ತಿಂಗಳೊಳಗೆ ಜಾಮೀನು ಸಿಗದಿದ್ದರೆ ಕ್ರಿಕೆಟಿಗ ಮೊಹಮ್ಮದ್ ಶಮಿ ಬಂಧನ..!

Mohammed Shami  Asia Cup 2023 : ಏಷ್ಯಾ ಕಪ್ 2023 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ನಡುವೆ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಹೊಸ ಟೆನ್ಷನ್‌ಗೆ ಸಿಲುಕಿದ್ದು, ಬಂಧನದ ಭೀತಿ ಎದುರಿಸುತ್ತಿದ್ದಾರೆ. 

Written by - Krishna N K | Last Updated : Aug 27, 2023, 01:11 PM IST
  • ಏಷ್ಯಾ ಕಪ್ 2023 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
  • ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಬಂಧನದ ಭೀತಿ ಶುರುವಾಗಿದೆ.
  • 30 ದಿನಗಳೊಳಗೆ ಶಮಿ ಜಾಮೀನು ಪಡೆಯುವಂತೆ ಕೋರ್ಟ್ ಆದೇಶಿಸಿದೆ.
ತಿಂಗಳೊಳಗೆ ಜಾಮೀನು ಸಿಗದಿದ್ದರೆ ಕ್ರಿಕೆಟಿಗ ಮೊಹಮ್ಮದ್ ಶಮಿ ಬಂಧನ..! title=

Mohammed Shami wife : ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿಗೆ ಪತ್ನಿ ಹಸೀನ್ ಜಹಾ ರೂಪದಲ್ಲಿ ಸಮಸ್ಯೆ ಹೆಚ್ಚಿದೆ. 30 ದಿನಗಳೊಳಗೆ ಶಮಿ ಜಾಮೀನು ಪಡೆಯುವಂತೆ ಕೋರ್ಟ್ ಆದೇಶಿಸಿದೆ. ಹಸೀನ್ ಜಾಹಾ ಶಮಿ ಮತ್ತು ಶಮಿ ಸಹೋದರನೊಂದಿಗೆ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. 

ಹೌದು.. ಮೊಹಮ್ಮದ್ ಶಮಿ ಮತ್ತು ಹಸಿನ್ ಜಹಾ ಅವರ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಈ ಸಂಬಂಧ ಇದೀಗ ಮುರಿದು ಬಿದ್ದಿದೆ. 2018 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಲ್ ಅವರು 2014 ರಲ್ಲಿ ಪ್ರೇಮ ವಿವಾಹವಾದರು. 

ಇದನ್ನೂ ಓದಿ: ಆಟಗಾರ್ತಿಯ ತುಟಿಗೆ ಚುಂಬಿಸಿದ್ದ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಸಸ್ಪೆಂಡ್..!

ಹಸೀನ್ ಜಹಾ ಮಾಡೆಲ್ ಆಗಿದ್ದರು. ಅಲ್ಲದೆ, ಕೆಕೆಆರ್ ತಂಡದಲ್ಲಿ ಚಿಯರ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. 2011ರಲ್ಲಿ ಶಮಿ ಹಸೀನ್‌ ಭೇಟಿಯಾಗಿದ್ದರು. ಭೇಟಿ ಸ್ನೇಹಕ್ಕೆ ತಿರುಗಿ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಅಲ್ಲದೆ, 2014ರಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಸಧ್ಯ ದೂರವಾಗಿದ್ದು, ಕೋರ್ಟ್‌ನಲ್ಲಿ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದಾರೆ.

ಏಷ್ಯಾಕಪ್ ನಂತರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಮತ್ತು ವಿಶ್ವಕಪ್ ಟೂರ್ನಿಗಳು ನಡೆಯಲಿವೆ. ಈ ನಡುವೆ ಮೊಹಮ್ಮದ್ ಶಮಿ ಕೆಲವೇ ತಿಂಗಳಲ್ಲಿ ಜಾಮೀನು ಪಡೆಯಬೇಕಿದೆ. ಇನ್ನು ಐದು ದಿನಗಳಲ್ಲಿ ಏಷ್ಯಾಕಪ್ 2023 ಆರಂಭವಾಗಲಿದ್ದು, ಮೊಹಮ್ಮದ್ ಶಮಿ ಟೆನ್ಷನ್ ಹೆಚ್ಚಿಸಿದೆ. ಏಷ್ಯಾ ಕಪ್ ಆಗಸ್ಟ್ 30 ರಿಂದ ಆರಂಭವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News