40 ಕೋಟಿ ರೂ ಬಾಕಿ ತೀರಿಸುವಂತೆ ಕೋರಿ ಅಮ್ರಪಾಲಿ ಗ್ರೂಪ್ ವಿರುದ್ದ ಸುಪ್ರೀಂಗೆ ಧೋನಿ ದೂರು

40 ಕೋಟಿ ರೂಗಳ ಬಾಕಿ ಹಣವನ್ನು ಅಮ್ರಾಪಾಲಿ ಗ್ರೂಪ್ ಗೆ ಪಾವತಿ ಮಾಡುವಂತೆ  ನಿರ್ದೇಶನ ನೀಡಲು ಭಾರತದ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಈಗ ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.

Last Updated : Mar 27, 2019, 03:21 PM IST
40 ಕೋಟಿ ರೂ ಬಾಕಿ ತೀರಿಸುವಂತೆ ಕೋರಿ ಅಮ್ರಪಾಲಿ ಗ್ರೂಪ್ ವಿರುದ್ದ ಸುಪ್ರೀಂಗೆ ಧೋನಿ ದೂರು title=

ನವದೆಹಲಿ: 40 ಕೋಟಿ ರೂಗಳ ಬಾಕಿ ಹಣವನ್ನು ಅಮ್ರಾಪಾಲಿ ಗ್ರೂಪ್ ಗೆ ಪಾವತಿ ಮಾಡುವಂತೆ  ನಿರ್ದೇಶನ ನೀಡಲು ಭಾರತದ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಈಗ ಸುಪ್ರೀಂಕೋರ್ಟ್ ಗೆ ಮನವಿ ಮಾಡಿಕೊಂಡಿದ್ದಾರೆ.

ಧೋನಿ ಈ ಹಿಂದೆ ಅಮ್ರಾಪಾಳಿ ಗ್ರೂಪ್ ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ನಂತರ 2016 ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಆಮ್ರಾಪಾಲಿ ಹೌಸಿಂಗ್ ಪ್ರೊಜೆಕ್ಟ್ ಬಗ್ಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಧೋನಿ ರಾಜೀನಾಮೆ ನೀಡಿದ್ದರು.ಆಗ ಕಂಪನಿ ಸುಮಾರು 40 ಕೋಟಿ ರೂ ಗಳನ್ನು ಕಂಪನಿ ಪಾವತಿಸಬೇಕಾಗಿತ್ತು.ಈಗ ಅದು ಪಾವತಿಸುವಲ್ಲಿ ವಿಳಂಭ ಧೋರಣೆಯನ್ನು ಅನುಸರಿಸುತ್ತಿರುವ ಹಿನ್ನಲೆಯಲ್ಲಿ ಧೋನಿ ಸುಪ್ರೀಂಗೆ ಮೊರೆಹೋಗಿದ್ದಾರೆ.

ಈ ಹಿಂದೆ ಪ್ರೊಜೆಕ್ಟ್ ನ ನಿವಾಸಿಗಳು ಟ್ವಿಟ್ಟರ್ ನಲ್ಲಿ ಈ ಕಂಪನಿ ವಿರುದ್ಧ ಸಾಕಷ್ಟು ಟ್ರೋಲ್ ಮಾಡಿದ್ದರು, ಅಲ್ಲದೆ ಈ ಕಂಪನಿ ರಾಯಭಾರಿ ಸ್ಥಾನದಿಂದ ಹಿಂದೆ ಸರಿಯುವಂತೆ ಧೋನಿಯವರಿಗೆ ಮನವಿ ಮಾಡಿಕೊಂಡಿದ್ದರು.ಈ ಹಿನ್ನಲೆಯಲ್ಲಿ ಧೋನಿ ಈ ಕಂಪನಿಯಿಂದ ದೂರ ಉಳಿದಿದ್ದರು.

Trending News