Viral video cricket IPL: ಬಿಸಿಸಿಐ ಖಡಕ್‌ ವಾರ್ನಿಂಗ್‌ ನಡುವೆಯೂ.. ಐಪಿಎಲ್‌ಗೆ ಹಾರ್ದಿಕ್ ಪಾಂಡ್ಯ ಜೊತೆ ಇಶಾನ್‌ ಕಿಶನ್ ತಯಾರಿ!‌ ವಿಡಿಯೋ ವೈರಲ್‌

Ishan Kishan Viral Video: ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಇತ್ತೀಚೆನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ.. ಇದೀಗ ಅವರ ಹೊಸ ವಿಡಿಯೋ ಕಾಣಿಸಿಕೊಂಡಿದ್ದು.. ಮತ್ತೆ ಈ ಸ್ಟಾರ್‌ ಸುದ್ದಿಯಲ್ಲಿದ್ದಾರೆ..   

Written by - Savita M B | Last Updated : Feb 23, 2024, 10:53 AM IST
  • ಇಶಾನ್ ಕಿಶನ್ ಸದ್ಯ ಚರ್ಚೆಯ ವಿಷಯವಾಗಿದ್ದಾರೆ
  • ಅಂದಿನಿಂದ ಭಾರತೀಯ ಜೆರ್ಸಿಯಲ್ಲಿ ಕಾಣಿಸಿಕೊಳ್ಳದ ಇಶಾನ್‌ ಕಿಶನ್‌
  • ಇಶಾನ್‌ ಕಿಶನ್‌ ದೇಶಿಯ ಕ್ರಿಕೆಟ್‌ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ.. ಐಪಿಎಲ್ 2024 ರ ತಯಾರಿಯಲ್ಲಿದ್ದಾರೆ.
Viral video cricket IPL: ಬಿಸಿಸಿಐ ಖಡಕ್‌ ವಾರ್ನಿಂಗ್‌ ನಡುವೆಯೂ.. ಐಪಿಎಲ್‌ಗೆ ಹಾರ್ದಿಕ್ ಪಾಂಡ್ಯ ಜೊತೆ ಇಶಾನ್‌ ಕಿಶನ್ ತಯಾರಿ!‌ ವಿಡಿಯೋ ವೈರಲ್‌ title=

Ishan Kishan Hardik Pandya training session video: ಇಶಾನ್ ಕಿಶನ್ ಸದ್ಯ ಚರ್ಚೆಯ ವಿಷಯವಾಗಿದ್ದಾರೆ.. ಇತ್ತೀಚೆಗಷ್ಟೇ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಿದ್ದು.. ಇದರಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕೆ ಮೊದಲು ಇಶಾನ್ ಮಾನಸಿಕ ಒತ್ತಡವನ್ನು ಉಲ್ಲೇಖಿಸಿ ತಮ್ಮ ಹೆಸರನ್ನು ಹಿಂಪಡೆದಿದ್ದರು.. ಅಂದಿನಿಂದ ಭಾರತೀಯ ಜೆರ್ಸಿಯಲ್ಲಿ ಕಾಣಿಸಿಕೊಳ್ಳದ ಇಶಾನ್‌ ಕಿಶನ್‌ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ 2024 ರಲ್ಲಿ ಕಿಶನ್ ಒಂದೇ ಒಂದು ಪಂದ್ಯವನ್ನು ಆಡಿಲ್ಲ..

ಇದನ್ನೂ ಓದಿ-IPL 2024 Fixture: ಡೆಲ್ಲಿ ಕ್ಯಾಪಿಟಲ್ಸ್‌ ಪಂದ್ಯ ಸ್ಥಳಾಂತರ: ಮತ್ತೊಂಮ್ಮೆ ಡಿಡಿಸಿಎ ಸ್ಥಳಕ್ಕಾಗಿ ಹೆಣೆದಾಟ!

ಇಶಾನ್‌ ಕಿಶನ್‌ ದೇಶಿಯ ಕ್ರಿಕೆಟ್‌ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ.. ಐಪಿಎಲ್ 2024 ರ ತಯಾರಿಯಲ್ಲಿದ್ದಾರೆ.. ಇದಕ್ಕೂ ಮುನ್ನ  ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡದ ಎಲ್ಲ ಆಟಗಾರರಿಗೆ ಪತ್ರ ಬರೆದಿದ್ದರು.. ಈ ರೀತಿಯ ಖಡಕ್‌ ವಾರ್ನಿಂಗ್‌ ಮಧ್ಯವೂ ಎಡಗೈ ಬ್ಯಾಟ್ಸ್‌ಮನ್‌ನ ವೀಡಿಯೊ ಇದೀಗ ಹೊರಬಿದ್ದಿದ್ದು.. ಇಶಾನ್‌ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದಾರೆ.. ಈ ವಿಡಿಯೋವನ್ನು ಕಿಶನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ-IPL 2024 Update: ಗುಜರಾತ್ ಟೈಟಾನ್ಸ್‌ಗೆ ಬಿಗ್​ ಶಾಕ್..! ಐಪಿಎಲ್ 2024ರಿಂದ ಮೊಹಮ್ಮದ್ ಶಮಿ ಔಟ್!!

ವಿಡಿಯೋದಲ್ಲಿ ಬೃಇ ಇಶಾನ್‌ ಕಿಶನ್‌ ಮಾತ್ರವಲ್ಲ ಆರಂಭದಲ್ಲಿ ಪಾಂಡ್ಯ ಸಹ ಕಾಣಿಸಿಕೊಂಡಿದ್ದಾರೆ... ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಎಲ್ಲ ಆಟಗಾರರಿಗೆ ರಣಜಿ ಟ್ರೋಫಿ ಆಡಲು ಭಾರತೀಯ ಕ್ರಿಕೆಟ್ ಮಂಡಳಿ ಆದೇಶ ನೀಡಿತ್ತು. ಗಾಯಗೊಂಡ ಎಷ್ಟೋ ಆಟಗಾರರು ತಂಡದಲ್ಲಿದ್ದರೂ ಇಶಾನ್‌ ಕಿಶನ್‌ ಮಾತ್ರ ದೇಶೀಯ ಪಂದ್ಯಾವಳಿಯಲ್ಲಿ ಭಾಗವಹಿಸಲಿಲ್ಲ.. ಈ ಮಧ್ಯ ಅವರು ಬರೋಡಾದಲ್ಲಿ ಐಪಿಎಲ್ 2024 ಕ್ಕೆ ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News