Virat Kohli ನಾಯಕತ್ವದ ಕುರಿತಾದ ಈ ಸಂಗತಿ ನನಗೆ ಅರ್ಥವಾಗಿಲ್ಲ ಎಂದ Kapil Dev

Kapil Dev On Virat Kholi Resignation: ಗುರುವಾರ, ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಎಲ್ಲರನ್ನೂ ಅಚ್ಚರಿಗೊಳಿಸಿದರು ಮತ್ತು ತಕ್ಷಣವೇ ಕ್ರಿಕೆಟ್ ನಾಯಕತ್ವವನ್ನು ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಂತರ ತಾನು ಕ್ರಿಕೆಟ್‌ನ ಕಡಿಮೆ ಸ್ವರೂಪದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಕೊಹ್ಲಿ ಟ್ವಿಟರ್‌ನಲ್ಲಿ (Virat Kohli Twitter) ಘೋಷಿಸಿದ್ದಾರೆ.

Written by - Nitin Tabib | Last Updated : Sep 18, 2021, 05:34 PM IST
  • T20 ನಾಯಕತ್ವಕ್ಕೆ ವಿರಾಟ್ ವಿದಾಯದ ಘೋಷಣೆ ಅಚ್ಚರಿ ತಂದಿದೆ ಎಂದ ಕಪಿಲ್ ದೇವ್
  • ತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರು ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದಾರೆ.
  • ನೀವು ದೇಶವನ್ನು ಉತ್ತಮ ರೀತಿಯಲ್ಲಿ ಪ್ರತಿನಿಧಿಸಿದ್ದೀರಿ ಎಂದು ನಾನು ಹೇಳಲು ಬಯಸುತ್ತೇನೆ.
Virat Kohli ನಾಯಕತ್ವದ ಕುರಿತಾದ ಈ ಸಂಗತಿ ನನಗೆ ಅರ್ಥವಾಗಿಲ್ಲ ಎಂದ Kapil Dev title=
Kapil Dev On Virat Kholi Resignation (File Photo)

Kapil Dev On Virat Kholi Resignation: ಗುರುವಾರ, ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ (Virat Kohli) ಎಲ್ಲರನ್ನೂ ಅಚ್ಚರಿಗೊಳಿಸಿದರು ಮತ್ತು ತಕ್ಷಣವೇ ಕ್ರಿಕೆಟ್ ನಾಯಕತ್ವವನ್ನು ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ನಂತರ ತಾನು ಕ್ರಿಕೆಟ್‌ನ ಕಡಿಮೆ (T20 Captain Team India) ಸ್ವರೂಪದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಕೊಹ್ಲಿ ಟ್ವಿಟರ್‌ನಲ್ಲಿ (Virat Kohli Twitter) ಘೋಷಿಸಿದ್ದಾರೆ. ಅನೇಕ ಮಾಜಿ ಕ್ರಿಕೆಟಿಗರು ವಿರಾಟ್ ಅವರ ಈ ನಿರ್ಧಾರವನ್ನು ಸಮರ್ಥಿಸಿದ್ದಾರೆ ಮತ್ತು ಟಿ 20 ವಿಶ್ವಕಪ್‌ನಲ್ಲಿ (T20 World Cup) ಭಾರತವನ್ನು ಚಾಂಪಿಯನ್ ಮಾಡುವ ಮೂಲಕ ಕೊಹ್ಲಿ ಭಾರತಕ್ಕೆ ನಾಯಕನಾಗಿ ವಿದಾಯ ಹೇಳಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ, ಟೀಂ ಇಂಡಿಯಾಗೆ  ಮೊದಲ ವಿಶ್ವಕಪ್ ತಂದು ಕೊಟ್ಟ ಮಾಜಿ ನಾಯಕ ಕಪಿಲ್ ದೇವ್ (Kapil Dev), ವಿರಾಟ್ ಅವರ ಈ ನಿರ್ಧಾರದಿಂದ ತನಗೆ ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ. ಕೊಹ್ಲಿ ಇಷ್ಟು ಹಠಾತ್ ಹೆಜ್ಜೆ ಇಡುತ್ತಾರೆ ಎಂದು ತಾನು ಎಂದಿಗೂ ಯೋಚಿಸಿರಲಿಲ್ಲ ಎಂದು ಕಪಿಲ್ ಹೇಳಿದ್ದಾರೆ. 

ಈ ಕುರಿತು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಕಪಿಲ್ ದೇವ್, "ನಾನು ಎಂದಿಗೂ ಹಾಗೆ ಯೋಚಿಸಿರಲಿಲ್ಲ. ಆದರೆ, ಈ ದಿನಗಳಲ್ಲಿ, ಬಹುತೇಕ ಕ್ರಿಕೆಟಿಗರು ಎಲ್ಲಾ ನಿರ್ಧಾರಗಳನ್ನು ತಾವಾಗಿಯೇ ತೆಗೆದುಕೊಳ್ಳುವುದು ನನಗೆ ವಿಚಿತ್ರವೆನಿಸುತ್ತದೆ. ನನ್ನ ಪ್ರಕಾರ ಆಯ್ಕೆಗಾರರು ಕೂಡ ಈ ಬಗ್ಗೆ ಸಮಾಲೋಚನೆ ನಡೆಸಬೇಕು. ನನ್ನ ಪ್ರಕಾರ, ಕ್ರಿಕೆಟಿಗರು ಇಂತಹ ಒಂದು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಮುನ್ನ ಆಯ್ಕೆಗಾರರ ​​ಬಳಿಗೆ ಹೋಗಬೇಕು ಮತ್ತು ಅದಕ್ಕೂ ಮೊದಲು ಮಂಡಳಿ ಬಳಿ ಹೋಗಬೇಕು. ಇದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಅದನ್ನು ಇಷ್ಟು ಬೇಗ ಘೋಷಿಸುವ ಅಗತ್ಯವಿಲ್ಲ. ಆತ ಅದ್ಭುತ ಆಟಗಾರ. ಒಂದು ಸೀಸನ್ ಕೆಟ್ಟು ಹೋದರೆ, ಅವನು ಇನ್ನು ಮುಂದೆ ಶ್ರೇಷ್ಠ ಆಟಗಾರ ಮತ್ತು ನಾಯಕನಲ್ಲ ಎಂದು ಅರ್ಥವಲ್ಲ" ಎಂದು ಹೇಳಿದ್ದಾರೆ.

ಇದನ್ನೂ ಓದಿ-Anil Kumble: ಟಿ-20 ವಿಶ್ವಕಪ್ ಬಳಿಕ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್..?!

'ಅವರು ಈ ಬಗ್ಗೆ ಆಯ್ಕೆಗಾರರೊಂದಿಗೆ ಮಾತನಾಡಿ ಈ ನಿರ್ಧಾರ  ತೆಗೆದುಕೊಂಡಿದ್ದಾರೆಯೇ ಮತ್ತು ಅವರ ಜಾಗಕ್ಕೆ ಬೇರೊಬ್ಬರೂ ಸೂಕ್ತರಿದ್ದಾರೆಯೇ? ಎಂಬುದನ್ನು ಪರಾಮರ್ಶಿಸಬೇಕು. ಇದು ಅವರ ವೈಯಕ್ತಿಕ ನಿರ್ಧಾರ. ನಾನು ಅದರ ಬಗ್ಗೆ ಏನನ್ನೂ ಮಾತನಾಡಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಕ್ರಿಕೆಟಿಗರು ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಆರಂಭಿಸಿದ್ದಾರೆ. ನೀವು ದೇಶವನ್ನು ಉತ್ತಮ ರೀತಿಯಲ್ಲಿ ಪ್ರತಿನಿಧಿಸಿದ್ದೀರಿ ಎಂದು ನಾನು ಹೇಳಲು ಬಯಸುತ್ತೇನೆ. ನಿಮ್ಮ ಉಳಿದ ವೃತ್ತಿಜೀವನಕ್ಕೆ ನಾನು ನಿಮಗೆ ಶುಭ ಹಾರೈಸುತ್ತೇನೆ' ಎಂದು ಕಪಿಲ್ ಹೇಳಿದ್ದಾರೆ.

ಇದನ್ನೂ ಓದಿ-ಟಿ 20 ನಾಯಕತ್ವವನ್ನು ತೊರೆಯಲು ಕೊಹ್ಲಿ ಮೇಲೆ ಯಾವುದೇ ಒತ್ತಡವಿರಲಿಲ್ಲ: ಮದನ್ ಲಾಲ್

ವಿರಾಟ್ ತನ್ನ ಟ್ವಿಟರ್‌ ಖಾತೆಯಲ್ಲಿ ವರ್ಕ್ ಲೋಡ್  ಕಾರಣ ನೀಡಿ ಟಿ 20 ನಾಯಕತ್ವವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡ ವಿರಾಟ್, 'ಭಾರತವನ್ನು ಮಾತ್ರವಲ್ಲ, ಭಾರತೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಭಾರತೀಯ ನಾಯಕನಾಗಿ ನನ್ನ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಅವರಿಲ್ಲದೆ ನಾನು ಅದನ್ನು ಮಾಡಲು ಸಾಧ್ಯವಿಲ್ಲ - ನನ್ನ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿ, ಆಯ್ಕೆ ಸಮಿತಿ, ನನ್ನ ಕೋಚ್ ಮತ್ತು ನಾವು ಗೆಲ್ಲಲು ಪ್ರಾರ್ಥಿಸಿದ ಪ್ರತಿಯೊಬ್ಬ ಭಾರತೀಯ. ಕೆಲಸದ ಹೊರೆ ಒಂದು ಪ್ರಮುಖ ವಿಷಯ ಎಂದು ಭಾವಿಸುತ್ತೇನೆ ಮತ್ತು ಕಳೆದ 8 ರಿಂದ 9 ವರ್ಷಗಳವರೆಗೆ ಮೂರು ಫಾರ್ಮ್ಯಾಟ್‌ಗಳನ್ನು ಆಡುವ ಮತ್ತು 5-6 ವರ್ಷಗಳ ಕಾಲ ಕ್ಯಾಪ್ಟನ್ ಆಗಿರುವ ನನ್ನ ಕೆಲಸದ ಹೊರೆ ಪರಿಗಣಿಸಿ, ನನಗೆ ಸ್ವಲ್ಪ ಸ್ಪೇಸ್ ನೀಡಬೇಕು ಎಂದು ನಾನು ಭಾವಿಸುತ್ತೇನೆ. ಓರ್ವ ಭಾರತೀಯ ತಂಡದ ನಾಯಕನಾಗಿ ಸಂಪೂರ್ಣವಾಗಿ ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಕ್ರಿಕೆಟ್ ತಂಡಕ್ಕೆ ಸಿದ್ಧನಾಗಳು ಸ್ಪೇಸ್ ನೀಡಬೇಕು. ನಾನು ಟಿ 20 ನಾಯಕನಾಗಿ ನನ್ನ ಸರ್ವಸ್ವವನ್ನು ತಂಡಕ್ಕೆ ನೀಡಿದ್ದೇನೆ ಮತ್ತು ಟಿ 20 ಬ್ಯಾಟ್ಸ್‌ಮನ್‌ ಆಗಿ ನಾನು ಅದನ್ನು ಮುಂದುವರಿಸುತ್ತೇನೆ' ಎಂದು ಹೇಳಿದ್ದರು.

ಇದನ್ನೂ ಓದಿ-Irfan Pathan : ಟಿ20 ನಾಯಕತ್ವ ತ್ಯಜಿಸಲು ಕೊಹ್ಲಿ ನಿರ್ಧಾರ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ ಇರ್ಫಾನ್ ಪಠಾಣ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News