India vs Sri Lanka: ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ಕೊಡ್ತಿದ್ದಾರೆ ಕ್ರಿಕೆಟ್ ಹೀರೋ? ಲಂಕಾದಲ್ಲಿ ನಡುಕ ಶುರು!

India vs Sri Lanka, T20 Series: ಈ ಆಟಗಾರ ಎಷ್ಟು ಅಪಾಯಕಾರಿ ಎಂದರೆ ಶ್ರೀಲಂಕಾ ತಂಡಕ್ಕೆ ಈ ಸುದ್ದಿ ತಿಳಿದರೆ ಅವರ ಪಾಳೆಯದಲ್ಲಿ ಭೀತಿಯ ಅಲೆ ಏಳಬಹುದು. ಈ ಭಾರತೀಯ ಆಟಗಾರ ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದ್ದು, ಇಡೀ ತಂಡವನ್ನು ಏಕಾಂಗಿಯಾಗಿ ನಾಶಪಡಿಸುವ ಸಾಮಾರ್ಥ್ಯ ಹೊಂದಿದ್ದಾರೆ

Written by - Bhavishya Shetty | Last Updated : Dec 27, 2022, 04:10 PM IST
    • ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಸರಣಿ ಜನವರಿ 3 ರಿಂದ ಆರಂಭ
    • ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ತಂಡವನ್ನು ಇನ್ನಷ್ಟೇ ಪ್ರಕಟ ಮಾಡಬೇಕಿದೆ
    • ಶ್ರೀಲಂಕಾ ಕ್ರಿಕೆಟ್ ತಂಡದ ದೊಡ್ಡ ಶತ್ರು ತಂಡಕ್ಕೆ ಹಠಾತ್ ಪ್ರವೇಶ ಮಾಡುತ್ತಿದ್ದಾರೆ
India vs Sri Lanka: ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ಕೊಡ್ತಿದ್ದಾರೆ ಕ್ರಿಕೆಟ್ ಹೀರೋ? ಲಂಕಾದಲ್ಲಿ ನಡುಕ ಶುರು! title=
Ravindra Jadeja

India vs Sri Lanka, T20 Series: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿ ಜನವರಿ 3 ರಿಂದ ಆರಂಭವಾಗಲಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ತಂಡವನ್ನು ಇನ್ನಷ್ಟೇ ಪ್ರಕಟ ಮಾಡಬೇಕಿದೆ. ಈ ಮಧ್ಯೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಶ್ರೀಲಂಕಾ ಕ್ರಿಕೆಟ್ ತಂಡದ ದೊಡ್ಡ ಶತ್ರು ತಂಡಕ್ಕೆ ಹಠಾತ್ ಪ್ರವೇಶ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಆಟಗಾರ ಎಷ್ಟು ಅಪಾಯಕಾರಿ ಎಂದರೆ ಶ್ರೀಲಂಕಾ ತಂಡಕ್ಕೆ ಈ ಸುದ್ದಿ ತಿಳಿದರೆ ಅವರ ಪಾಳೆಯದಲ್ಲಿ ಭೀತಿಯ ಅಲೆ ಏಳಬಹುದು. ಈ ಭಾರತೀಯ ಆಟಗಾರ ಟಿ20 ಸರಣಿಯಲ್ಲಿ ಶ್ರೀಲಂಕಾ ತಂಡಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಲಿದ್ದು, ಇಡೀ ತಂಡವನ್ನು ಏಕಾಂಗಿಯಾಗಿ ನಾಶಪಡಿಸುವ ಸಾಮಾರ್ಥ್ಯ ಹೊಂದಿದ್ದಾರೆ.

ಇದನ್ನೂ ಓದಿ: ದ್ವಿಶತಕ ಬಾರಿಸಿದ ಡೇವಿಡ್ ವಾರ್ನರ್: ಮೆಲ್ಬೋರ್ನ್ ಮೈದಾನದಲ್ಲಿ ಈ ಇತಿಹಾಸ ನಿರ್ಮಾಣ

'ಕ್ರಿಕ್‌ಬಜ್' ವರದಿ ಪ್ರಕಾರ, ಶ್ರೀಲಂಕಾ ತಂಡದ ದೊಡ್ಡ ಶತ್ರು ರವೀಂದ್ರ ಜಡೇಜಾ ಟಿ 20 ಸರಣಿಗಾಗಿ ಟೀಂ ಇಂಡಿಯಾಕ್ಕೆ ಮರಳಲಿದ್ದಾರೆ. ಇದರಿಂದಾಗಿ ಶ್ರೀಲಂಕಾ ತಂಡವು ಭಯಭೀತರಾಗಲಿದೆ. ಟಿ20 ಸರಣಿಯ ಮೂರು ಪಂದ್ಯಗಳು ಮುಂಬೈ, ಪುಣೆ ಮತ್ತು ರಾಜ್‌ಕೋಟ್‌ನಲ್ಲಿ ನಡೆಯಲಿದ್ದು, ರವೀಂದ್ರ ಜಡೇಜಾ ಶ್ರೀಲಂಕಾ ತಂಡಕ್ಕೆ ದೊಡ್ಡ ಪೆಟ್ಟಾಗಿ ಪರಿಣಮಿಸಲಿದ್ದಾರೆ.

ರವೀಂದ್ರ ಜಡೇಜಾ ಅವರು ವಿಶ್ವದ ಅತ್ಯಂತ ಅಪಾಯಕಾರಿ ಸ್ಪಿನ್ನರ್‌ಗಳಲ್ಲಿ ಒಬ್ಬರು. ಜೊತೆಗೆ ತಮ್ಮ ಬ್ಯಾಟಿಂಗ್ ಮತ್ತು ವೇಗದ ಫೀಲ್ಡಿಂಗ್‌ನಿಂದ ಎದುರಾಳಿ ತಂಡವನ್ನು ಏಕಾಂಗಿಯಾಗಿ ಆಕ್ರಮಣ ಮಾಡುವ ಶಕ್ತಿ ಹೊಂದಿದ್ದಾರೆ. ಇವೆಲ್ಲದರ ಜೊತೆಗೆ ರವೀಂದ್ರ ಜಡೇಜಾ ಅವರು ಭಾರತದ ಪಿಚ್‌ಗಳಲ್ಲಿ ವಿಶ್ವದ ಅತ್ಯಂತ ಅಪಾಯಕಾರಿ ಸ್ಪಿನ್ನರ್‌ಗಳಲ್ಲಿ ಒಬ್ಬರು.

ಸಾಮಾನ್ಯ ನಾಯಕ ರೋಹಿತ್ ಶರ್ಮಾ ಹೆಬ್ಬೆರಳಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಮತ್ತು ಅವರು ಶ್ರೀಲಂಕಾ ವಿರುದ್ಧದ ಈ T20 ಸರಣಿಯಿಂದ ಹೊರಗುಳಿಯಬಹುದು. ಇಂತಹ ಪರಿಸ್ಥಿತಿಯಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ. 31 ಆಗಸ್ಟ್ 2022 ರಂದು, ರವೀಂದ್ರ ಜಡೇಜಾ ಏಷ್ಯಾ ಕಪ್ 2022 ರಲ್ಲಿ ಹಾಂಗ್ ಕಾಂಗ್ ವಿರುದ್ಧ ತಮ್ಮ ಕೊನೆಯ T20 ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಟೀಂ ಇಂಡಿಯಾದ ಅಪಾಯಕಾರಿ ಆಲ್ ರೌಂಡರ್ ರವೀಂದ್ರ ಜಡೇಜಾ 4 ತಿಂಗಳ ನಂತರ ಟೀಂ ಇಂಡಿಯಾಕ್ಕೆ ಮರಳಲಿದ್ದಾರೆ.

ಶ್ರೀಲಂಕಾ ವಿರುದ್ಧದ ಈ ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಬಹುದು. ಕೆಎಲ್ ರಾಹುಲ್ ಕೂಡ ಈ ಟಿ20 ಸರಣಿಯ ಭಾಗವಾಗುವುದಿಲ್ಲ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆರಂಭಿಕ ಆಟಗಾರ ಪೃಥ್ವಿ ಶಾಗೆ ಅವಕಾಶ ನೀಡಬಹುದು.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದ ಸಂಭಾವ್ಯ ತಂಡ:

ಶುಭಮನ್ ಗಿಲ್, ಪೃಥ್ವಿ ಶಾ, ಇಶಾನ್ ಕಿಶನ್ (WK), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (c), ರಿಷಭ್ ಪಂತ್ (WK), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್, ಯುಶ್ವೇಂದ್ರ ಸಿಂಗ್ ಚಾಹಲ್, , ದೀಪಕ್ ಹೂಡಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅಕ್ಷರ್ ಪಟೇಲ್.

ಭಾರತ vs ಶ್ರೀಲಂಕಾ ಟಿ20 ಸರಣಿ

  • ಮೊದಲ ಟಿ20 ಪಂದ್ಯ, ಜನವರಿ 3, ಸಂಜೆ 7.00, ಮುಂಬೈ
  • 2ನೇ ಟಿ20 ಪಂದ್ಯ, ಜನವರಿ 5, ರಾತ್ರಿ 7.00, ಪುಣೆ
  • ಮೂರನೇ ಟಿ20 ಪಂದ್ಯ, ಜನವರಿ 7, ರಾತ್ರಿ 7.00, ರಾಜ್‌ಕೋಟ್

ಇದನ್ನೂ ಓದಿ: ಜನವರಿ ಒಂದರಿಂದ ಬ್ಯಾಂಕ್ ಲಾಕರ್, ಕ್ರೆಡಿಟ್ ಕಾರ್ಡ್‌ ನಿಯಮಗಳಲ್ಲಿ ಬದಲಾವಣೆ

ಭಾರತ vs ಶ್ರೀಲಂಕಾ ಏಕದಿನ ಸರಣಿ

  • ಮೊದಲ ODI, ಜನವರಿ 10, ಮಧ್ಯಾಹ್ನ 1.30, ಗುವಾಹಟಿ
  • ಎರಡನೇ ODI, ಜನವರಿ 12, ಮಧ್ಯಾಹ್ನ 1.30, ಕೋಲ್ಕತ್ತಾ

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News