Rishabh Pant Accident: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಡೆಹ್ರಾಡೂನ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಬೆಳಗ್ಗೆ ತಮ್ಮ ಮರ್ಸಿಡಿಸ್ ಕಾರಿನಲ್ಲಿ ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರು ಅಪಘಾತವಾಗಿ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಪಂತ್ ಅವರ ಮನೆ ರೂರ್ಕಿಯಲ್ಲಿದೆ. ಅವರ ಕಾರು ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಸುಟ್ಟು ಕರಕಲಾಗಿದೆ. ಸದ್ಯ ಹರಿಯಾಣ ರೋಡ್‌ವೇಸ್‌ನ ಚಾಲಕ ಮತ್ತು ಕಂಡಕ್ಟರ್ ರಿಷಬ್ ಪಂತ್ ಅವರ ಜೀವವನ್ನು ಉಳಿಸಿದ್ದಾರೆ.
ಪಂತ್ ಅವರ ಮೆದುಳು ಮತ್ತು ಬೆನ್ನುಮೂಳೆಯ ಎಂಆರ್‌ಐ ರಿಸಲ್ಟ್ ಬಂದಿದ್ದು, ಅದರಲ್ಲಿ ಎಲ್ಲವೂ ಸಾಮಾನ್ಯವಾಗಿದೆ ಎಂದು ಹೇಳಲಾಗಿದೆ. 25 ವರ್ಷದ ಪಂತ್ ಅವರ ಮುಖದ ಮತ್ತು ದೇಹದ ಗಾಯಗಳನ್ನು ಸರಿಪಡಿಸಲು ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಆದರೆ ನೋವು ಮತ್ತು ಊತದಿಂದಾಗಿ ಅವರ ಪಾದ ಮತ್ತು ಮೊಣಕಾಲಿನ MRI ಸ್ಕ್ಯಾನ್ ಅನ್ನು ಶನಿವಾರಕ್ಕೆ ಮುಂದೂಡಲಾಗಿದೆ.
ಇದನ್ನೂ ಓದಿ: Rishabh pant : ಉರಿಯುತ್ತಿದ್ದ ಕಾರಿನ ಪಕ್ಕ ಬಿದ್ದಿದ್ದ ರಿಷಬ್ ಪಂತ್.. Watch ವಿಡಿಯೋ..!
ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯ ವೈದ್ಯರು ಮೊಣಕಾಲಿನ ಅಸ್ಥಿರಜ್ಜು ಗಾಯದ ಬಗ್ಗೆ ಶಂಕಿಸಿದ್ದಾರೆ. ಬಿಸಿಸಿಐ ಕೂಡ ಹೇಳಿಕೆ ಬಿಡುಗಡೆ ಮಾಡಿದ್ದು, ರಿಷಭ್ ಅವರ ಹಣೆಯ ಮೇಲೆ ಎರಡು ಗಾಯಗಳು, ಬಲ ಮೊಣಕಾಲು ಮುರಿದಿದೆ. ಬಲ ಮಣಿಕಟ್ಟು, ಪಾದ ಮತ್ತು ಬೆನ್ನಿಗೆ ಗಾಯಗಳಾಗಿವೆ ಎಂದಿದೆ.
ಆದರೆ ಇದೆಲ್ಲದರ ನಡುವೆ ಇಂತಹ ಭೀಕರ ಅಪಘಾತದಲ್ಲಿ ರಿಷಬ್ ಪಂತ್ ಸುರಕ್ಷತೆ ಬಗ್ಗೆ ಸಾರಿಗೆ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ರಿಷಬ್ ಪಂತ್ ಬದುಕುಳಿದಿರುವುದು ಪವಾಡ ಎಂದು ಸಾರಿಗೆ ತಜ್ಞ ನಿತಿನ್ ದೋಸ್ಸಾ ಹೇಳಿದ್ದಾರೆ. ಸರಿಯಾಗಿ ವಿಶ್ರಮಿಸದಿರುವ ಕಾರಣ ಡ್ರೈವಿಂಗ್ ಮಾಡುವಾಗ ನಿದ್ದೆ ಬಂದಿರಬೇಕು. ಆ ಸಂದರ್ಭದಲ್ಲಿ ಮಾತನಾಡಲು ಯಾರೂ ಇರುವುದಿಲ್ಲ. ಮರ್ಸಿಡಿಸ್‌ನ ಭದ್ರತಾ ವೈಶಿಷ್ಟ್ಯಗಳಿಂದಾಗಿ ಪಂತ್ ಅವರ ಜೀವ ಉಳಿದಿದೆ. ಈ ವಾಹನವು ವಿಶೇಷ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: IPL 2023 ರಿಂದ ಪಂತ್ ಹೊರಗುಳಿಯುವುದು ಖಚಿತ : ಈ ಆಟಗಾರನಿಗೆ ಡೆಲ್ಲಿ ನಾಯಕತ್ವ ಪಟ್ಟ
ಜನವರಿ 3 ರಂದು ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟಿ20 ಅಂತಾರಾಷ್ಟ್ರೀಯ ಮತ್ತು ಸ್ವದೇಶಿ ಏಕದಿನ ಸರಣಿಗೆ ಪಂತ್ ಪಾಲ್ಗೊಳ್ಳುವುದು ಅಸಾಧ್ಯವಾಗಿದೆ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲು ಶಕ್ತಿ ಮತ್ತು ಪರಿಸ್ಥಿತಿಯನ್ನು ಟೆಸ್ಟ್ ಮಾಡಲು ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಗೆ ಹಾಜರಾಗಬೇಕಿತ್ತು. ಅವರು ಇತ್ತೀಚೆಗೆ ಮಿರ್‌ಪುರದಲ್ಲಿ ಬಾಂಗ್ಲಾದೇಶದ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 93 ರನ್‌ಗಳ ಮ್ಯಾಚ್-ವಿನ್ನಿಂಗ್ ನಾಕ್ ಅನ್ನು ಆಡಿದ್ದರು. ಇದು ಭಾರತವನ್ನು 2-0 ಅಂತರದಲ್ಲಿ ಗೆಲ್ಲಲು ಸಹಾಯ ಮಾಡಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.