ಮಂದಿರಾ ಬೇಡಿ ಕೇಳಿದ ಪ್ರಶ್ನೆಗೆ ಎಂಎಸ್ ಧೋನಿ ಕೊಟ್ಟ ಉತ್ತರ ನೋಡಿ: ಕ್ಯಾಪ್ಟನ್ ಕೂಲ್ ಇಷ್ಟೊಂದು ಫನ್ನಿನಾ?

ದೀಪ್ತಿ ರಂಜನ್ ಎಂಬವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊ, 2016 ರ ಸಂದರ್ಶನದ್ದಾಗಿದೆ. ವೀಡಿಯೊ ಮುಂದುವರೆದಂತೆ, ಮಂದಿರಾ ಬೇಡಿ ಅವರು ಧೋನಿಗೆ ತಮ್ಮ ಜೀವನದಲ್ಲಿ ಪಡೆದ ಅತ್ಯಂತ ಅಮೂಲ್ಯವಾದ ಉಡುಗೊರೆಯ ಬಗ್ಗೆ ಕೇಳುತ್ತಾರೆ.

Written by - Bhavishya Shetty | Last Updated : Oct 8, 2022, 07:01 PM IST
    • ಮಂದಿರಾ ಬೇಡಿಗೆ ಎಂಎಸ್ ಧೋನಿ ನೀಡಿದ ಉತ್ತರ ಮತ್ತೆ ವೈರಲ್ ಆಗಿದೆ
    • ಈ ಕ್ಲಿಪ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ
    • ವೀಡಿಯೊ 139 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ
ಮಂದಿರಾ ಬೇಡಿ ಕೇಳಿದ ಪ್ರಶ್ನೆಗೆ ಎಂಎಸ್ ಧೋನಿ ಕೊಟ್ಟ ಉತ್ತರ ನೋಡಿ: ಕ್ಯಾಪ್ಟನ್ ಕೂಲ್ ಇಷ್ಟೊಂದು ಫನ್ನಿನಾ?  title=
MS Dhoni

ನಟಿ ಮತ್ತು ಟಾಕ್ ಶೋ ಹೋಸ್ಟ್ ಮಂದಿರಾ ಬೇಡಿ ಅವರೊಂದಿಗೆ ಮಾಜಿ ಟೀಂ ಇಂಡಿಯಾ ನಾಯಕ ಎಂಎಸ್ ಧೋನಿ ಸಂದರ್ಶನವನ್ನು ಒಳಗೊಂಡ ಹಳೆಯ ವೀಡಿಯೊ ಮತ್ತೆ ವೈರಲ್ ಆಗಿದೆ. ಕ್ಲಿಪ್‌ನಲ್ಲಿ, ಬೇಡಿ ಕೇಳಿದ ಪ್ರಶ್ನೆಗೆ ಧೋನಿ ಕೊಟ್ಟ ಉತ್ತರ ಜನರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ. ಅಷ್ಟೇ ಅಲ್ಲದೆ, ಇದು ಕ್ಯಾಪ್ಟನ್ ಕೂಲ್ ಅವರ ಹಾಸ್ಯದ ಮನೋಭಾವವನ್ನು ತೋರಿಸುತ್ತದೆ.

ಇದನ್ನೂ ಓದಿ:  ಸೌತ್ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಿಂದ ಸ್ಟಾರ್ ಆಟಗಾರ ಔಟ್: ಈತನ ಬದಲಿಗೆ ಬಂದಿದ್ದು ಕಿಲಾಡಿ ಆಲ್ ರೌಂಡರ್!

ದೀಪ್ತಿ ರಂಜನ್ ಎಂಬವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊ, 2016 ರ ಸಂದರ್ಶನದ್ದಾಗಿದೆ. ವೀಡಿಯೊ ಮುಂದುವರೆದಂತೆ, ಮಂದಿರಾ ಬೇಡಿ ಅವರು ಧೋನಿಗೆ ತಮ್ಮ ಜೀವನದಲ್ಲಿ ಪಡೆದ ಅತ್ಯಂತ ಅಮೂಲ್ಯವಾದ ಉಡುಗೊರೆಯ ಬಗ್ಗೆ ಕೇಳುತ್ತಾರೆ. ಉತ್ತರವನ್ನು ಹುಡುಕಲು ಧೋನಿ ಸ್ವಲ್ಪ ವಿರಾಮ ತೆಗೆದುಕೊಂಡಾಗ, ಬೇಡಿ ಅವರು ಪಡೆದ ದೊಡ್ಡ ಉಡುಗೊರೆ ತನ್ನ ಮಗಳು ಎಂದು ಹೇಳಲು ಪ್ರೇರೇಪಿಸುತ್ತಾರೆ. ಇದಕ್ಕೆ ಸಂಪೂರ್ಣ ನಿರಾಕರಣೆಯಾಗಿ ತಲೆದೂಗಿದ ಧೋನಿ, ಇದು ಸಾಕಷ್ಟು ಶ್ರಮವಹಿಸಿದ್ದು, ಉಡುಗೊರೆಯಲ್ಲ ಎಂದು ಉತ್ತರಿಸಿದ್ದಾರೆ.

 

 

ಇದನ್ನೂ ಓದಿ: 30ರ ಹರೆಯದ WWE ʼಟಫ್ ಎನಫ್ʼ ಫೈಟರ್‌ ನಿಧನ : ನಿನ್ನೆ ಆರೋಗ್ಯವಾಗಿದ್ದ ಲೀ ಇಂದಿಲ್ಲ..!

ಅವರ ಈ ಉತ್ತರವನ್ನು ಕೇಳಿದ ಬೇಡಿ ಮತ್ತು ಪ್ರೇಕ್ಷಕರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ಕ್ಲಿಪ್ 139k ವೀಕ್ಷಣೆಗಳನ್ನು ಮತ್ತು ಟನ್‌ಗಟ್ಟಲೆ ಲೈಕ್ ಗಳನ್ನು ಪಡೆದಿದೆ. ಧೋನಿಯವರ ಈ ಉತ್ತರಕ್ಕೆ ಕೆಲವರು ನಗುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದರೆ, ಇನ್ನೂ ಕೆಲವರು ತೀಕ್ಷ್ಣವಾದ ಬುದ್ಧಿವಂತಿಕೆ ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News