KKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ... ಗ್ರೀನ್‌, ಮೆರೂನ್‌ ಗುಟ್ಟೇನು?

LSG New Jersy: KKR ಜೊತೆಗಿನ ಪಂದ್ಯದಲ್ಲಿ ಲಕ್ನೋ ಆಟಗಾರರು ಹೊಸ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕೆ ಇಳಿದರು. ಇದಕ್ಕೆ ಕಾರಣ ಏನಿರಬಹುದು ಗೊತ್ತಾ? 

Written by - Savita M B | Last Updated : Apr 15, 2024, 12:00 AM IST
  • ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಿದೆ.
  • ಈ ಪಂದ್ಯದಲ್ಲಿ ಲಕ್ನೋ ಆಟಗಾರರು ಹೊಸ ಬಣ್ಣದ ಜೆರ್ಸಿಯೊಂದಿಗೆ ಮೈದಾನಕ್ಕೆ ಪ್ರವೇಶಿದರು
KKR vs LSG : KKR ವಿರುದ್ಧದ ಪಂದ್ಯಕ್ಕೆ ನ್ಯೂ ಜೆರ್ಸಿಯಲ್ಲಿ ಲಕ್ನೋ ಎಂಟ್ರಿ... ಗ್ರೀನ್‌, ಮೆರೂನ್‌ ಗುಟ್ಟೇನು?   title=

KKR vs LSG: ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಿದೆ.. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರೊಂದಿಗೆ ಲಕ್ನೋ ಮೊದಲು ಬ್ಯಾಟಿಂಗ್ ಮಾಡಿತು... ಆದರೆ.. ಈ ಪಂದ್ಯದಲ್ಲಿ ಲಕ್ನೋ ಆಟಗಾರರು ಹೊಸ ಬಣ್ಣದ ಜೆರ್ಸಿಯೊಂದಿಗೆ ಎಂದರೇ ಗ್ರೀನ್ ಮತ್ತು ಮೆರೂನ್ ಬಣ್ಣದ ಜೆರ್ಸಿಯೊಂದಿಗೆ ಮೈದಾನಕ್ಕೆ ಪ್ರವೇಶಿಸಿದರು. 

ಇದನ್ನೂ ಓದಿ-IPL 2024 : ಗಾಯಕ್ವಾಡ್ - ದುಬೆ ಜೊತೆಯಾಟ : ಮುಂಬೈಗೆ 207 ರನ್ ಗಳ ಟಾರ್ಗೆಟ್ ನೀಡಿದ CSK

ಆದರೆ.. ಈ ಪಂದ್ಯದಲ್ಲಿ ಲಕ್ನೋ ಆಟಗಾರರು ಈ ಜೆರ್ಸಿ ಧರಿಸಿರುವುದಕ್ಕೆ ಕಾರಣವಿದೆ. ಕೋಲ್ಕತ್ತಾದ ಮೋಹನ್ ಬಗಾನ್ ಫುಟ್ಬಾಲ್ ಕ್ಲಬ್ ಈ ಜೆರ್ಸಿಯನ್ನು ಧರಿಸಿತ್ತು. ಮೋಹನ್ ಬಗಾನ್ ಫುಟ್‌ಬಾಲ್ ಕ್ಲಬ್ ಸಂಜೀವ್ ಗೋಯೆಂಕಾ ಗ್ರೂಪ್‌ಗೆ ಸೇರಿದ್ದು, ಇವರು ಲಕ್ನೋ ಸೂಪರ್ ಜೈಂಟ್ಸ್‌ನ ಸಹ-ಮಾಲೀಕರಾಗಿದ್ದಾರೆ.

ಇದನ್ನೂ ಓದಿ-"ಎಲ್ಲರ ಮುಂದೆಯೇ ಬಟ್ಟೆ ಬದಲಾಯಿಸು ಎಂದರು".. ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ಕ್ರೀಡಾ ನಿರೂಪಕಿ!!

ಇಂಡಿಯನ್ ಸೂಪರ್ ಲೀಗ್ ಪ್ರಶಸ್ತಿಯನ್ನು ಹೊಂದಿರುವ ಮೋಹನ್ ಬಗಾನ್ ಕ್ಲಬ್‌ನ ಹೆಸರಿನಲ್ಲಿ ಲಕ್ನೋ ಆಟಗಾರರು ಈ ಪಂದ್ಯದಲ್ಲಿ ಈ ಜೆರ್ಸಿಯನ್ನು ಧರಿಸುವಂತೆ ಆಡಳಿತ ಮಂಡಳಿ ನಿರ್ಧರಿಸಿತ್ತು... ಆದರೆ, ಲಕ್ನೋ ಆಟಗಾರರು ಫುಟ್ಬಾಲ್ ಕ್ಲಬ್‌ನ ಜೆರ್ಸಿ ಧರಿಸಿರುವುದು ಇದೇ ಮೊದಲಲ್ಲ. ಕಳೆದ ಋತುವಿನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಮೆರೂನ್ ಮತ್ತು ಹಸಿರು ಜೆರ್ಸಿಯೊಂದಿಗೆ ಆಡಿದ್ದರು. ಲಕ್ನೋ ಪಂದ್ಯವನ್ನು ಒಂದು ರನ್‌ನಿಂದ ಗೆದ್ದುಕೊಂಡಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News