Asian Boxing Championship: ಭಾರತೀಯ ಬಾಕ್ಸರ್ ಮೇರಿ ಕೋಮ್ ಗೆ ಬೆಳ್ಳಿ ಪದಕ

ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ ಕಜಕಿಸ್ತಾನದ ನಾಜಿಮ್ ಕಿಜೈಬೆ ವಿರುದ್ಧ ಸೋಲು ಅನುಭವಿಸಿದ ನಂತರ ಬೆಳ್ಳಿಗೆ ತೃಪ್ತಿಪಟ್ಟರು.

Last Updated : May 31, 2021, 05:59 AM IST
  • ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ ಕಜಕಿಸ್ತಾನದ ನಾಜಿಮ್ ಕಿಜೈಬೆ ವಿರುದ್ಧ ಸೋಲು ಅನುಭವಿಸಿದ ನಂತರ ಬೆಳ್ಳಿಗೆ ತೃಪ್ತಿಪಟ್ಟರು.
Asian Boxing Championship: ಭಾರತೀಯ ಬಾಕ್ಸರ್ ಮೇರಿ ಕೋಮ್ ಗೆ ಬೆಳ್ಳಿ ಪದಕ  title=

ನವದೆಹಲಿ: ದುಬೈನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 51 ಕೆಜಿ ವಿಭಾಗದ ಫೈನಲ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ ಕಜಕಿಸ್ತಾನದ ನಾಜಿಮ್ ಕಿಜೈಬೆ ವಿರುದ್ಧ ಸೋಲು ಅನುಭವಿಸಿದ ನಂತರ ಬೆಳ್ಳಿಗೆ ತೃಪ್ತಿಪಟ್ಟರು.

ಎರಡು ಬಾರಿ ವಿಶ್ವ ಚಾಂಪಿಯನ್ ವಿರುದ್ಧ ಹೋರಾಡಿದ ಅವರು  2-3 ಅಂತರದಲ್ಲಿ ಸೋತರು.ಏಷ್ಯನ್ ಸರ್ಕ್ಯೂಟ್ನಲ್ಲಿ ಇದು ಭಾರತದ ಎರಡನೇ ಬೆಳ್ಳಿ ಪದಕವಾಗಿದೆ ಮತ್ತು ಹಿಂದಿನ ಸಂದರ್ಭಗಳಲ್ಲಿ ಈಗಾಗಲೇ ಐದು ಚಿನ್ನವನ್ನು ಗಳಿಸಿದೆ.

ಇದನ್ನೂ ಓದಿ: ಬಿಂದ್ರಾಗೆ ಬಾಕ್ಸಿಂಗ್‌ ಬಗ್ಗೆ ಏನೂ ಗೊತ್ತಿಲ್ಲ, ಆದ್ದರಿಂದ ಸುಮ್ಮನಿರುವುದು ಒಳ್ಳೆಯದು- ಮೇರಿ ಕೋಮ್

ತನಗೆ ಹನ್ನೊಂದು ವರ್ಷ ಕಿರಿಯ ವಯಸ್ಸಿನ ಎದುರಾಳಿಯ ವಿರುದ್ಧ, 38 ವರ್ಷದ ಮೇರಿಕೊಮ್ (Mary Kom) ಉತ್ತಮ ಆರಂಭವನ್ನು ಮಾಡಿದ್ದರು, ಆದರೆ ಸ್ಪರ್ಧೆಯು ಮುಂದುವರೆದಂತೆ ಆವೇಗವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾದರು. ಆರಂಭಿಕ ಸುತ್ತನ್ನು ಆರಾಮವಾಗಿ ಗೆದ್ದುಕೊಂಡರು ಸಹಿತ, ನಂತರದ ಸುತ್ತಿನಲ್ಲಿ ಅವರು ನಿರಾಸೆ ಅನುಭವಿಸಿದರು.ಮೇರಿ ಮೂರನೇ ಮತ್ತು ಅಂತಿಮ ಸುತ್ತಿನಲ್ಲಿ ಸ್ವಲ್ಪ ತೀವ್ರತೆಯನ್ನು ತೋರಿಸಿದರು, ಆದರೆ ಎದುರಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ವಿಫಲರಾದರು

ಮೇರಿಕೊಮ್ 5,000 ಡಾಲರ್ ಬಹುಮಾನವನ್ನು ಪಡೆದರೆ, ಕಿಜೈಬೇ 10,000 ಯುಎಸ್ಡಿ ನ್ನು ಗಳಿಸಿದರು.ಕಿಜೈಬೇ ಎರಡು ಬಾರಿ ವಿಶ್ವ ಚಾಂಪಿಯನ್ ಮತ್ತು ಆರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ.

ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌: ಸೆಮಿಫೈನಲ್ ನಲ್ಲಿ ಸೋತ ಮೇರಿ ಕೋಮ್

ಇನ್ನೊಂದೆಡೆಗೆ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪೂಜಾ ರಾಣಿ 75 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News