Cricketer Death: ಕ್ರಿಕೆಟ್ ಜಗತ್ತಿಗೆ ಆಘಾತ… ಜಗತ್ತಿನ ಶ್ರೇಷ್ಠ ಟೆಸ್ಟ್ ಆಲ್’ರೌಂಡರ್ ನಿಧನ

Mike Proctor passed away: ಮೈಕ್ ಪ್ರಾಕ್ಟರ್ ಅವರು ಆಸ್ಟ್ರೇಲಿಯಾ ವಿರುದ್ಧ ಆಡಿದ ಏಳು ಟೆಸ್ಟ್ ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದ್ದರು. ಮೈಕ್ ಪ್ರಾಕ್ಟರ್ ಅವರ ಅಂತರಾಷ್ಟ್ರೀಯ ವೃತ್ತಿಜೀವನದ ಅಂತ್ಯದ ಮೊದಲು ಕೇವಲ 15.02 ಸರಾಸರಿಯಲ್ಲಿ 41 ವಿಕೆಟ್’ಗಳನ್ನು ಪಡೆದಿದ್ದರು.

Written by - Bhavishya Shetty | Last Updated : Feb 18, 2024, 12:33 PM IST
    • ದಕ್ಷಿಣ ಆಫ್ರಿಕಾದ ಶ್ರೇಷ್ಠ ಕ್ರಿಕೆಟಿಗ ಮೈಕ್ ಪ್ರಾಕ್ಟರ್ ನಿಧನ
    • ದಕ್ಷಿಣ ಆಫ್ರಿಕಾ ಪರ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದ ಪ್ರಾಕ್ಟರ್
    • ಆಸ್ಟ್ರೇಲಿಯಾ ವಿರುದ್ಧ ಆಡಿದ ಏಳು ಟೆಸ್ಟ್ ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದ್ದರು
Cricketer Death: ಕ್ರಿಕೆಟ್ ಜಗತ್ತಿಗೆ ಆಘಾತ… ಜಗತ್ತಿನ ಶ್ರೇಷ್ಠ ಟೆಸ್ಟ್ ಆಲ್’ರೌಂಡರ್ ನಿಧನ title=
mike proctor death

Mike Proctor passed away: ದಕ್ಷಿಣ ಆಫ್ರಿಕಾದ ಶ್ರೇಷ್ಠ ಕ್ರಿಕೆಟಿಗ ಮೈಕ್ ಪ್ರಾಕ್ಟರ್ ಅವರು 77 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಐಸಿಸಿ ವರದಿಯ ಪ್ರಕಾರ, ಮೈಕ್ ಪ್ರಾಕ್ಟರ್ ಅವರ ಪತ್ನಿ ಮರೀನಾ ಶನಿವಾರ ತಡರಾತ್ರಿ ದಕ್ಷಿಣ ಆಫ್ರಿಕಾದ ಮಾಧ್ಯಮಗಳಿಗೆ ಈ ಮಾಹಿತಿಯನ್ನು ನೀಡಿದ್ದಾರೆ. ಪ್ರಾಕ್ಟರ್ 1970ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ನಿಷೇಧಕ್ಕೊಳಗಾಗುವ ಮುನ್ನ ದಕ್ಷಿಣ ಆಫ್ರಿಕಾ ಪರ ಏಳು ಟೆಸ್ಟ್ ಪಂದ್ಯಗಳನ್ನು ಆಡಿದ್ದರು.

ಇದನ್ನೂ ಓದಿ: White Hair Remedy : ಈ ತರಕಾರಿಯಲ್ಲ ಇದರ ಸಿಪ್ಪೆಯೇ ಸಾಕು ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಲು

ಮೈಕ್ ಪ್ರಾಕ್ಟರ್ ಅವರು ಆಸ್ಟ್ರೇಲಿಯಾ ವಿರುದ್ಧ ಆಡಿದ ಏಳು ಟೆಸ್ಟ್ ಪಂದ್ಯಗಳಲ್ಲಿ ಆರರಲ್ಲಿ ಗೆದ್ದಿದ್ದರು. ಮೈಕ್ ಪ್ರಾಕ್ಟರ್ ಅವರ ಅಂತರಾಷ್ಟ್ರೀಯ ವೃತ್ತಿಜೀವನದ ಅಂತ್ಯದ ಮೊದಲು ಕೇವಲ 15.02 ಸರಾಸರಿಯಲ್ಲಿ 41 ವಿಕೆಟ್’ಗಳನ್ನು ಪಡೆದಿದ್ದರು. ಪೋರ್ಟ್ ಎಲಿಜಬೆತ್‌’ನಲ್ಲಿ ಅವರ ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್‌’ನಲ್ಲಿ 73 ರನ್‌’ಗಳಿಗೆ 6 ವಿಕೆಟ್‌ ಕಬಳಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.

ಮೈಕ್ ಪ್ರಾಕ್ಟರ್ ಬ್ಯಾಟಿಂಗ್ ಕೂಡ ಅತ್ಯದ್ಭುತವಾಗಿತ್ತು. 1969/1970 ರಲ್ಲಿ ಆಸ್ಟ್ರೇಲಿಯಾದ 4-0 ಸೋಲಿನಲ್ಲಿ ಮೈಕ್ ಪ್ರಾಕ್ಟರ್ ಪ್ರಮುಖ ಪಾತ್ರ ವಹಿಸಿದರು. ಮತ್ತು ದಕ್ಷಿಣ ಆಫ್ರಿಕಾ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರು. 1970 ರಲ್ಲಿ, ಅವರು ವರ್ಷದ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರು ಎಂದು ಹೆಸರಿಸಲ್ಪಟ್ಟರು.

ಇದನ್ನೂ ಓದಿ: ಅನುಷ್ಕಾಗೂ ಮೊದಲು ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ಕೊಹ್ಲಿ! ಅದ್ರಲ್ಲಿ ಒಬ್ಬಳು ಕನ್ನಡದ ಹೆಸರಾಂತ ನಟಿ

ಪ್ರಾಕ್ಟರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ದಕ್ಷಿಣ ಆಫ್ರಿಕಾದ ಕೋಚ್ ಆಗಿ ರಿ ಎಂಟ್ರಿ ಪಡೆದರು. ಪ್ರೋಟೀಸ್ ತಂಡವನ್ನು 1992 ಕ್ರಿಕೆಟ್ ವಿಶ್ವಕಪ್‌’ನ ಸೆಮಿ-ಫೈನಲ್‌ ವರೆಗೆ ಮುನ್ನಡೆಸಿದ ಕೀರ್ತಿ ಇವರದ್ದು. ಅದಾದ ನಂತರ 2002 ಮತ್ತು 2008 ರ ನಡುವೆ ICC ಮ್ಯಾಚ್ ರೆಫರಿಯಾಗಿ ಸೇವೆ ಸಲ್ಲಿಸಿದರು. ಆದರೆ ಅಲ್ಲಿ ವಿವಾದಗಳು ಕಾಣಿಸಿಕೊಂಡವು. 2008ರಲ್ಲಿ ಆಸ್ಟ್ರೇಲಿಯಾದ ಆಲ್‌ ರೌಂಡರ್ ಆಂಡ್ರ್ಯೂ ಸೈಮಂಡ್ಸ್ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಆರೋಪದ ಮೇಲೆ ಭಾರತದ ಹರ್ಭಜನ್ ಸಿಂಗ್ ಅವರನ್ನು ಮೂರು ಟೆಸ್ಟ್ ಪಂದ್ಯಗಳಿಗೆ ನಿಷೇಧಿಸಿದ್ದು ಇದೇ ಪ್ರಾಕ್ಟರ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು

ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News