ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಿಂದ ಬುಮ್ರಾ ಹೊರಕ್ಕೆ! ತಂಡದಲ್ಲಿ ಈ ಫಾಸ್ಟ್ ಬೌಲರ್ ಸ್ಥಾನ ತುಂಬುವವರು ಯಾರು ?

IND vs ENG, 4th Test: ಭಾರತ ತಂಡವು ನಾಳೆ ಅಂದರೆ ಮಂಗಳವಾರ ರಾಜ್‌ಕೋಟ್‌ನಿಂದ ರಾಂಚಿಗೆ ತೆರಳುವ ನಿರೀಕ್ಷೆಯಿದೆ. ಆದರೆ ಈ ತಂಡದೊಂದಿಗೆ ಬುಮ್ರಾ ಪ್ರಯಾಣಿಸುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.   

Written by - Ranjitha R K | Last Updated : Feb 19, 2024, 12:38 PM IST
  • ನಾಲ್ಕನೇ ಟೆಸ್ಟ್‌ ನಿಂದ ಜಸ್ಪ್ರೀತ್ ಬುಮ್ರಾ ಹೊರಕ್ಕೆ
  • ಈ ಪಂದ್ಯದಿಂದ ಬುಮ್ರಾ ವಿಶ್ರಾಂತಿ ಪಡೆಯಲಿದ್ದಾರೆ
  • ಫೆಬ್ರವರಿ 23 ರಿಂದ ಆರಂಭವಾಗಲಿದೆ ನಾಲ್ಕನೇ ಟೆಸ್ಟ್‌ .
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಿಂದ ಬುಮ್ರಾ ಹೊರಕ್ಕೆ! ತಂಡದಲ್ಲಿ ಈ ಫಾಸ್ಟ್ ಬೌಲರ್ ಸ್ಥಾನ ತುಂಬುವವರು ಯಾರು ?  title=

ನವದೆಹಲಿ :  IND vs ENG, 4th Test: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ ನಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಭಾಗಿಯಾಗುವುದಿಲ್ಲ ಎನ್ನಲಾಗಿದೆ. ಈ ಪಂದ್ಯದಿಂದ ಬುಮ್ರಾ ವಿಶ್ರಾಂತಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಟೀಂ ಇಂಡಿಯಾ ಆಟಗಾರರ ಮೇಲಿನ ವರ್ಕ್ ಲೋಡ್ ಕಡಿಮೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಬುಮ್ರಾಗೆ ವಿಶ್ರಾಂತಿ ನೀಡುವ ನಿರ್ಧಾರವನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಫೆಬ್ರವರಿ 23 ರಿಂದ ರಾಂಚಿಯಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌  ಆರಂಭವಾಗಲಿದೆ. 

ಭಾರತ ತಂಡವು ನಾಳೆ ಅಂದರೆ ಮಂಗಳವಾರ ರಾಜ್‌ಕೋಟ್‌ನಿಂದ ರಾಂಚಿಗೆ ತೆರಳುವ ನಿರೀಕ್ಷೆಯಿದೆ. ಆದರೆ ಈ ತಂಡದೊಂದಿಗೆ ಬುಮ್ರಾ ಪ್ರಯಾಣಿಸುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ. 

ಇದನ್ನೂ ಓದಿ : Rohit Sharma: ಸರ್ಫರಾಜ್-ಗಿಲ್ ಇವರ್ಯಾರೂ ಅಲ್ಲ.. ಈ ಇಬ್ಬರೂ ಆಟಗಾರರೇ ಟೀಂ ಇಂಡಿಯಾದ ಹೀರೋಗಳು ಎಂದ ರೋಹಿತ್‌ ಶರ್ಮಾ!

ಬುಮ್ರಾ ಸೋಮವಾರ ರಾಜ್‌ಕೋಟ್‌ನಿಂದ ರಸ್ತೆ ಮೂಲಕ ಅಹಮದಾಬಾದ್‌ಗೆ ಪ್ರಯಾಣಿಸುವ ಸಾಧ್ಯತೆಯಿದೆ. ಸರಣಿಯಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿರುವ ಬುಮ್ರಾ  ಈಗಾಗಲೇ ಹೈದರಾಬಾದ್, ವೈಜಾಗ್ ಮತ್ತು ರಾಜ್‌ಕೋಟ್‌ನಲ್ಲಿ ನಡೆದ ಮೊದಲ ಮೂರು ಟೆಸ್ಟ್‌ಗಳಲ್ಲಿ ಒಟ್ಟು 81 ಓವರ್‌ಗಳನ್ನು ಬೌಲ್ ಮಾಡಿದ್ದಾರೆ.

ಬುಮ್ರಾ ಅವರಂತೆಯೇ, ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಈ ಹಿಂದೆ ವೈಜಾಗ್‌ನಲ್ಲಿ ನಡೆದ ಎರಡನೇ ಟೆಸ್ಟ್‌ಗೆ ವಿಶ್ರಾಂತಿ ಪಡೆದಿದ್ದರು.ರಾಂಚಿಯಲ್ಲಿ ಬುಮ್ರಾಗೆ ಬದಲಿ ಬೌಲರ್ ಇರುತ್ತಾರೋ ಇಲ್ಲವೋ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ.

ಇದನ್ನೂ ಓದಿ : IND vs ENG: ರಾಜ್‌ಕೋಟ್ ಟೆಸ್ಟ್‌ನಲ್ಲಿ ದಾಖಲಾದ ಟಾಪ್-10 ವಿಶ್ವ ದಾಖಲೆಗಳಿವು!

ಬಂಗಾಳದ ರಣಜಿ ಪಂದ್ಯದಲ್ಲಿ ಭಾಗವಹಿಸಲು ಮೂರನೇ ಟೆಸ್ಟ್‌ ನಿಂದ ತಂಡದಿಂದ ಹೊರಗುಳಿದಿದ್ದ ವೇಗಿ ಮುಕೇಶ್ ಕುಮಾರ್ ರಾಂಚಿಯಲ್ಲಿ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.

Trending News