2011ರಲ್ಲಿ ವಿಶ್ವಕಪ್ ಗೆದ್ದಿದ್ದು ಧೋನಿಯಿಂದಲ್ಲ, ಈ ಆಟಗಾರರ ಬ್ಯಾಟಿಂಗ್-ಬೌಲಿಂಗ್’ನಿಂದ…!

Gautam Gambhir On World Cup 2011: 2011ರ ವಿಶ್ವಕಪ್‌’ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಪ್ರಶಸ್ತಿ ಗೆದ್ದಿತ್ತು. ಭಾರತ ಫೈನಲ್‌’ನಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದು, ಈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿತ್ತು.

Written by - Bhavishya Shetty | Last Updated : Aug 26, 2023, 11:22 AM IST
    • 2011ರ ವಿಶ್ವಕಪ್‌’ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಪ್ರಶಸ್ತಿ ಗೆದ್ದಿತ್ತು.
    • “ಧೋನಿಯ ಆ ಒಂದು ಸಿಕ್ಸರ್ ಬಗ್ಗೆ ಮಾಧ್ಯಮಗಳು ಮಾತನಾಡುತ್ತಲೇ ಇರುತ್ತವೆ”
    • ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
2011ರಲ್ಲಿ ವಿಶ್ವಕಪ್ ಗೆದ್ದಿದ್ದು ಧೋನಿಯಿಂದಲ್ಲ, ಈ ಆಟಗಾರರ ಬ್ಯಾಟಿಂಗ್-ಬೌಲಿಂಗ್’ನಿಂದ…! title=
Gautam Gambhir on 2011 World Cup

Gautam Gambhir On World Cup 2011: ವಿಶ್ವಕಪ್ 2023 ಹತ್ತಿರವಾಗುತ್ತಿದೆ. ಅಕ್ಟೋಬರ್ 5 ರಿಂದ ಟೂರ್ನಿ ಆರಂಭವಾಗಲಿದ್ದು, ಈ ಮಧ್ಯೆ 2011ರ ವಿಶ್ವಕಪ್‌’ನ ಭಾಗವಾಗಿದ್ದ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್, ಶಾಕಿಂಗ್ ಹೇಳಿಕೆ ನೀಡಿದ್ದಾರೆ. ”2011 ರ ಎಲ್ಲಾ ಆಟಗಾರರಿಗೆ ವಿಶ್ವಕಪ್ ಗೆಲುವಿನ ಕ್ರೆಡಿಟ್ ಸಿಕ್ಕಿಲ್ಲ, ಧೋನಿಯ ಒಂದು ಸಿಕ್ಸರ್ ಬಗ್ಗೆ ಮಾತ್ರ ಮಾತನಾಡಲಾಗಿದೆ. ನೀವು ತಂಡವನ್ನು ಮರೆತಿದ್ದೀರಿ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಆಟಗಾರ ಏಷ್ಯಾಕಪ್‌ನಲ್ಲಿ ಇರಬೇಕಿತ್ತು : ಹರ್ಭಜನ್‌ ಸಿಂಗ್‌

2011ರ ವಿಶ್ವಕಪ್‌’ನಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಪ್ರಶಸ್ತಿ ಗೆದ್ದಿತ್ತು. ಭಾರತ ಫೈನಲ್‌’ನಲ್ಲಿ ಶ್ರೀಲಂಕಾವನ್ನು ಸೋಲಿಸಿದ್ದು, ಈ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿತ್ತು. ಇದರಲ್ಲಿ ಅಂದಿನ ಭಾರತೀಯ ನಾಯಕ ತಂಡ ಧೋನಿ ಗೆಲುವಿನ ಸಿಕ್ಸರ್ ಬಾರಿಸಿದ್ದರು.

'ರೆವ್‌’ಸ್ಪೋರ್ಟ್ಸ್' ಜೊತೆ ಮಾತನಾಡಿದ ಗೌತಮ್ ಗಂಭೀರ್, "2011 ರ ವಿಶ್ವಕಪ್‌ ವಿಚಾರದಲ್ಲಿ ಯುವರಾಜ್ ಸಿಂಗ್‌ಗೆ ಸಾಕಷ್ಟು ಕ್ರೆಡಿಟ್ ನೀಡಲಿಲ್ಲ. ಜಹೀರ್, ರೈನಾ, ಮುನಾಫ್ ಕೂಡ ಈ ಗುಂಪಲ್ಲಿ ಇದ್ದಾರೆ. ಸಚಿನ್ ಅವರು ಅಗ್ರ ರನ್-ಸ್ಕೋರರ್ ಆಗಿದ್ದರು, ಆದರೆ ನಾವು ಏನು ಮಾತನಾಡುತ್ತಿದ್ದೇವೆ? ಧೋನಿಯ ಆ ಒಂದು ಸಿಕ್ಸರ್ ಬಗ್ಗೆ ಮಾಧ್ಯಮಗಳು ಮಾತನಾಡುತ್ತಲೇ ಇರುತ್ತವೆ. ನೀವು ಕೇವಲ ಒಂದೇ ಒಂದು ಸಿಕ್ಸರ್ ಬಗ್ಗೆ ಹುಚ್ಚರಾಗಿದ್ದೀರಿ, ನೀವು ತಂಡವನ್ನು ಮರೆತುಬಿಡುತ್ತಿದ್ದೀರಿ” ಎಂದು ‘ಗಂಭೀರ’ ಹೇಳಿಕೆ ನೀಡಿದ್ದಾರೆ.

2011ರಲ್ಲಿ ಟೀಂ ಇಂಡಿಯಾ ಕೊನೆಯ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಇದರ ನಂತರ, 2015 ಮತ್ತು 2019 ರ ವಿಶ್ವಕಪ್‌’ಗಳಲ್ಲಿ, ತಂಡವು ಕ್ರಮವಾಗಿ ಸೆಮಿಫೈನಲ್‌’ನಿಂದ ಹೊರಗುಳಿಯಬೇಕಾಯಿತು. ಈ ಬಾರಿಯ ವಿಶ್ವಕಪ್‌ ನಲ್ಲಿ ಮತ್ತೊಮ್ಮೆ ಅಬ್ಬರಿಸಿ ಟ್ರೋಫಿ ಗೆಲ್ಲುವುದು ಟೀಂ ಇಂಡಿಯಾದ ಕನಸಾಗಿದೆ. ಈ ಬಾರಿ ಭಾರತ ತಂಡ ರೋಹಿತ್ ಶರ್ಮಾ ನಾಯಕತ್ವದಲ್ಲಿ ವಿಶ್ವಕಪ್‌ಗೆ ಅಖಾಡಕ್ಕಿಳಿಯಲಿದೆ.

ಇದನ್ನೂ ಓದಿ: “ಭಾರತದ ಈ ಕ್ರಿಕೆಟಿಗನೆಂದರೆ ತುಂಬಾ ಇಷ್ಟ, ಈತನಲ್ಲಿ ನನ್ನನ್ನು ನಾನು ಕಂಡೆ”: ಸರ್ವಶೇಷ್ಠ ದಿಗ್ಗಜ ವಿವಿಯನ್ ರಿಚರ್ಡ್ಸ್

ಅಕ್ಟೋಬರ್ 5 ರಿಂದ ಟೂರ್ನಿ ಆರಂಭವಾಗಲಿದೆ. ಟೀಂ ಇಂಡಿಯಾ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಅದೇ ಸಮಯದಲ್ಲಿ, ವಿಶ್ವಕಪ್‌’ನ ಫೈನಲ್ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ. ಟೂರ್ನಿಯ ಅಂತಿಮ ಹಾಗೂ ಮೊದಲ ಪಂದ್ಯ ಅಹಮದಾಬಾದ್‌’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News