ಬಿಸಿಸಿಐ ಒತ್ತಡಕ್ಕೆ ಮಣಿದ್ರಾ ಇಶಾನ್ ಕಿಶನ್? ಮಹತ್ವದ ನಿರ್ಧಾರ!

Ishan Kishan DY Patil Tournament : ಬಿಸಿಸಿಐ ಕಠಿಣ ಎಚ್ಚರಿಕೆಯ ನಂತರ ಡಿವೈ ಪಾಟೀಲ್ ಟೂರ್ನಿಯಲ್ಲಿ ಇಶಾನ್ ಕಿಶನ್ ಮತ್ತೆ ಕ್ರಿಕೆಟ್ ಆಡಲಿದ್ದಾರೆ ಎಂದು ವರದಿಯಾಗಿದೆ.

Written by - Chetana Devarmani | Last Updated : Feb 14, 2024, 07:27 AM IST
  • ಬಿಸಿಸಿಐ ಕಠಿಣ ಎಚ್ಚರಿಕೆ
  • ಇಶಾನ್ ಕಿಶನ್ ಮಹತ್ವದ ನಿರ್ಧಾರ!
  • ಡಿವೈ ಪಾಟೀಲ್ ಟೂರ್ನಿಯಲ್ಲಿ ಇಶಾನ್ ಕಿಶನ್
ಬಿಸಿಸಿಐ ಒತ್ತಡಕ್ಕೆ ಮಣಿದ್ರಾ ಇಶಾನ್ ಕಿಶನ್? ಮಹತ್ವದ ನಿರ್ಧಾರ! title=

Ishan Kishan News : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚೆಗೆ ಮಹತ್ವದ ಘೋಷಣೆ ಮಾಡಿದೆ. ಅದರಂತೆ ಭಾರತ ತಂಡದ ಎಲ್ಲ ಆಟಗಾರರು ರಣಜಿ ಟ್ರೋಫಿ ಪಂದ್ಯಗಳಲ್ಲಿ ತಮ್ಮ ರಾಜ್ಯ ತಂಡಕ್ಕೆ ಕಡ್ಡಾಯವಾಗಿ ಆಡಬೇಕು ಎಂದು ಹೇಳಲಾಗಿದೆ. ಇಂಗ್ಲೆಂಡ್ ಸರಣಿಯಲ್ಲಿ ಸೇರ್ಪಡೆಗೊಂಡಿರುವ ಆಟಗಾರರನ್ನು ಹೊರತುಪಡಿಸಿ ಎಲ್ಲರೂ ಕಟ್ಟುನಿಟ್ಟಾಗಿ ಆಡುವಂತೆ ಎಚ್ಚರಿಕೆ ನೀಡಲಾಗಿದೆ. ಹೆಚ್ಚಿನ ಆಟಗಾರರು ರಣಜಿ ಟ್ರೋಫಿ ಪಂದ್ಯಗಳಿಂದ ಹೊರಗುಳಿಯುತ್ತಿರುವುದರಿಂದ ಭಾರತ ತಂಡದ ಬ್ಯಾಟಿಂಗ್ ಗುಣಮಟ್ಟ ಕುಸಿತಕ್ಕೆ ಬಿಸಿಸಿಐ ವಿಷಾದ ವ್ಯಕ್ತಪಡಿಸಿದೆ. ಇದಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಈ ಎಚ್ಚರಿಕೆಯ ಬೆನ್ನಲ್ಲೇ ವಿಕೆಟ್ ಕೀಪರ್ ಕಮ್‌ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಸುದೀರ್ಘ ಸಮಯದ ಬಳಿಕ ಮತ್ತೆ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ, ಇಶಾನ್ ಕಿಶನ್ 2024 ರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗುವ ಮೊದಲು ಮುಂಬೈನಲ್ಲಿ ಡಿವೈ ಪಾಟೀಲ್ ಪಂದ್ಯಾವಳಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ ಫೆಬ್ರವರಿ 16ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಗೆ ಇಶಾನ್ ಕಿಶನ್ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ವಿಶ್ವಕಪ್ ನಂತರದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕಿಶನ್ ಅವರನ್ನು ಸೇರಿಸಲಾಯಿತು.

ಇದನ್ನೂ ಓದಿ: ಮೂರನೇ ಟೆಸ್ಟ್‌ಗೂ ಮುನ್ನ ಹೊಸ ಅವತಾರದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ.. ಧೋನಿಯನ್ನು ನೆನಪಿಸಿಕೊಂಡ ಫ್ಯಾನ್ಸ್‌! 

ನಂತರ ತನಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದಿದ್ದರು. ಆ ನಂತರ ನಡೆದ ಸರಣಿಗಳಲ್ಲಿ ಇಶಾನ್ ಕಿಶನ್ ಹೆಸರು ಬರಲಿಲ್ಲ. ಹೀಗಿರುವಾಗ ಡಿವೈ ಪಾಟೀಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮುಂಬರುವ ಐಪಿಎಲ್ ಸರಣಿಯಲ್ಲಿ ಇಶಾನ್ ಕಿಶನ್ ಮೇಲಿನ ನಿರೀಕ್ಷೆ ಹೆಚ್ಚಲಿದೆ. ಇಶಾನ್ ಕಿಶನ್ ಕೂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಸರಣಿಯನ್ನು ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಧ್ರುವ್ ಜುರೆಲ್ ಉಳಿದ ಪಂದ್ಯಗಳನ್ನು ಆಡುವ ನಿರೀಕ್ಷೆಯಿದ್ದು, ಕೆಎಸ್ ಭರತ್ ವಿಕೆಟ್ ಕೀಪರ್ ಆಗಿದ್ದಾರೆ.

ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಆಡಿದರೆ ಮತ್ತೆ ಭಾರತ ತಂಡದಲ್ಲಿ ಅವಕಾಶ ಸಿಗಲಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದರು. ಇಶಾನ್ ರಣಜಿ ಟ್ರೋಫಿಯಲ್ಲಿ ಜಾರ್ಖಂಡ್ ಪರ ಆಡುತ್ತಿದ್ದಾರೆ. ಮುಂದಿನ ತಿಂಗಳು ಐಪಿಎಲ್ ಆರಂಭವಾಗಲಿದ್ದು, ಇಶಾನ್ ರಣಜಿ ಪಂದ್ಯಗಳಿಂದ ಹೊರಗುಳಿಯುವ ನಿರೀಕ್ಷೆಯಿದೆ. ಮಾನಸಿಕ ವಿರಾಮ ತೆಗೆದುಕೊಂಡಿದ್ದ ಇಶಾನ್ ಕಿಶನ್ ದುಬೈನಲ್ಲಿ ಧೋನಿ ಜೊತೆ ಪಾರ್ಟಿ ಮಾಡುತ್ತಿದ್ದ ದೃಶ್ಯ ಕಂಡುಬಂತು. 

ಇದನ್ನೂ ಓದಿ: IPL 2024 ಪ್ರಾರಂಭ ದಿನಾಂಕ ಮತ್ತು ಸಂಪೂರ್ಣ ವೇಳಾಪಟ್ಟಿ.!

ಬಿಸಿಸಿಐ ಇಶಾನ್ ಕಿಶನ್ ಅವರಿಗೆ ದೇಶೀಯ ಪಂದ್ಯಗಳನ್ನು ಆಡುವಂತೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ ಅವರು ಭಾಗವಹಿಸಲಿಲ್ಲ. ಇದೇ ಕಾರಣಕ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳದಿರಲು ಕಾರಣ ಎಂದೂ ಹೇಳಲಾಗುತ್ತಿದೆ. 2023ರ ODI ವಿಶ್ವಕಪ್ ನಂತರ ಆಸ್ಟ್ರೇಲಿಯಾ ವಿರುದ್ಧದ T20 ಸರಣಿಯಲ್ಲಿ ಇಶಾನ್ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ಏಷ್ಯಾಕಪ್, ಕೆರಿಬಿಯನ್ ಪ್ರವಾಸ ಮತ್ತು ಇತರ ಸರಣಿಗಳಲ್ಲಿ ಅವರನ್ನು ನಿರಂತರವಾಗಿ ತಂಡದಲ್ಲಿ ಸೇರಿಸಲಾಗಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News