ಚೆನ್ನೈ ಆಗಲ್ಲ… ಆದ್ರೆ ಇದೇ ತಂಡ ಈ ಬಾರಿ IPL 2024ರ ಟ್ರೋಫಿ ಗೆಲ್ಲುತ್ತದೆ: ಲೀಗ್ ಆರಂಭದಲ್ಲೇ ಭವಿಷ್ಯ ನುಡಿದ ರಾಬಿನ್ ಉತ್ತಪ್ಪ

Robin Uthappa reveals his pick on IPL 2024: ಅಂದಹಾಗೆ ಇತ್ತೀಚೆಗೆ, ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಈ ಋತುವಿನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಇಷ್ಟಪಡುವ ತಂಡದ ಬಗ್ಗೆ ಮಾತನಾಡಿದ್ದಾರೆ.

Written by - Bhavishya Shetty | Last Updated : Mar 25, 2024, 02:32 PM IST
    • 21 ಪಂದ್ಯಗಳನ್ನು ಒಳಗೊಂಡಿರುವ ಐಪಿಎಲ್ ಪ್ರವಾಸದ ಆರಂಭಿಕ ಹಂತ
    • ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಭವಿಷ್ಯ
    • ಐಪಿಎಲ್ 2021 ಮತ್ತು 2022ರಲ್ಲಿ ಸೂಪರ್ ಕಿಂಗ್ಸ್ ಪರ ಆಡಿದ್ದ ಉತ್ತಪ್ಪ
ಚೆನ್ನೈ ಆಗಲ್ಲ… ಆದ್ರೆ ಇದೇ ತಂಡ ಈ ಬಾರಿ IPL 2024ರ ಟ್ರೋಫಿ ಗೆಲ್ಲುತ್ತದೆ: ಲೀಗ್ ಆರಂಭದಲ್ಲೇ ಭವಿಷ್ಯ ನುಡಿದ ರಾಬಿನ್ ಉತ್ತಪ್ಪ  title=
Robin Uthappa prediction

Robin Uthappa reveals his pick on IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಆರಂಭ ಮಾರ್ಚ್ 22 ರಂದು ನಡೆದಿದೆ. ಪ್ರಸ್ತುತ 21 ಪಂದ್ಯಗಳನ್ನು ಒಳಗೊಂಡಿರುವ ಐಪಿಎಲ್ ಪ್ರವಾಸದ ಆರಂಭಿಕ ಹಂತವನ್ನು ಮಾತ್ರ ಅನಾವರಣಗೊಳಿಸಲಾಗಿದೆ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆಯ ದಿನಾಂಕಗಳ ಘೋಷಣೆಯ ಬಳಿಕವಷ್ಟೇ ವೇಳಾಪಟ್ಟಿಯ ಉಳಿದ ಭಾಗವನ್ನು ಬಹಿರಂಗಪಡಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: Sudharani: ಹೋಳಿಯಂದು ಕಲರ್‌ ಕಲರ್‌ ಅಂತ ಸಖತ್‌ ಸ್ಟೆಪ್‌ ಹಾಕಿದ ಶ್ರೀರಸ್ತು ಶುಭಮಸ್ತು ತುಳಸಿ!

ಅಂದಹಾಗೆ ಇತ್ತೀಚೆಗೆ, ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಈ ಋತುವಿನಲ್ಲಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳಲು ಇಷ್ಟಪಡುವ ತಂಡದ ಬಗ್ಗೆ ಮಾತನಾಡಿದ್ದಾರೆ.

ಈ ಹಿಂದೆ ಐಪಿಎಲ್ 2021 ಮತ್ತು 2022ರಲ್ಲಿ ಸೂಪರ್ ಕಿಂಗ್ಸ್ ಪರ ಆಡಿದ್ದ ಉತ್ತಪ್ಪ, 2021ರ ಸೀಸನ್‌’ನಲ್ಲಿ ವಿಜಯಿ ತಂಡದ ಸದಸ್ಯರಾಗಿದ್ದರು. ಈ ಕರ್ನಾಟಕದ ಕ್ರಿಕೆಟ್ ದಿಗ್ಗಜ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಜೊತೆಗೆ ಕೂಡ ಆಟವಾಡಿದ್ದರು.

ಇನ್ನು ಉತ್ತಪ್ಪ ಬಂಗಾಳಿ ಸುದ್ದಿವಾಹಿನಿ ಆನಂದಬಜಾರ್ ಪತ್ರಿಕಾಗೆ ನೀಡಿದ ಸಂದರ್ಶನದಲ್ಲಿ, “ನಾನು ಕೆಕೆಆರ್ ತೊರೆದು ಬಹಳ ಸಮಯವಾಗಿದೆ ಆದರೆ ತಂಡದ ಮೇಲಿನ ನನ್ನ ಪ್ರೀತಿ ಇನ್ನೂ ಇದೆ. ಅವರು ಮತ್ತೆ ಐಪಿಎಲ್ ಗೆಲ್ಲಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ

ಇದನ್ನೂ ಓದಿ:  ಆರ್‌ಸಿಬಿ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌, ಹೋಳಿ ದಿನ ಬೆಂಗಳೂರು ಗೆಲ್ಲೋದು ಪಕ್ಕಾ.. ಕಾರಣ ಏನ್ ಗೊತ್ತಾ?

2014 ರಿಂದ ಕೆಕೆಆರ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಇಯಾನ್ ಮಾರ್ಗನ್ ನಾಯಕತ್ವದಲ್ಲಿ, ಎರಡು ಬಾರಿಯ ಫೈನಲ್ ತಲುಪಿದರೂ ಸಹ, CSK ವಿರುದ್ಧ ಸೋಲನ್ನು ಎದುರಿಸಿತು. ಆ ಸಮಯದಲ್ಲಿ ಉತ್ತಪ್ಪ CSK ಅನ್ನು ಪ್ರತಿನಿಧಿಸುತ್ತಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News