IPL 2023: ಅಂದು ಪಾನಿಪೂರಿ ಮಾರುತ್ತಿದ್ದ… ಇಂದು ವಿಶ್ವ ಕ್ರಿಕೆಟ್’ನಲ್ಲಿ ಯಾರೂ ಬರೆಯದ ಸೂಪರ್ ದಾಖಲೆಯನ್ನೇ ಬರೆದ ಈ ಕ್ರಿಕೆಟಿಗ!

Yashasvi Jaiswal: ಯಶಸ್ವಿ ಜೈಸ್ವಾಲ್ 47 ಎಸೆತಗಳಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್‌ ಗಳ ನೆರವಿನಿಂದ ಅಜೇಯ 98 ರನ್ ಗಳಿಸಿದರು. ಈ ಮೂಲಕ ಕೆಎಲ್ ರಾಹುಲ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ದಾಖಲೆಯನ್ನು ಮುರಿದರು. 13 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದ ಯಶಸ್ವಿ, ಐಪಿಎಲ್‌ ನಲ್ಲಿ ವೇಗದ ಅರ್ಧಶತಕ ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

Written by - Bhavishya Shetty | Last Updated : May 12, 2023, 08:23 AM IST
    • ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕವನ್ನು ಗಳಿಸಿದ ಯಶಸ್ವಿ ಜೈಸ್ವಾಲ್
    • ಜೈಸ್ವಾಲ್ 47 ಎಸೆತಗಳಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್‌ ಗಳ ನೆರವಿನಿಂದ ಅಜೇಯ 98 ರನ್ ಗಳಿಸಿದರು.
    • ಈ ಮೂಲಕ ಕೆಎಲ್ ರಾಹುಲ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ದಾಖಲೆಯನ್ನು ಮುರಿದರು
IPL 2023: ಅಂದು ಪಾನಿಪೂರಿ ಮಾರುತ್ತಿದ್ದ… ಇಂದು ವಿಶ್ವ ಕ್ರಿಕೆಟ್’ನಲ್ಲಿ ಯಾರೂ ಬರೆಯದ ಸೂಪರ್ ದಾಖಲೆಯನ್ನೇ ಬರೆದ ಈ ಕ್ರಿಕೆಟಿಗ! title=
Yashasvi Jaiswal

IPL 2023- Yashasvi Jaiswal: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್‌ ಗೆ ಒಂಬತ್ತು ವಿಕೆಟ್‌ ಗಳ ಜಯವನ್ನು ತಂದುಕೊಟ್ಟ, ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗದ ಅರ್ಧಶತಕವನ್ನು ಗಳಿಸಿದ ಯಶಸ್ವಿ ಜೈಸ್ವಾಲ್, “ಪಂದ್ಯದಲ್ಲಿ ಕೊನೆಯವರೆಗೂ ಉಳಿದುಕೊಂಡು ತಂಡಕ್ಕೆ ಗೆಲುವು ತಂದುಕೊಡುವ ಕೌಶಲ್ಯವನ್ನು ಕಲಿಯುತ್ತಿದ್ದೇನೆ” ಎಂದು ಹೇಳಿದರು.

ಇದನ್ನೂ ಓದಿ: ಇನ್ನು 51 ದಿನ ಈ ರಾಶಿಯವರ ಜೀವನದಲ್ಲಿ ಹರಿಯುವುದು ಸಂತಸ ಹೊನಲು! ಹಣದ ಸಮಸ್ಯೆಯಿಂದ ಸಿಗುವುದು ಮುಕ್ತಿ

ಕೊಲ್ಕತ್ತಾ ನೈಟ್ ರೈಡರ್ಸ್ ಎಂಟು ವಿಕೆಟ್ ಗೆ 149 ರನ್ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 41 ಎಸೆತಗಳು ಬಾಕಿ ಇರುವಾಗಲೇ ಜಯ ಸಾಧಿಸಿತು. ಜೈಸ್ವಾಲ್ 47 ಎಸೆತಗಳಲ್ಲಿ 12 ಬೌಂಡರಿ ಹಾಗೂ 5 ಸಿಕ್ಸರ್‌ ಗಳ ನೆರವಿನಿಂದ ಅಜೇಯ 98 ರನ್ ಗಳಿಸಿದರು. ಈ ಮೂಲಕ ಕೆಎಲ್ ರಾಹುಲ್ ಮತ್ತು ಪ್ಯಾಟ್ ಕಮ್ಮಿನ್ಸ್ ಅವರ ದಾಖಲೆಯನ್ನು ಮುರಿದರು. 13 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದ ಯಶಸ್ವಿ, ಐಪಿಎಲ್‌ ನಲ್ಲಿ ವೇಗದ ಅರ್ಧಶತಕ ಬಾರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಇನ್ನು ಈ ಗೆಲುವಿನ ಬಳಿಕ ಮಾತನಾಡಿದ ಯಶಸ್ವಿ ಜೈಸ್ವಾಲ್, “ಚೆನ್ನಾಗಿ ಆಡಬೇಕು ಎಂಬುದು ನನ್ನ ಹೃದಯದಲ್ಲಿ ಸದಾ ಇರುತ್ತದೆ. ಅದನ್ನೇ ನಾನು ಭಾವಿಸುತ್ತೇನೆ. ನಾವು ಗೆದ್ದಾಗ ನನಗೆ ಸಂತೋಷವಾಗುತ್ತದೆ. ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಮತ್ತು ಅದಕ್ಕಾಗಿ ತಯಾರಿ ಮುಖ್ಯವಾಗಿರುತ್ತದೆ. ಕೊನೆಯವರೆಗೂ ಮೈದಾನದಲ್ಲಿದ್ದುಕೊಂಡು ತಂಡಕ್ಕೆ ಗೆಲುವು ತಂದುಕೊಂಡು ಕೌಶಲ್ಯವನ್ನು ಕಲಿಯುತ್ತಿದ್ದೇನೆ. ಇದು ನನ್ನ ಗುರಿ. ಇದರ ಜೊತೆಗೆ ನನ್ನ ರನ್ ರೇಟ್ ನ್ನು ಸುಧಾರಿಸಲು ಬಯಸುತ್ತೇನೆ. ಶತಕದ ಬಗ್ಗೆ ಯೋಚಿಸಲಿಲ್ಲ. ಇದರ ಜೊತೆಗೆ ಸಂಜು ಅಣ್ಣ (ಸಂಜು ಸಾಮ್ಸನ್) ಚಿಂತಿಸಬೇಡಿ ಹೀಗೆಯೇ ಆಟವಾಡುತ್ತಾ ಇರಿ ಎಂದು ಪ್ರೋತ್ಸಾಹ ನೀಡುತ್ತಲೇ ಇದ್ದರು” ಎಂದು ಹೇಳಿದರು.

ಮಾತು ಮುಂದುವರೆಸಿದ ಯಶಸ್ವಿ ಜೈಸ್ವಾಲ್ ಅವರು, “ಶ್ರೇಷ್ಠ ಆಟಗಾರರ ಜೊತೆ ಆಡುವುದು ಒಂದು ಭಾಗ್ಯ. ಯುವ ಆಟಗಾರರಿಗೆ ಐಪಿಎಲ್ ಉತ್ತಮ ವೇದಿಕೆಯಾಗಿದೆ” ಎಂದರು.

ಆ ಬಳಿಕ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್, “ನಾನೇನು ಮಾಡಬೇಕಿರಲಿಲ್ಲ. ಸ್ಟ್ರೈಕ್ ತಿರುಗಿಸುವ ಮೂಲಕ ಆತನಿಗೆ ಬ್ಯಾಟಿಂಗ್ ನೀಡುತ್ತಿದೆ. ಅವನಿಗೆ ಪವರ್‌ ಪ್ಲೇಯಲ್ಲಿ ಆಡುವುದು ಬಹಳ ಇಷ್ಟ. ಅದಕ್ಕೆ ತಕ್ಕಂತೆ, ತುಂಬಾ ಅದ್ಭುತವಾಗಿ ಆಡಿದ್ದಾನೆ” ಎಂದರು.

ಇದನ್ನೂ ಓದಿ: IPL 2023: ತಮ್ಮ ಸರ್ಜರಿ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಕೆ.ಎಲ್. ರಾಹುಲ್

ಯುಜ್ವೇಂದ್ರ ಚಹಾಲ್ ಅವರ ಬೌಲಿಂಗ್ ಬಗ್ಗೆ ಮಾತನಾಡಿದ ಸಂಜು ಸ್ಯಾಮ್ಸನ್, “ಈಗ ಚಹಾಲ್ ಅವರನ್ನು ಲೆಜೆಂಡ್ ಎಂದು ಕರೆಯಬೇಕು. ಅವರು ನಮ್ಮ ತಂಡದಲ್ಲಿ ಇರುವುದು ನಮ್ಮ ಅದೃಷ್ಟ. ಏನೂ ಹೇಳದೆ ಅವರಿಗೆ ಬೌಲಿಂಗ್ ಗೆ ಅವಕಾಶ ನೀಡಿದರೆ ಅವರು, ಆ ನಿರೀಕ್ಷೆಗೆ ತಕ್ಕಂತೆ ಬದುಕುತ್ತಾರೆ. ನಾವು ಇನ್ನೂ ಎರಡು ಕ್ವಾರ್ಟರ್‌ ಫೈನಲ್‌ ಗಳನ್ನು ಆಡಬೇಕಾಗಿದೆ. ಪ್ರತಿ ಪಂದ್ಯವೂ ಕ್ವಾರ್ಟರ್ ಫೈನಲ್‌ ನಂತೆ ಇರುವುದರಿಂದ ಒತ್ತಡ ಯಾವಾಗಲೂ ಇರುತ್ತದೆ. ಆದರೆ ತಂಡದಲ್ಲಿ ಉತ್ತಮ ವಾತಾವರಣವಿದ್ದು, ಜೋಸ್ ಬಟ್ಲರ್ ಜೈಸ್ವಾಲ್ ಅವರಿಗಾಗಿ ತಮ್ಮ ವಿಕೆಟ್ ಕಳೆದುಕೊಂಡರು. ಇದು ನಮ್ಮ ತಂಡದ ವಾತಾವರಣ ಹೇಗಿದೆ ಎಂಬುದನ್ನು ತೋರಿಸುತ್ತದೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News