Team India : ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾಗೆ ಹೊಸ ನಾಯಕ..!

ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಟೀಂ ಇಂಡಿಯಾ ಇದೀಗ ಶಿಖರ್ ಧವನ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲು ಸಜ್ಜಾಗಿದೆ.

Written by - Channabasava A Kashinakunti | Last Updated : Jul 20, 2022, 06:24 PM IST
  • ಜಿಂಬಾಬ್ವೆ ವಿರುದ್ಧ ಸೆಣಸಲಿದೆ ಭಾರತ
  • 6 ವರ್ಷಗಳ ನಂತರ ಜಿಂಬಾಬ್ವೆ ಪ್ರವಾಸ
  • ಸದ್ಯ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ
Team India : ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾಗೆ ಹೊಸ ನಾಯಕ..! title=

Team India : ಭಾರತ ಕ್ರಿಕೆಟ್ ತಂಡ ಪ್ರಸ್ತುತ ಪ್ರಪಂಚದಾದ್ಯಂತದ ತಂಡಗಳ ವಿರುದ್ಧ ವಿಭಿನ್ನ ಸರಣಿಗಳಲ್ಲಿ ಸ್ಪರ್ಧಿಸುತ್ತಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಟೀಂ ಇಂಡಿಯಾ ಇದೀಗ ಶಿಖರ್ ಧವನ್ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಆದರೆ ಈ ಸರಣಿಯ ನಂತರ ಭಾರತ ತಂಡವು ವರ್ಷಗಳ ನಂತರ ಜಿಂಬಾಬ್ವೆ ವಿರುದ್ಧ ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾಗೆ ಹೊಸ ನಾಯಕನನ್ನು ಆಯ್ಕೆ ಮಾಡಿದ್ದ.

ಜಿಂಬಾಬ್ವೆ ವಿರುದ್ಧ ಸೆಣಸಲಿದೆ ಭಾರತ

ಭಾರತ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಮುಂದಿನ ತಿಂಗಳು ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಲಿದೆ, ಇದು ಆರು ವರ್ಷಗಳ ನಂತರ ಜಿಂಬಾಬ್ವೆಗೆ ಮೊದಲ ಪ್ರವಾಸವಾಗಿದೆ. ಆಗಸ್ಟ್ 18, 20 ಮತ್ತು 22 ರಂದು ಹರಾರೆಯಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಕೆಎಲ್ ರಾಹುಲ್ ತಂಡದ ನಾಯಕರಾಗಬಹುದು.

ಇದನ್ನೂ ಓದಿ : Shoaib Akhtar : ಹಾರ್ದಿಕ್ ಪಾಂಡ್ಯಗೆ ಪ್ರಮುಖ ಸಲಹೆ ನೀಡಿದ ಪಾಕ್ ಮಾಜಿ ಕ್ರಿಕೆಟರ್..!

6 ವರ್ಷಗಳ ನಂತರ ಜಿಂಬಾಬ್ವೆ ಪ್ರವಾಸ 

ಈ ಸರಣಿಯು ಐಸಿಸಿ ಪುರುಷರ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದೆ. 13 ತಂಡಗಳ ಸ್ಪರ್ಧೆಯು ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ನೇರ ಅರ್ಹತೆಯ ಮುಖ್ಯ ಮೂಲವಾಗಿದೆ. ಜಿಂಬಾಬ್ವೆ ಪ್ರಸ್ತುತ 13 ತಂಡಗಳ ಪೈಕಿ 12ನೇ ಸ್ಥಾನದಲ್ಲಿದೆ. ಭಾರತ ತಂಡವು 2016 ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮೂರು ಟಿ20 ಮತ್ತು ಮೂರು ODIಗಳನ್ನು ಆಡಿದಾಗ ಭಾರತ ತಂಡವು ಕೊನೆಯದಾಗಿ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು.

ಸದ್ಯ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ

ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ಯುವ ತಂಡ ಜುಲೈ 22 ರಿಂದ ವೆಸ್ಟ್ ಇಂಡೀಸ್‌ನಲ್ಲಿ ಮೂರು ODI ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಭಾರತ ವಿರುದ್ಧದ ಸರಣಿಗೂ ಮುನ್ನ ಜಿಂಬಾಬ್ವೆ ತಂಡ ಬಾಂಗ್ಲಾದೇಶ ವಿರುದ್ಧ ಜುಲೈ 30ರಿಂದ ಮೂರು ಟಿ20 ಪಂದ್ಯಗಳನ್ನು ಆಡಲಿದೆ.

ಇದನ್ನೂ ಓದಿ : Asian Games 2023 ಅಭಿಮಾನಿಗಳಿಗೊಂದು ಸಂತಸದ ಸುದ್ದಿ, ಏಶಿಯನ್ ಗೇಮ್ಸ್ 2023ರ ಆಯೋಜನೆಗೆ ಮುಹೂರ್ತ ಫಿಕ್ಸ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News