ಸಿಕ್ಸರ್, ಬೌಂಡರಿ ಸುರಿಮಳೆಗೈದ ಕೋಲ್ಕತ್ತಾ: ಐಪಿಎಲ್ ಇತಿಹಾಸದಲ್ಲಿ 2ನೇ ಅತಿ ಹೆಚ್ಚು ರನ್ ಕಲೆಹಾಕಿದ ಕೆಕೆಆರ್!

KKR vs DC Innings Highlights: ಐಪಿಎಲ್ 2024ರ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌’ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಕೆಕೆಆರ್‌ ಪರ ಅಂಗ್‌ಕ್ರಿಶ್ ರಘುವಂಶಿ 54 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಆಂಡ್ರೆ ರಸೆಲ್ 215.79 ಸ್ಟ್ರೈಕ್ ರೇಟ್‌ನಲ್ಲಿ 41 ರನ್ ಗಳಿಸಿದರು.

Written by - Bhavishya Shetty | Last Updated : Apr 3, 2024, 10:06 PM IST
    • ಕೋಲ್ಕತ್ತಾ ನೈಟ್ ರೈಡರ್ಸ್ IPL ಇತಿಹಾಸದಲ್ಲಿ ಎರಡನೇ ಅತ್ಯಧಿಕ ರನ್ ಕಲೆಹಾಕಿದೆ
    • ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ
    • ಕೆಕೆಆರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು
ಸಿಕ್ಸರ್, ಬೌಂಡರಿ ಸುರಿಮಳೆಗೈದ ಕೋಲ್ಕತ್ತಾ: ಐಪಿಎಲ್ ಇತಿಹಾಸದಲ್ಲಿ 2ನೇ ಅತಿ ಹೆಚ್ಚು ರನ್ ಕಲೆಹಾಕಿದ ಕೆಕೆಆರ್! title=
2nd Highest total Score in IPL History

KKR vs DC Innings Highlights: ಕೋಲ್ಕತ್ತಾ ನೈಟ್ ರೈಡರ್ಸ್ IPL ಇತಿಹಾಸದಲ್ಲಿ ಎರಡನೇ ಅತ್ಯಧಿಕ ರನ್ ಕಲೆಹಾಕಿದೆ. ಈ ಪಂದ್ಯದಲ್ಲಿ ವಿಂಡೀಸ್ ಸ್ಟಾರ್ ಸುನಿಲ್ ನರೈನ್ ಅದ್ಭುತ ಆರಂಭ ನೀಡಿದ್ದು, ಕೇವಲ 39 ಎಸೆತಕ್ಕೆ 85 ರನ್ ಕಲೆ ಹಾಕಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬಂದ ಆಂಗ್ಕ್ರಿಶ್ ರಘುವಂಶಿ ತ್ವರಿತ ಅರ್ಧಶತಕ ಗಳಿಸುವ ಮೂಲಕ ಈ ಆರಂಭವನ್ನು ಕಾಯ್ದುಕೊಂಡರು. ಉಳಿದಂತೆ ರಸ್ಸೆಲ್ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿ 19 ಎಸೆತಕ್ಕೆ 41 ರನ್ ಕಲೆ ಹಾಕಿದ್ದಾರೆ.

ಐಪಿಎಲ್ 2024ರ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ 20 ಓವರ್‌’ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿತು. ಕೆಕೆಆರ್‌ ಪರ ಅಂಗ್‌ಕ್ರಿಶ್ ರಘುವಂಶಿ 54 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಆಂಡ್ರೆ ರಸೆಲ್ 215.79 ಸ್ಟ್ರೈಕ್ ರೇಟ್‌ನಲ್ಲಿ 41 ರನ್ ಗಳಿಸಿದರು. ರಿಂಕು 325 ಸ್ಟ್ರೈಕ್ ರೇಟ್‌’ನಲ್ಲಿ ಬ್ಯಾಟಿಂಗ್ ಮಾಡಿ 26 ರನ್ ಗಳಿಸಿದರು.

ಇದನ್ನೂ ಓದಿ: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮಯಾಂಕ್’ಗೆ ಸ್ಥಾನ ನೀಡಿ: ದಿಗ್ಗಜರಿಂದ ಶ್ಲಾಘನೆಯ ಸುರಿಮಳೆ

ಕೆಕೆಆರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಸುನಿಲ್ ನರೈನ್ ಮತ್ತು ಫಿಲಿಪ್ ಸಾಲ್ಟ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇವರಿಬ್ಬರೂ ಮೊದಲ ವಿಕೆಟ್‌’ಗೆ 60 ರನ್ (27 ಎಸೆತ) ಜೊತೆಯಾಟ ನಡೆಸಿದರು. 5ನೇ ಓವರ್‌ನಲ್ಲಿ 4 ಬೌಂಡರಿಗಳ ಸಹಾಯದಿಂದ 18 (12 ಎಸೆತ) ರನ್ ಗಳಿಸಿದ ಫಿಲಿಪ್, ಔಟ್ ಆದರು.

ಇದಾದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಆಂಗ್‌ಕ್ರಿಶ್ ರಘುವಂಶಿ ನರೈನ್ ಜೊತೆಗೂಡಿ 104 ರನ್ (48 ಎಸೆತ) ಜೊತೆಯಾಟ ನಡೆಸಿದರು. ಈ ಜೊತೆಯಾಟವು 13ನೇ ಓವರ್‌ನಲ್ಲಿ 217.95 ಸ್ಟ್ರೈಕ್ ರೇಟ್‌ನಲ್ಲಿ 39 ಎಸೆತಗಳಲ್ಲಿ 85 ರನ್ ಗಳಿಸಿದ ನರೈನ್ ಅವರ ವಿಕೆಟ್‌ನೊಂದಿಗೆ ಕೊನೆಗೊಂಡಿತು. ಈ ವೇಳೆ 7 ಬೌಂಡರಿ ಹಾಗೂ 7 ಸಿಕ್ಸರ್‌’ಗಳನ್ನು ಬಾರಿಸಿದರು.

ನಂತರ 14ನೇ ಓವರ್ ನಲ್ಲಿ ಐಪಿಎಲ್ ಚೊಚ್ಚಲ ಇನ್ನಿಂಗ್ಸ್ ಆಡುತ್ತಿದ್ದ ಆಂಗ್ ಕ್ರಿಶ್ ರಘುವಂಶಿ ಪೆವಿಲಿಯನ್ ಗೆ ಮರಳಿದರು. ರಘುವಂಶಿ 27 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 54 ರನ್ ಗಳಿಸಿದ್ದು, ಇದರಲ್ಲಿ ಅವರ ಸ್ಟ್ರೈಕ್ ರೇಟ್ 200 ಆಗಿತ್ತು.

ಇದಾದ ಬಳಿಕ ನಾಯಕ ಶ್ರೇಯಸ್ ಅಯ್ಯರ್ ರೂಪದಲ್ಲಿ ತಂಡ ನಾಲ್ಕನೇ ವಿಕೆಟ್ ಕಳೆದುಕೊಂಡಿತು. ಅಯ್ಯರ್ 18ನೇ ಓವರ್‌ನಲ್ಲಿ 2 ಸಿಕ್ಸರ್‌ಗಳ ಸಹಾಯದಿಂದ 18 ರನ್ (11 ಎಸೆತ) ಗಳಿಸಿ  ಪೆವಿಲಿಯನ್‌’ಗೆ ಮರಳಿದರು. 19ನೇ ಓವರ್’ನ ಕೊನೆಯ ಎಸೆತದಲ್ಲಿ ರಿಂಕು ಸಿಂಗ್ ಔಟಾಗಿದ್ದು, ಅವರು 8 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 26 ರನ್ ಗಳಿಸಿದರು.

ಇದನ್ನೂ ಓದಿ: 39 ಎಸೆತ… 85 ರನ್…! ಭರ್ಜರಿ ಬ್ಯಾಟಿಂಗ್’ನಿಂದಲೇ ರನ್ ಮಳೆ ಸುರಿಸಿದ ಸುನಿಲ್ ನ’ರೈನ್’

ಇದಾದ ಬಳಿಕ 20ನೇ ಓವರ್ ನ ಮೊದಲ ಎಸೆತದಲ್ಲಿ ಇಶಾಂತ್ ಶರ್ಮಾ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 41 ರನ್ ಗಳಿಸಿದ್ದ ರಸೆಲ್ ಗೆ ಪೆವಿಲಿಯನ್ ಹಾದಿ ತೋರಿಸಿದರು. ನಂತರ ಮೂರನೇ ಎಸೆತದಲ್ಲಿ ರಮಣದೀಪ್ ಸಿಂಗ್ (02) ಔಟಾದರು. ಕೊನೆಯಲ್ಲಿ ವೆಂಕಟೇಶ್ ಅಯ್ಯರ್ ಅಜೇಯ 5 ಮತ್ತು ಮಿಚೆಲ್ ಸ್ಟಾರ್ಕ್ ಅಜೇಯ 1 ರನ್ ಗಳಿಸಿ ಕ್ರೀಸ್’ನಲ್ಲಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News