಹಾರ್ದಿಕ್ ಪಾಂಡ್ಯ ವಿರುದ್ಧ ಫ್ಯಾನ್ಸ್ ಗರಂ!!

Hardik Pandya booed by gujarat titans fans: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಿತು. ಈ ರೋಚಕ ಆಟದಲ್ಲಿ ಹಾರ್ದಿಕ್‌ ನಡುವಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ..  

Written by - Savita M B | Last Updated : Mar 25, 2024, 12:12 PM IST
  • ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಿತು.
  • ಇದೀಗ ಗುಜರಾತ್ vs ಮುಂಬೈ ಪಂದ್ಯದಲ್ಲಿ ಪಾಂಡ್ಯ ಮತ್ತೆ ಇದೇ ವಿಚಾರವಾಗಿ ಜನರ ಕಣ್ಣಿಗೆ ಬಿದ್ದಿದ್ದಾರೆ.
Cricket News: "ದುರಹಂಕಾರ ತುಂಬಿ ತುಳುಕುತ್ತಿದೆ.." ಹಾರ್ದಿಕ್ ಪಾಂಡ್ಯ ವಿರುದ್ಧ ಫ್ಯಾನ್ಸ್ ಗರಂ!!  title=

Hardik Pandya: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆಯಿತು. ಸೀಸನ್ ಆರಂಭದ ಕೆಲವು ದಿನಗಳ ಮೊದಲು ಮುಂಬೈ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆದುಹಾಕಿ, ಹಾರ್ದಿಕ್ ಪಾಂಡ್ಯ ಅವರನ್ನು ಹೊಸ ನಾಯಕನಾಗಿ ನೇಮಿಸಲಾಯಿತು..ತಂಡದ ಆಡಳಿತ ಮಂಡಳಿಯ ಈ ನಿರ್ಧಾರಕ್ಕೆ ಅಭಿಮಾನಿಗಳು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದೀಗ ಗುಜರಾತ್ vs ಮುಂಬೈ ಪಂದ್ಯದಲ್ಲಿ ಪಾಂಡ್ಯ ಮತ್ತೆ ಇದೇ ವಿಚಾರವಾಗಿ ಜನರ ಕಣ್ಣಿಗೆ ಬಿದ್ದಿದ್ದಾರೆ. ಹೌದು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗುತ್ತಿದೆ.. ಕಾರಣ ಆ ಆಟಗಾರನ ನಡುವಳಿಕೆ ಮತ್ತು ಇನ್ನೊಂದು ಮೂಲ ಕಾರಣ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ಸೇರಿದ್ದು.. 

ಇದನ್ನೂ ಓದಿ-Virat Kohli: ಮತ್ತೊಂದು ಅಪರೂಪದ ದಾಖಲೆ ಬರೆದ ವಿರಾಟ್.. ಗ್ಲೋಬಲ್‌ ಲೆವೆಲ್‌ಗೆ ಕಿಂಗ್‌ ಹವಾ!!

 ಇನ್ನು ಹಾರ್ದಿಕ್ ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್ ನಾಯಕರಾಗಿದ್ದರು.. ಅವರ ತಂಡವು 2023 ರಲ್ಲಿ ಫೈನಲ್ ತಲುಪಿತ್ತು.. ಆದರೆ 2024ರ ಐಪಿಎಲ್ ಸೀಸನ್‌ನಲ್ಲಿ ಈ ಹಾರ್ದಿಕ್ ಮತ್ತು ರೋಹಿತ್ ನಡುವಿನ ಭಿನ್ನಾಭಿಪ್ರಾಯದ ವರದಿಯಿಂದಾಗಿ ಕ್ರಿಕೆಟ್ ಅಭಿಮಾನಿಗಳು ಹಾರ್ದಿಕ್ ಅವರನ್ನೇ ಗಮನಿಸುತ್ತಿದ್ದರು..  
‌ 
ಟಾಸ್ ವೇಳೆ ರವಿಶಾಸ್ತ್ರಿ ಹಾರ್ದಿಕ್ ಪಾಂಡ್ಯ ಹೆಸರನ್ನು ಹೇಳಿದಾಗ ಮೈದಾನದಲ್ಲಿದ್ದ ಪ್ರೇಕ್ಷಕರು ರೋಹಿತ್, ರೋಹಿತ್ ಘೋಷಣೆಗಳನ್ನು ಕೂಗಲು ಆರಂಭಿಸಿದರು. ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಬೆಂಬಲಿಸಲು ಬಂದ ಅಂತಹ ಅನೇಕ ಪ್ರೇಕ್ಷಕರು ಮೈದಾನದಲ್ಲಿ ಕಾಣಿಸಿಕೊಂಡರು. ಸದ್ಯ ರೋಹಿತ್‌ ಅಭಿಮಾನಿಗಳು ಪಾಂಡ್ಯ ಅವರ ನಡುವಳಿಕೆ ಮೇಲೆ ಬೇಸರಗೊಂಡಿದ್ದಾರೆ..  

ಇದನ್ನೂ ಓದಿ-IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಗೆ 6 ರನ್ ಗಳ ರೋಚಕ ಗೆಲುವು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News