2023 ರ ಕ್ಯಾಲೆಂಡರ್‌ ವರ್ಷದಲ್ಲಿ "ಶುಭ್ಮನ್‌ ಗಿಲ್‌", "ವಿರಾಟ್‌ ಕೊಹ್ಲಿ"ಯೇ ಅತ್ಯಧಿಕ ರನ್‌ ಗೆಟ್ಟರ್ಸ್! ಭಾರತದ ಇಬ್ಬರು ಆಟಗಾರರಿಗೆ ಅಗ್ರಗಣ್ಯ ಸ್ಥಾನ

ICC :ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ICC) 2023 ಕ್ಯಾಲೆಂಡರ್‌ ವರ್ಷದಲ್ಲಿ ಅತ್ಯಧಿಕ ರನ್‌ಗಳಿಸಿದ ಆಟಗಾರ ಪಟ್ಟಿಯನ್ನು ಬಿಡಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮೂವರು ಭಾರತೀಯ ಆಟಗಾರರು ಅಗ್ರ 5 ಸ್ತಾನದಲ್ಲಿ ಕಾಣಿಸಿಕೊಂಡಿದ್ಧಾರೆ. ಶುಭ್ಮನ್‌ ಗಿಲ್‌ ಅವರು 2154 ರನ್‌ ಗಳಿಸಿ ಅತೀಹೆಚ್ಚು ರನ್‌ ಗಳಿಸಿದ ಈ ವರ್ಷದ ಆಟಗಾರರಾಗಿದ್ದಾರೆ. ಇನ್ನುಳಿದ ಅಗ್ರ 10 ಆಟಗಾರರ ವಿವರಗಳನ್ನು ತಿಳಿಯಲು ಈ ಪಟ್ಟಿಯನ್ನು ಓದಿ.

Written by - Zee Kannada News Desk | Last Updated : Dec 29, 2023, 06:33 PM IST
  • 2023ರ ಅತ್ಯಧಿಕ ರನ್‌ಗಳಿಸಿದವರ ಪಟ್ಟಿ ಬಿಡುಗಡೆ ಮಾಡಿದ "ಐಸಿಸಿ"
  • ಅಗ್ರ ಎರಡೂ ಸ್ಥಾನವನ್ನು ಅಲಂಕರಿಸಿದ ಭಾರತೀಯ ಇಬ್ಬರು ಆಟಗಾರರು
  • ಶುಭ್ಮನ್‌ ಗಿಲ್‌ 2023ರ ಅತೀಹೆಚ್ಚು ರನ್‌ಗಳಿಸಿದ ಆಟಗಾರರಾಗಿದ್ಧಾರೆ
2023 ರ ಕ್ಯಾಲೆಂಡರ್‌ ವರ್ಷದಲ್ಲಿ "ಶುಭ್ಮನ್‌ ಗಿಲ್‌", "ವಿರಾಟ್‌ ಕೊಹ್ಲಿ"ಯೇ ಅತ್ಯಧಿಕ ರನ್‌ ಗೆಟ್ಟರ್ಸ್! ಭಾರತದ ಇಬ್ಬರು ಆಟಗಾರರಿಗೆ ಅಗ್ರಗಣ್ಯ ಸ್ಥಾನ title=

2023 most run getters :ದಕ್ಷಿಣ ಆಫ್ರಿಕಾ ವಿರುಧ್ದ ನಡೆದ ಮೊದಲ ಟೆಸ್ಟ್‌ ಪಂದ್ಯವನ್ನು ಸೋತ ಭಾರತಕ್ಕೆ ಇದು ಈ ವರ್ಷದ ಕೊನೆಯ ಪಂದ್ಯವಾಗಿದೆ. ಇದೇ ಬೆನ್ನಲ್ಲೆ ಅಂತರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಅತ್ಯಧಿಕ ರನ್‌ ಗಳಿಸಿದವರ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2023ರ ಮೂರು ಮಾದರಿಯ ಕ್ರಿಕೇಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದವರ ಪಟ್ಟಿಯಲ್ಲಿ ಮೂವರು ಭಾರತೀಯರು ಸ್ಥಾನ ಗಿಟ್ಟಿಸಿಕೊಂಡಿದ್ಧಾರೆ.

ಈ ಮಾದರಿಯಲ್ಲಿ ಇಬ್ಬರು ಆಟಗಾರರು ಮಾತ್ರ 2000ಕ್ಕೂ ಅಧಿಕ ರನ್‌ ಗಳಿಸಿದ್ಧಾರೆ. ಆ ಇಬ್ಬರು ಆಟಗಾರರು ಭಾರತೀಯರೆಂಬುದೇ ಹೆಮ್ಮೆಯ ವಿಷಯವಾಗಿದ್ದು, ಈ ಇಬ್ಬರು ಆಟಗಾರರು ಅಗ್ರ ಒಂದು ಮತ್ತು ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಮತ್ತು ಇನ್ನೊಬ್ಬ ಭಾರತೀಯ ಆಟಗಾರ ನಾಲ್ಕನೇ ಸ್ಥಾನದಲ್ಲಿ ಅತ್ಯಧಿಕ ರನ್‌ ಗಳಿಸಿದ ಆಟಗಾರನಾಗಿದ್ದಾನೆ.

ಇದನ್ನು ಓದಿ-ವಿರಾಟ್‌ ಕೊಹ್ಲಿ ಹೆಸರಿಗೆ ಇನ್ನೊಂದು ಹೊಸ ದಾಖಲೆ ಸೇರ್ಪಡೆ ! ಕ್ಯಾಲೆಂಡರ್‌ ವರ್ಷದಲ್ಲಿ 7 ಬಾರಿ 2000 ರನ್‌ ಬಾರಿಸಿದ ಏಕೈಕ ವ್ಯಕ್ತಿ.

 ಈ ಪಟ್ಟಿಯಲ್ಲಿ ಶುಭ್ಮನ್‌ ಗಿಲ್‌ ಸೇರಿದಂತೆ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ಹೆಸರು ಕಂಡು ಬಂದಿದೆ. ಶುಭ್ಮನ್‌ ಗಿಲ್‌ ಈ ವರ್ಷದ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ಗಳಿಸದ ಆಟಗಾರನಾಗಿದ್ಧಾನೆ. ವಿರಾಟ್‌ ಕೊಹ್ಲಿಯವರು ಈ ವರ್ಷ ಅತ್ಯದಿಕ ರನ್‌ ಗಳಿಸಿದ ಎರಡನೇ ಆಟಗಾರ ಆಗಿದ್ಧಾರೆ. ಮೂರನೆ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಆಟಗಾರ ಡ್ಯಾರಿಲ್‌ ಮಿಚೆಲ್‌ ಹೆಸರು ಕಂಡುಬಂದಿದ್ದು, ಈ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ನಾಲ್ಕನೇ ಅತ್ಯಧಿಕ ರನ್‌ ಗೆಟ್ಟರ್‌ ಆಗಿದ್ಧಾರೆ. 

ಈ ವರ್ಷ ಟೀಂ ಇಂಡಿಯಾ ಪರ ಹಲವಾರು ಪಂದ್ಯಗಳನ್ನು ಆಡಿರುವ ಓಪನರ್ ಶುಭ್ಮನ್‌ ಗಿಲ್‌ ಒಟ್ಟು 52 ಇನ್ನಿಂಗ್ಸ್‌ ಗಳಲ್ಲಿ 2154 ರನ್ ಗಳಿಸಿದ್ದು, ಮೊದಲನೇ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ಧಾರೆ. ಹಾಗೂ ಇವರ ಬ್ಯಾಟ್‌ ಮೂಲಕ ಈ ವರ್ಷ 7 ಶತಕಗಳು ಮತ್ತು 10 ಅರ್ಧ ಶತಕಗಳು ಬಂದಿವೆ. 46.82ರ ಸರಾಸರಿಯಲ್ಲಿ ಬ್ಯಾಟ್‌ ಮಾಡಿದ್ದು, 208 ಒಂದೆ ಪಂದ್ಯದಲ್ಲಿ ಬಂದಿರುವ ಅತ್ಯಧಿಕ ಸ್ಕೋರ್‌ ಆಗಿದೆ.

ಇದನ್ನು ಓದಿ-ಹರಿಣಗಳ ಬೌಲಿಂಗ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ ಗೆ ಇನಿಂಗ್ಸ್ ಸಹಿತ 32 ರನ್ಗಳ ಸೋಲು 

ಇನ್ನು ಎರಡನೇ ಸ್ಥಾನದಲ್ಲಿ ವಿರಾಟ್‌ ಕೊಹ್ಲಿ ಕೂಡ ಎರಡು ಸಾವಿರದ ರನ್‌ ಗಡಿಯನ್ನು ದಾಟಿದ್ದು, ಕೇವಲ 36 ಇನ್ನಿಂಗ್ಸ್‌ ಗಳಲ್ಲಿ 2048 ರನ್‌ಗಳಿಸಿದ್ಧಾರೆ. ಅಷ್ಟೇ ಅಲ್ಲದೇ 66.06ರ ಅತ್ಯಧಿಕ ಸರಾಸರಿಯನ್ನು ಹೊಂದಿದ್ದು, 8 ಶತಕಗಳನ್ನು ಮತ್ತು 10 ಅರ್ಧಶತಕಗಲನ್ನು ಈ ವರ್ಷ ಪೂರೈಸಿದ್ಧಾರೆ. ಇವರ ಬ್ಯಾಟ್‌ ಮೂಲಕ ಬಂದ 186 ರನ್‌ಗಳು ಇವರ ಅತ್ಯಧಿಕ ಸ್ಕೋರ್‌ ಆಗಿದೆ. 

ನ್ಯೂಜಿಲೆಂಡ್‌ ಆಟಗಾರ ಡ್ಯಾರಿಲ್‌ ಮಿಚೆಲ್‌ 54 ಇನ್ನಿಂಗ್ಸ್‌ಗಳಲ್ಲಿ 1988 ರನ್‌ ಗಲಿಸಿ ಮೂರನೇ ಆಟಗಾರನಾಗಿದ್ದು, ಭಾರತದ ತಂಡದ ನಾಯಕ ರೋಹಿತ್‌ ಶರ್ಮಾ ಅವರು ಕೇವಲ 39 ಇನ್ನಿಂಗ್ಸ್‌ಗಲ್ಲಿ 1800 ರನ್‌ಗಳಿಸಿ ನಂತರದ ನಾಲ್ಕನೇ ಸ್ಥಾನವನ್ನು ಅಲಂಕರಿಸದ್ದಾರೆ. 4 ಸೆಂಚೂರಿಗಳನ್ನು ಮತ್ತು 11 ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಟಾಪ್‌ 5 ರಲ್ಲಿ ಮೂವರು ಭಾರತೀಯ ಆಟಗಾರು ಅತ್ಯಧಿಕ ಸ್ಕೋರರ್‌ ಆಗಿ ಹೊರಹೊಮ್ಮಿದ್ಧಾರೆ.

2023ರ ಅತ್ಯಧಿಕ ರನ್‌ಗಳಿಸದ ಆಟಗಾರ ಪಟ್ಟಿ :

 ಶುಭ್ಮನ್‌ ಗಿಲ್‌ 2154 (52), ವಿರಾಟ್‌ ಕೊಹ್ಲಿ 2048 (36), ಡ್ಯಾರಿಲ್‌ ಮಿಚೆಲ್‌ 1988 (54), ರೋಹಿತ್‌ ಶರ್ಮಾ 1800 (39), ಟ್ರಾವಿಸ್‌ ಹೆಡ್‌ 1698 (42), ಕುಸಲ್‌ ಮೆಂಡೀಸ್‌ 1690 (46), ಹಸೈನ್‌ ಶಾಂಟೋ 1633 (43), ಮಾರ್ನಸ್‌ ಲಬುಶೇನ್‌ 1629 (45), ಮುಹಮ್ಮದ್‌ ವಾಸೀಮ್‌ 1588 (45), ಮಿಚೆಲ್‌ ಮಾರ್ಷ್‌ 1584 (33) ರನ್‌ ಕಲೆ ಹಾಕಿದ್ದು ಕ್ರಮವಾಗಿ ಒಂದರಿಂದ ಹತ್ತನೇ ಸ್ಥಾನವನ್ನು ಅಲಂಕರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News