ಶೀಘ್ರವೇ ನಿವೃತ್ತಿ ಘೋಷಿಸಲಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರ!

ಇನ್ನು ಐಪಿಎಲ್‌ನಲ್ಲಿ ಜಾಧವ್ ಅವರ ಪ್ರದರ್ಶನ ತೀರಾ ಸಾಧಾರಣವಾಗಿತ್ತು. ಜಾಧವ್ 2018 ರಿಂದ 2020 ರವರೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕಾಗಿ ಆಟವಾಡಿದ್ದಾರೆ. ಆ ಬಳಿಕ 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅವರನ್ನು ಖರೀದಿಸಿತು. ಆದರೆ ಹೈದರಾಬಾದ್‌ ಫ್ರಾಂಚೈಸಿಯ ನಿರೀಕ್ಷೆಗಳನ್ನು ಹುಸಿ ಮಾಡಿದ್ದರು. ಐಪಿಎಲ್ 2021 ರಲ್ಲಿ, ಜಾಧವ್ 6 ಪಂದ್ಯಗಳಲ್ಲಿ ಕೇವಲ 55 ರನ್ ಗಳಿಸಿದ್ದರು. 

Written by - Bhavishya Shetty | Last Updated : Jun 25, 2022, 10:32 AM IST
  • ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೇದಾರ್ ಜಾಧವ್ ನಿವೃತ್ತಿ ಘೋಷಿಸುವ ಸಾಧ್ಯತೆ
  • ಟೀಂ ಇಂಡಿಯಾದ ಬಲಿಷ್ಠ ಬೆನ್ನೆಲುಬೆಂದು ಪರಿಗಣಿಸಲ್ಪಟ್ಟಿದ್ದ ಆಟಗಾರ
  • ಈಗ ಕಳಪೆ ಫಾರ್ಮ್‌ನಲ್ಲಿ ಮುಂದುವರೆದ ಜಾಧವ್‌
ಶೀಘ್ರವೇ ನಿವೃತ್ತಿ ಘೋಷಿಸಲಿದ್ದಾರೆ ಟೀಂ ಇಂಡಿಯಾದ ಈ ಸ್ಟಾರ್‌ ಆಟಗಾರ! title=
Kedar Jadhav

ಒಂದು ಕಾಲದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದ ಬಲಿಷ್ಠ ಬೆನ್ನೆಲುಬೆಂದು ಪರಿಗಣಿಸಲ್ಪಟ್ಟಿರುವ ಕೇದಾರ್ ಜಾಧವ್ ಕಳೆದ ಎರಡು ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಭಾರತ ತಂಡಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು 2019ರಲ್ಲಿ ಅವರು ಆಡಿದ್ದರು. ಇನ್ನು ಕೇದಾರ್ ಜಾಧವ್ 2019 ರ ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿದ್ದರು. ಆದರೆ ಆಗ ನಡೆದ ಪಂದ್ಯಗಳಲ್ಲಿ ಯಾವುದೇ ಸಾಧನೆ ತೋರದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಆಯ್ಕೆ ಸಮಿತಿ ಅವರನ್ನು ಹೊರಗಿಟ್ಟಿದೆ. 

ಇದನ್ನೂ ಓದಿ: Morning Vastu Tips: ಈ ಕೆಲಸ ಮಾಡಿದ್ರೆ ಲಕ್ಷ್ಮಿದೇವಿಯ ಆಶೀರ್ವಾದದಿಂದ ಹಣದ ಮಳೆ..!

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿಯೂ ಕೇದಾರ್‌ ಜಾಧವ್‌ರನ್ನು ಯಾವುದೇ ಫ್ರಾಂಚೈಸಿಗಳು ಖರೀದಿಸಿರಲಿಲ್ಲ. ಇದು ಅವರ ಕಳಪೆ ಫಾರ್ಮ್‌ನ ಸ್ಥಿತಿಯನ್ನು ತಿಳಿಸುತ್ತಿದೆ. 2010 ರಿಂದ ಕೇದಾರ್ ಜಾಧವ್ ಐಪಿಎಲ್‌ನ ಭಾಗವಾಗಿದ್ದಾರೆ. ಇನ್ನು ಐಪಿಎಲ್‌ನಲ್ಲಿ ಜಾಧವ್ ಅವರ ಪ್ರದರ್ಶನ ತೀರಾ ಸಾಧಾರಣವಾಗಿತ್ತು. ಜಾಧವ್ 2018 ರಿಂದ 2020 ರವರೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕಾಗಿ ಆಟವಾಡಿದ್ದಾರೆ. ಆ ಬಳಿಕ 2021 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಅವರನ್ನು ಖರೀದಿಸಿತು. ಆದರೆ ಹೈದರಾಬಾದ್‌ ಫ್ರಾಂಚೈಸಿಯ ನಿರೀಕ್ಷೆಗಳನ್ನು ಹುಸಿ ಮಾಡಿದ್ದರು. ಐಪಿಎಲ್ 2021 ರಲ್ಲಿ, ಜಾಧವ್ 6 ಪಂದ್ಯಗಳಲ್ಲಿ ಕೇವಲ 55 ರನ್ ಗಳಿಸಿದ್ದರು. 

ಕೇದಾರ್ ಜಾಧವ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಿಲ್ಲ. ಐಪಿಎಲ್‌ನಲ್ಲೂ ಅವರನ್ನು ಯಾರೂ ಖರೀದಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅವರ ವೃತ್ತಿಜೀವನವು ಕೊನೆಗೊಳ್ಳುವ ಹಂತದಲ್ಲಿದೆ. ಇನ್ನು ಟೀಂ ಇಂಡಿಯಾಗಾಗಿ ಕೇದಾರ್ ಜಾಧವ್ ಉತ್ತಮ ಪಂದ್ಯಗಳನ್ನು ಆಡಿದ್ದಾರೆ. ಜಾಧವ್ ಭಾರತದ ಪರ 9 ಟಿ20 ಪಂದ್ಯಗಳಲ್ಲಿ 122 ರನ್ ಮತ್ತು 73 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 1389 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕಗಳು ಸೇರಿವೆ. 

ಇದನ್ನೂ ಓದಿ: ನಾಗಚೈತನ್ಯ ಜೊತೆಗಿನ ಬ್ರೇಕಪ್‌ ಬಳಿಕ ಗುಡ್‌ನ್ಯೂಸ್‌ ಕೊಟ್ಟ ಸಮಂತಾ!

ಕೇದಾರ್ ಜಾಧವ್ ಬದಲಿಗೆ ಹಲವು ಯುವ ಆಟಗಾರರು ಟೀಂ ಇಂಡಿಯಾಕ್ಕೆ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಸೇರಿದ್ದಾರೆ. ಈ ಆಟಗಾರರು ಸ್ಫೋಟಕ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮುಖ ಆಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಆಯ್ಕೆದಾರರು ಕೂಡ ಈ ಆಟಗಾರರ ಮೇಲೆ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News