ನವದೆಹಲಿ: ಇಂಡಿಯನ್ ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗ ಎಂಬ ಸುದ್ದಿ ಹೊರಬೀದಿದ್ದೆ. 'ಗಾಡ್ ಆಫ್ ಕ್ರಿಕೆಟರ್ ಈಗ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರೆ. ಅವರ ಒಟ್ಟು ಆಸ್ತಿ ಮೌಲ್ಯ 1090 ಕೋಟಿ ರೂಪಾಯಿ. ಅಲ್ಲದೆ, ಸಧ್ಯ ವಿವಿಧ ಬ್ರಾಂಡ್ ಗಳ ಅಂಬಾಸಿಡರ್ ಆಗಿದ್ದರೆ. ಅಲ್ಲದೆ ಅವುಗಳ ಪ್ರಾಯೋಜಕತ್ವದಿಂದ ಕೂಡ ಹಣ ಸಂಪಾದಿಸುತ್ತಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಒಬ್ಬರು. ಧೋನಿ ನಾಯಕತ್ವದಲ್ಲಿ, ಭಾರತೀಯ ಕ್ರಿಕೆಟ್ ತಂಡವು ಎರಡು ಏಷ್ಯಾ ಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಸಿಸಿ ಟಿ 20 ವಿಶ್ವಕಪ್ ಮತ್ತು 2011 ರ ಪ್ರತಿಷ್ಠಿತ ಕ್ರಿಕೆಟ್ ವಿಶ್ವಕಪ್ ಗೆದ್ದಿದೆ. ಎಂಎಸ್ ಧೋನಿ ಅವರು ಒಟ್ಟು 767 ಕೋಟಿ ರೂ.ಗಳ ಆಸ್ತಿ ಹೊಂದಿರುವ ವಿಶ್ವದ 2 ನೇ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ : MI vs RCB IPL 2021: 'ಭಾರತದ ಅತೀ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಬೇಕೆಂಬ ಕನಸಿದೆ'
ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ(Virat Kohli) ಪ್ರಸ್ತುತ ಪೀಳಿಗೆಯ ಅತ್ಯಂತ ಜನಪ್ರಿಯ ಕ್ರಿಕೆಟರ್. ಕೊಹ್ಲಿ ಫ್ಯಾಶನ್ ಬ್ರಾಂಡ್‌ಗಳಾದ ರೊಗ್ನ್ ಮತ್ತು ಒನ್ 8 (ಪೂಮಾ ಜೊತೆ ಪಾಲುದಾರಿಕೆ)ನಲ್ಲಿ ಹೊಂದಿದ್ದಾರೆ. ಫೋರ್ಬ್ಸ್‌ನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಏಕೈಕ ಕ್ರಿಕೆಟ್ ಆಟಗಾರ ಎಂದರೆ ಅದು ವಿರಾಟ್ ಕೊಹ್ಲಿ. ಇವರು ಒಟ್ಟು 638 ಕೋಟಿ ರೂ. ಆಸ್ತಿಯನ್ನು ಹೊಂದಿರುವ ವಿಶ್ವದ 3 ನೇ ಶ್ರೀಮಂತ ಕ್ರಿಕೆಟಿಗ ಎಂದು ಕರಿಸಿಕೊಂಡಿದ್ದಾರೆ.
ಇದನ್ನೂ ಓದಿ : IPL 2021: MS Dhoni ಸಿಎಸ್‌ಕೆ ಬಗ್ಗೆ ಭವಿಷ್ಯ ನುಡಿದ ಗೌತಮ್ ಗಂಭೀರ್
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್(Ricky Ponting) ಅವರು 2012 ರಲ್ಲಿ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ್ದಾರೆ. ರಿಕಿ ಪಾಂಟಿಂಗ್ ವಿಶ್ವದ 4 ನೇ ಶ್ರೀಮಂತ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 500 ಕೋಟಿ ರೂ. ಎಂದು ತಿಳಿದು ಬಂದಿದೆ.
ಇದನ್ನೂ ಓದಿ : IPL 2021 Digital Broadcasting Rights ಖರೀದಿಸಿದ YuppTV, ಸುಮಾರು 100 ದೇಶಗಳಲ್ಲಿ IPL 2021 ಪ್ರಸಾರ
ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ(Brian Lara) ವಿಶ್ವದ 5 ನೇ ಶ್ರೀಮಂತ ಕ್ರಿಕೆಟಿಗ ಅಂಬಾ ಪಟ್ಟಕ್ಕೆ ಬಾಜಿನರಾಗಿದ್ದರೆ. ಇವರ ಒಟ್ಟು ಆಸ್ತಿ ಮೌಲ್ಯ 415 ಕೋಟಿ ರೂ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : IPL ಮೇಲೆ ಕರೋನಾ ಕಾರ್ಮೋಡ, ಆರ್‌ಸಿಬಿಯ ಸ್ಟಾರ್ ಕ್ರಿಕೆಟಿಗನಿಗೆ ಕರೋನಾ ದೃಢ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.