ಶುಬ್ಮನ್ ಗಿಲ್ ಜೊತೆ ಇಶಾನ್‌ ಕಿಶನ್ ಅಶ್ಲೀಲ‌ ವರ್ತನೆ, ವಿಡಿಯೋ ವೈರಲ್

Ishan Kishan Shubman Gill video viral : ವಿಮಾನ ನಿಲ್ದಾಣದಲ್ಲಿ ಇಶಾನ್ ಕಿಶನ್ ಮತ್ತು ಶುಬ್ಮನ್ ಗಿಲ್ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.   

Written by - Chetana Devarmani | Last Updated : Oct 31, 2023, 03:15 PM IST
  • ಇಶಾನ್ ಕಿಶನ್ ಮತ್ತು ಶುಬ್ಮನ್ ಗಿಲ್ ಅವರ ವಿಡಿಯೋ
  • ಮುಂಬೈ ವಿಮಾನ ನಿಲ್ದಾಣದಲ್ಲಿ ಸೆರೆಯಾದ ವಿಡಿಯೋ
  • ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆದ ವಿಡಿಯೋ
ಶುಬ್ಮನ್ ಗಿಲ್ ಜೊತೆ ಇಶಾನ್‌ ಕಿಶನ್ ಅಶ್ಲೀಲ‌ ವರ್ತನೆ, ವಿಡಿಯೋ ವೈರಲ್ title=

Shubman Gill Ishan Kishan : ಟೀಂ ಇಂಡಿಯಾ ವಿಶ್ವಕಪ್‌ನಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದೆ. ನವೆಂಬರ್ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಭಾರತ ಮ್ಯಾಚ್‌ ಆಡಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 100 ರನ್‌ಗಳ ಭರ್ಜರಿ ಗೆಲುವಿನ ನಂತರ ಭಾರತ ತಂಡ ಮುಂಬೈಗೆ ಬಂದಿಳಿದಿದೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಇಶಾನ್ ಕಿಶನ್ ಮತ್ತು ಶುಬ್ಮನ್ ಗಿಲ್ ಅವರ ವೀಡಿಯೊ ವೈರಲ್‌ ಆಗಿದೆ. ಕ್ಲಿಪ್‌ನಲ್ಲಿ, ತಂಡದ ಸದಸ್ಯರು ತಮ್ಮ ಹೋಟೆಲ್‌ಗೆ ಹೋಗಲು ತಯಾರಿ ನಡೆಸುತ್ತಿರುವಾಗ, ಇಶಾನ್ ತನ್ನ ಮೊಬೈಲ್ ಫೋನ್‌ನಲ್ಲಿ ಮುಳುಗಿದ್ದು,  ಗಿಲ್‌ ಜೊತೆ ಮೋಜು ಮಾಡುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ರನ್ ಕಲೆ ಹಾಕುವಲ್ಲಿ ಗಿಲ್ ವೈಫಲ್ಯ ! ಮುಂದಿನ ಪಂದ್ಯದಲ್ಲಿ ಒಪನರ್ ಆಗಿ ರೋಹಿತ್ ಗೆ ಸಾಥ್ ನೀಡುವುದು ಈ ಆಟಗಾರ 

ವೀಡಿಯೊದಲ್ಲಿ, ಗಿಲ್ ಯಾರಿಗೋ ಸಂದೇಶ ಕಳುಹಿಸುವಲ್ಲಿ ನಿರತರಾಗಿರುವಂತೆ ಕಾಣುತ್ತದೆ. ಬಸ್‌ ಹತ್ತುವ ಮುನ್ನ ಶುಭ್​ಮನ್ ಗಿಲ್ ಜೊತೆ ಇಶಾನ್ ಕಿಶನ್ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ. ಇದರಿಂದ ಗಿಲ್ ಒಂದು ಕ್ಷಣ ಕೋಪಗೊಂಡಂತೆ ಭಾಸವಾಗುತ್ತದೆ. ಈ ವೀಡಿಯೊ ಇಂಟರ್ನೆಟ್ ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

 

 

ವಿಶ್ವಕಪ್ 2023 ರಲ್ಲಿ ಗಿಲ್ ಇದುವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಅರ್ಧಶತಕವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಪಾಕಿಸ್ತಾನದ ವಿರುದ್ಧ 16 ರನ್, ಬಾಂಗ್ಲಾದೇಶ ವಿರುದ್ಧ 53, ನ್ಯೂಜಿಲೆಂಡ್ ವಿರುದ್ಧ 26 ರನ್ ಮತ್ತು ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಪಂದ್ಯದಲ್ಲಿ 9 ರನ್ ಗಳಿಸಿದರು. ಮತ್ತೊಂದೆಡೆ, ಇಶಾನ್ ಕಿಶನ್, ಮೊದಲ ಎರಡು ಪಂದ್ಯಗಳ ನಂತರ, ಭಾರತ ತಂಡದ ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ಪಡೆದಿಲ್ಲ. 

ಇದನ್ನೂ ಓದಿ: 'ನಾನು ಹೇಳ್ತಾನೆ ಇದ್ದೆ...' ಕುಲದೀಪ್ ಯಾದವ್ ವಿಷಾದ! ರೋಹಿತ್‌ ಶರ್ಮಾ ಆಟಗಾರರ ಮಾತೇ ಕೇಳಿಲ್ವಾ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News