Rohit Sharma : RCBಗೆ ರೋಹಿತ್‌ ಶರ್ಮಾ..! ಈ ಸಲ ಕಪ್‌ ನಮ್ದೆ ಎಂತಿದ್ದಾರೆ ಫ್ಯಾನ್ಸ್‌  

Rohit Sharma RCB : ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ರೋಹಿತ್‌ರನ್ನು ನಡೆಸಿಕೊಂಡ ಪರಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಸದ್ಯ ರೋಹಿತ್‌ ಶರ್ಮಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.. ಆದರೆ ರೋಹಿತ್‌ ಅಭಿಮಾನಿಗಳು ಮಾತ್ರ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಮುಂಬೈ ಇಂಡಿಯನ್ಸ್‌ ನಡೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ. ಇದು ಒಂದು ಭಾಗವಾದ್ರೆ ರೋಹಿತ್‌ ಮುಂಬೈ ಇಂಡಿಯನ್ಸ್‌ ಪರವಾಗಿ ಆಡಬಾರದು ಎಂಬ ಕೂಗು ಕೇಳಿ ಬರುತ್ತಿದೆ. 

Written by - Krishna N K | Last Updated : Dec 17, 2023, 08:25 PM IST
  • ಮುಂಬೈ ಇಂಡಿಯನ್ಸ್‌ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ನಾಯಕನಾಗಿ ಆಯ್ಕೆ.
  • ಆರ್‌ಸಿಬಿ ತಂಡ ಸೇರಿಕೊಳ್ಳುತ್ತಾರಂತೆ ರೋಹಿತ್‌ ಶರ್ಮಾ.
  • ರೋಹಿತ್‌ ಶರ್ಮಾ ಆರ್‌ಸಿಬಿ ಪರ ಆಡಿದ್ರೆ ಕಪ್‌ ಗ್ಯಾರಂಟಿ.
Rohit Sharma : RCBಗೆ ರೋಹಿತ್‌ ಶರ್ಮಾ..! ಈ ಸಲ ಕಪ್‌ ನಮ್ದೆ ಎಂತಿದ್ದಾರೆ ಫ್ಯಾನ್ಸ್‌   title=

Rohit sharma join RCB : ಮುಂಬೈ ಇಂಡಿಯನ್ಸ್‌ ಬಿಟ್ಟು ಬೇರೆ ತಂಡಕ್ಕೆ ಆಡಲಿ ಎಂಬ ಬಯಕೆಯನ್ನು ರೋಹಿತ್‌ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಹಿತ್ ಶರ್ಮಾರನ್ನು ಟ್ರೇಡ್​ ಮಾಡಿಕೊಳ್ಳಲು ಮುಂಬೈ ಇಂಡಿಯನ್ಸ್​ ಜೊತೆ ಮಾತುಕತೆ ನಡೆಸಿದ್ದರೂ ಸಹ ಅದು ಯಶಸ್ವಿಯಾಗಿಲ್ಲ. ಆದರೆ ಮತ್ತೊಂದು ಕಡೆ ರೋಹಿತ್‌ ಶರ್ಮಾ ಐಪಿಎಲ್‌ನ ಈ ತಂಡಕ್ಕೆ ಬರಬೇಕು ಎಂದು ಹೆಚ್ಚಿನ ಕ್ರಿಕೆಟ್‌ ಫ್ಯಾನ್ಸ್‌ ಒತ್ತಾಯಿಸುತ್ತಿದ್ದಾರೆ.

2009 ರಲ್ಲಿ ಐಪಿಎಲ್‌ ಆರಂಭವಾದ್ರೂ ಸಹ ಇಲ್ಲಿಯವರೆಗೂ ಒಂದೇ ಒಂದು ಕಪ್‌ ಗೆಲ್ಲದ ಆರ್‌ಸಿಬಿ ಪರವಾಗಿ ರೋಹಿತ್‌ ಆಡಬೇಕು ಎಂದು ಅಭಿಮಾನಿಗಳು ಸೋಷಿಯಲ್‌ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದಾರೆ. ಕೆಲವರಂತೂ ರೋಹಿತ್‌ ಶರ್ಮಾ ಆರ್‌ಸಿಬಿ ಪರ ಆಡಿದ್ದಾರೆ ಕಪ್‌ ನಮ್ದೆ ಎನ್ನುತ್ತಿದ್ದಾರೆ. ಇತ್ತ ನಾಯಕತ್ಷ ಕಳೆದುಕೊಂಡಿರುವ ರೋಹಿತ್‌ ಶರ್ಮಾ ಯಾವ ತಂಡದ ಪರ ಆಡುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. 

ಇದನ್ನೂ ಓದಿ: ನಾಯಕತ್ವ ಕಳೆದುಕೊಂಡ ರೋಹಿತ್‌ ಶರ್ಮಾ..! ಮುಂಬೈ ಇಂಡಿಯನ್ಸ್‌ ಪರ ಆಡೋದು ಡೌಟ್‌

ಆದರೆ ಆರ್‌ಸಿಬಿ ಫ್ಯಾನ್‌ಗಳು ಮಾತ್ರ ರೋಹಿತ್‌ ನಮ್ಮ ತಂಡದ ಪರ ಆಡಲಿ ಅಂತಾ ಹಿಟ್‌ಮ್ಯಾನ್‌ ಆರ್‌ಸಿನಿ ಜೆರ್ಸಿ ಧರಿಸಿರುವಂತೆ ಫೋಟೋ ಎಡಿಟ್‌ ಮಾಡಿ ಪೋಸ್ಟ್‌ ಮಾಡುತ್ತಿದ್ದಾರೆ. ಆರ್‌ಸಿಬಿ ಕಪ್‌ ಗೆಲ್ಲಲು ಹಿಟ್‌ಮ್ಯಾನ್‌ ತಂಡಕ್ಕೆ ಬರಬೇಕು ಎನ್ನುತ್ತಿದ್ದಾರೆ.. ಯಾಕೆಂದ್ರೆ ರೋಹಿತ್‌ ಶರ್ಮಾ 5 ಬಾರಿ ಮುಂಬೈ ಇಂಡಿಯನ್ಸ್‌ ಕಪ್‌ ಗೆಲ್ಲಲು ನಾಯಕನ ಪಾತ್ರ ವಹಿಸಿದ್ದಾರೆ.. ಹೀಗಾಗಿ ಆರ್‌ಸಿಬಿ ಪರ ಆಡಿದ್ರೆ ಅದೃಷ್ಠ  ಬದಲಾಗಿ ಕಪ್‌ ಗೆಲ್ಲಬಹುದು ಎಂಬುದು ಅಭಿಮಾನಿಗಳ ಲೆಕ್ಕಚಾರವಾಗಿದೆ..

ಅದೆನೇ ಇರ್ಲಿ.ಡಿಸೆಂಬರ್ 19 ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಡಿಸೆಂಬರ್ 20 ರಂದು ಟ್ರೇಡ್ ವಿಂಡೋ ಮತ್ತೆ ಓಪನ್ ಆಗಲಿದೆ. ಈ ಟ್ರೇಡ್‌ ವಿಂಡೋದಲ್ಲಿ ರೋಹಿತ್‌ ಶರ್ಮಾರನ್ನು ಆರ್‌ಸಿಬಿ ಫ್ರಾಂಚೈಸಿ ಟ್ರೇಡ್‌ ಮಾಡಿಕೊಳ್ಳಲಿ ಎಂಬುದೇ ಆರ್‌ಸಿಬಿ ಅಭಿಮಾನಿಗಳ ಆಶಯವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News