ಎಂ.ಎಸ್.ಧೋನಿ ನಾನು ನೋಡಿದ ಅತ್ಯುತ್ತಮ ವೈಟ್ ಬಾಲ್ ನಾಯಕ: ಮೈಕೆಲ್ ವಾನ್

ಎಂ.ಎಸ್.ಧೋನಿ ತಾವು ಕಂಡ ಅತ್ಯುತ್ತಮ ವೈಟ್ ಬಾಲ್ ನಾಯಕ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಶ್ಲಾಘಿಸಿದ್ದಾರೆ.

Last Updated : Oct 9, 2019, 03:08 PM IST
ಎಂ.ಎಸ್.ಧೋನಿ ನಾನು ನೋಡಿದ ಅತ್ಯುತ್ತಮ ವೈಟ್ ಬಾಲ್ ನಾಯಕ: ಮೈಕೆಲ್ ವಾನ್ title=

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ತಾವು ಕಂಡ ಅತ್ಯುತ್ತಮ ವೈಟ್ ಬಾಲ್ ನಾಯಕ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಶ್ಲಾಘಿಸಿದ್ದಾರೆ.

ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ವಾನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಎಂ.ಎಸ್.ಧೋನಿ ನಾ ಕಂಡ  ಅತ್ಯುತ್ತಮ ಸೀಮಿತ ಓವರ್‌ಗಳ ನಾಯಕ ಎಂದಿದ್ದಾರೆ.

"ಎಂಎಸ್ ಧೋನಿ ಇನ್ಮುಂದೆ ಅಂತರರಾಷ್ಟ್ರೀಯ ಕ್ರಿಕೆಟ್ ನಾಯಕತ್ವ ವಹಿಸದೇ ಇರಬಹುದು. ಆದರೆ ನಮ್ಮ ಕಾಲದಲ್ಲಿ, ಧೋನಿ ನಾನು ನೋಡಿದ ಅತ್ಯುತ್ತಮ ವೈಟ್-ಬಾಲ್ ನಾಯಕ. ಸ್ಟಂಪ್‌ ಹಿಂದಿನಿಂದ ಅವರು ನಡೆಸುವ ರೀತಿ, ಕೇವಲ ಆಟದ ಉದ್ದೇಶವನ್ನು ತಿಳಿಸುತ್ತದೆ.  ಆದರೆ ಅವರು ಚೌಕಟ್ಟನ್ನೂ ಮೀರಿ ಆಲೋಚಿಸಿ ಎಂತಹ ಒತ್ತಡದ ಸಂದರ್ಭದಲ್ಲಿಯೂ ಆಟವನ್ನು ಉತ್ತಮವಾಗಿ ನಿಭಾಯಿಸುತ್ತಾರೆ, ಅದ್ಭುತವಾಗಿ ಬ್ಯಾಟ್ ಕೂಡ ಮಾಡುತ್ತಾರೆ" ಎಂದು ವಾನ್ ಹೇಳಿದ್ದಾರೆ.

ಕೊಹ್ಲಿಯ ಸಾಮರ್ಥ್ಯದ ಬಗ್ಗೆಯೂ ಮಾತನಾಡಿದ ವಾನ್, "ಟೆಸ್ಟ್ ಪಂದ್ಯಗಳಲ್ಲಿ, ವಿರಾಟ್ ಕೊಹ್ಲಿ ಕಾರ್ಯನಿರತ, ಶಕ್ತಿಯುತ, ಅದ್ಭುತ ಬ್ಯಾಟ್ಸ್‌ಮನ್, ಜೀವವನ್ನೇ ತುಂಬಿದ್ದಾರೆ. ಅವರು ನಾಯಕತ್ವದ ರೀತಿ ನನಗೆ ಇಷ್ಟವಾಗಿದೆ" ಎಂದು ಹೇಳಿದ್ದಾರೆ.

Trending News