ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಎಂ.ಎಸ್.ಧೋನಿ ಹುಟ್ಟುಹಬ್ಬಕ್ಕೆ ಇನ್ನು ಒಂದು ದಿನ ಬಾಕಿ ಇದೆ. ಆದರೆ ಇಂತಹ ದಂತಕಥೆ ಆಟಗಾರನ ಬಗ್ಗೆ ಐಸಿಸಿ ವಿಶೇಷ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
🔹 A name that changed the face of Indian cricket
🔹 A name inspiring millions across the globe
🔹 A name with an undeniable legacyMS Dhoni – not just a name! #CWC19 | #TeamIndia pic.twitter.com/cDbBk5ZHkN
— ICC (@ICC) July 6, 2019
ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿರುವ ಐಸಿಸಿ " ಭಾರತದ ಕ್ರಿಕೆಟ್ ಚರ್ಯೆಯನ್ನು ಬದಲಿಸಿದ ಹೆಸರು, ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದ ಹೆಸರು. ನಿರಾಕರಿಸಲಾಗದ ಪರಂಪರೆಯನ್ನು ಹೊಂದಿರುವ ಹೆಸರು. ಎಂಎಸ್ ಧೋನಿ- ಬರಿ ಹೆಸರಲ್ಲ "ಎಂದು ಟ್ವೀಟ್ ಮಾಡಿದೆ.
ಧೋನಿ ಜುಲೈ 7 ಕ್ಕೆ ತಮ್ಮ 38 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.1981 ರಲ್ಲಿ ರಾಂಚಿಯಲ್ಲಿ ಜನಿಸಿದ ಧೋನಿ ,ಮೊದಲ ಬಾರಿಗೆ 2004 ರಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು.ಅಂದಿನಿಂದ ಅವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲವೆನ್ನಬಹುದು. ಭಾರತ ತಂಡ ನಾಯಕರಾಗಿ ಟ್ವೆಂಟಿ ಕ್ರಿಕೆಟ್, ಏಕದಿನ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದ ಶ್ರೇಯ ಅವರಿಗೆ ಇದೆ.