ಭಾರತದಲ್ಲಿನ ಕ್ರಿಕೆಟ್ ಪಿಚ್ 'ಬೋರಿಂಗ್' ಎಂದ ವಾನ್! ಹೀಗಂದ್ರು ಫ್ಯಾನ್ಸ್

ಶುಕ್ರವಾರ ಪುಣೆಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ದ್ವಿಶತಕ ಈಗ ಭಾರತ ತಂಡವನ್ನು ಸುಸ್ಥಿತಿಯಲ್ಲಿರಿಸಿದೆ. 

Last Updated : Oct 11, 2019, 08:25 PM IST
ಭಾರತದಲ್ಲಿನ ಕ್ರಿಕೆಟ್ ಪಿಚ್ 'ಬೋರಿಂಗ್' ಎಂದ ವಾನ್! ಹೀಗಂದ್ರು ಫ್ಯಾನ್ಸ್ title=
file photo

ನವದೆಹಲಿ: ಶುಕ್ರವಾರ ಪುಣೆಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ದ್ವಿಶತಕ ಈಗ ಭಾರತ ತಂಡವನ್ನು ಸುಸ್ಥಿತಿಯಲ್ಲಿರಿಸಿದೆ. 

ಮೊದಲ ದಿನ ಆರಂಭಿಕ ಆಟಗಾರ ಮಯಾಂಕ್ ಆಗರ್ವಾಲ್ ಮಿಂಚಿದರೆ ಎರಡನೇ ದಿನ ನಾಯಕ ಕೊಹ್ಲಿ ದ್ವಿಶತಕದ ಮೂಲಕ ತಂಡ ಬೃಹತ್ ಮೊತ್ತ ಗಳಿಸಲು ಕಾರಣಕರ್ತರಾದರು. ಈಗ ಇಬ್ಬರು ಆಟಗಾರರ ಪ್ರದರ್ಶನ ಅಭಿಮಾನಿಗಳ ಮುಖದಲ್ಲಿ ಸಂತೋಷವನ್ನು ಉಂಟು ಮಾಡಿರುವ ಸಮಯದಲ್ಲಿ, ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಅವರು ಭಾರತದ ಟೆಸ್ಟ್ ಪಂದ್ಯದ ಪಿಚ್‌ಗಳು ಮೊದಲ ಮೂರು-ನಾಲ್ಕು ದಿನಗಳ ಕಾಲ ಬ್ಯಾಟ್ಸ್‌ಮನ್‌ಗಳತ್ತ ಒಲವು ತೋರುತ್ತಿರುವುದರಿಂದ ನೀರಸ ಎಂದು ಕರೆದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಭಾರತೀಯ ಅಭಿಮಾನಿಗಳು ವಾನ್ ಅವರನ್ನು ಟ್ರೋಲ್ ಮಾಡಿದ್ದಾರೆ. ಅಲ್ಲದೆ ಇಂಗ್ಲೆಂಡ್ ನಲ್ಲಿ ಮಳೆಯಿಂದ ಪಂದ್ಯಗಳು ರದ್ದುಗೊಳ್ಳುತ್ತಿರುವುದನ್ನು ನೆನಪಿಸಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಅಭಿಮಾನಿಗಳು ಅಶೀಸ್ ಸರಣಿ ಹಾಗೂ ವಿಶ್ವಕಪ್ ಟೂರ್ನಿಗಳನ್ನು ನೀಡಿದ್ದಾರೆ.
 

Trending News