ಕೊಲಂಬೊ: ರನ್ ಮಷಿನ್ ಎಂದೇ ಖ್ಯಾತಿ ಪಡೆದಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೆನ್ನೆ ಶ್ರೀಲಂಕಾ ವಿರುದ್ದ ನಡೆದ ಏಕದಿನ ಪಂದ್ಯದಲ್ಲಿ 110 ರನ್ ಗಳಿಸುವ ಮೂಲಕ ತನ್ನ 30 ನೇ ಏಕದಿನ ಶತಕ ಗಳಿಸಿದ್ದಾರೆ. ಕೊಲಂಬೊದ ಪ್ರೇಮ್ದಾಸ ಕ್ರೀಡಾಂಗಣದಲ್ಲಿ ನಡೆದ ಐದನೇ ಮತ್ತು ಅಂತಿಮ ಏಕದಿನ ಪಂದ್ಯದ ವೇಳೆ ಟೀಮ್ ಇಂಡಿಯಾ ಆರು ವಿಕೆಟ್ಗಳ ಜಯ ಸಾಧಿಸಿತು.
ಆಸ್ಟ್ರೇಲಿಯ ತಂಡದ ರಿಕಿ ಪಾಂಟಿಂಗ್ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 30 ಶತಕಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದರು. ಆದರೆ ನೆನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿ ಪಾಂಟಿಂಗ್ ಅವರ ದಾಖಲೆಯನ್ನು ಮುರಿದಿದ್ದಾರೆ. ಜೊತೆಗೆ ಅತಿ ಕಡಿಮೆ ಅವಧಿಯಲ್ಲಿ 30ನೇ ಶತಕ ಗಳಿಸಿದ ಮೊದಲ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.