ಮಾಡೆಲ್ ಆತ್ಮಹತ್ಯೆ ಪ್ರಕರಣ: ಸ್ಟಾರ್ ಕ್ರಿಕೆಟಿಗನಿಗೆ ಸಮನ್ಸ್ ಜಾರಿ ಮಾಡಿದ ಪೊಲೀಸರು

Tania Singh Suicide: ತಾನಿಯಾ ಸಾವಿನಿಂದ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ತಮ್ಮ ತನಿಖೆ ಆರಂಭಿಸಿದ್ದಾರೆ. ಈ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಕ್ರಿಕೆಟಿಗ ಅಭಿಷೇಕ್ ಶರ್ಮಾ ಹೆಸರು ಭಾರೀ ಸುದ್ದಿಯಾಗುತ್ತಿದೆ.

Written by - Bhavishya Shetty | Last Updated : Feb 21, 2024, 05:24 PM IST
    • ಮಾಡೆಲ್ ತಾನಿಯಾ ಸಿಂಗ್ ಸಾವಿನ ಬಗ್ಗೆ ಅನುಮಾನ
    • ಯುವ ಕ್ರಿಕೆಟಿಗ ಮತ್ತು ತಾನಿಯಾ ಅವರ ಸಂಬಂಧವನ್ನು ತಿಳಿಯಲು ಪೊಲೀಸರಿಂದ ವಿಚಾರಣೆ
    • ತಾನಿಯಾ ಸಾವಿನಿಂದ ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ
ಮಾಡೆಲ್ ಆತ್ಮಹತ್ಯೆ ಪ್ರಕರಣ: ಸ್ಟಾರ್ ಕ್ರಿಕೆಟಿಗನಿಗೆ ಸಮನ್ಸ್ ಜಾರಿ ಮಾಡಿದ ಪೊಲೀಸರು title=
Model Tania Singh death Case

Tania Singh Suicide: ಸೂರತ್‌ನ ವೆಸು ರಸ್ತೆಯಲ್ಲಿರುವ ಹ್ಯಾಪಿ ಎಲಿಗನ್ಸ್ ಅಪಾರ್ಟ್‌ಮೆಂಟ್‌’ನಲ್ಲಿ ವಾಸಿಸುತ್ತಿದ್ದ 28 ವರ್ಷದ ಮಾಡೆಲ್ ತಾನಿಯಾ ಸಿಂಗ್ ಸಾವಿನ ಬಗ್ಗೆ ಇದೀಗ ಅನುಮಾನ ಭುಗಿಲೆದ್ದಿದೆ. ಈ ಪ್ರಸಿದ್ಧ ರೂಪದರ್ಶಿ ಕಳೆದ ಒಂದೂವರೆ ಎರಡು ವರ್ಷಗಳಿಂದ ಫ್ಯಾಷನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಮಾಡುತ್ತಿದ್ದರು. ಆದರೆ ಈಕೆ ಫೆಬ್ರವರಿ 20 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರ ಹಲವಾರು ಪ್ರಯೋಜನಗಳು!

ತಾನಿಯಾ ಸಾವಿನಿಂದ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ತಮ್ಮ ತನಿಖೆ ಆರಂಭಿಸಿದ್ದಾರೆ. ಈ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಕ್ರಿಕೆಟಿಗ ಅಭಿಷೇಕ್ ಶರ್ಮಾ ಹೆಸರು ಭಾರೀ ಸುದ್ದಿಯಾಗುತ್ತಿದೆ.

ಇದನ್ನೂ ಓದಿ:  ಸರ್ಫರಾಜ್, ಧ್ರುವ್ ಜುರೆಲ್ ಬೆನ್ನಲ್ಲೇ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಲು ಈ ವೇಗಿ ಸಿದ್ಧ

23 ವರ್ಷದ ಯುವ ಕ್ರಿಕೆಟಿಗ ಮತ್ತು ತಾನಿಯಾ ಅವರ ಸಂಬಂಧವನ್ನು ತಿಳಿಯಲು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ತಾನಿಯಾ ಅಭಿಷೇಕ್ ಶರ್ಮಾ ಜೊತೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ. ಅಭಿಷೇಕ್ ಶರ್ಮಾ ಅವರ ಕೊನೆಯ ಕರೆಯ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸಲು ಬಯಸಿದ್ದಾರೆ. ತಾನಿಯಾ ತನ್ನ ಕೊನೆಯ ಕರೆಯನ್ನು ಅಭಿಷೇಕ್ ಶರ್ಮಾಗೆ ಮಾಡಿದ್ದಳು ಎಂಬ ಅಂಶವೂ ಬಹಿರಂಗವಾಗಿದೆ. ಈ ವಿಚಾರ ಬಹಿರಂಗವಾಗಿರುವುದರಿಂದ ಇಬ್ಬರ ನಡುವೆ ಪ್ರೇಮ ಸಂಬಂಧ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News