World Cupನಲ್ಲಿ ರಿಷಬ್ ಪಂತ್ ಬದಲಿಗೆ ಆಡೋದು ಈ ವಿಕೆಟ್ ಕೀಪರ್! ಬ್ಯಾಟಿಂಗ್’ನಲ್ಲಿ ಧೋನಿಯನ್ನೇ ಮೀರಿಸುವ ಕಿಲಾಡಿ

Team India Cricketer: ವಿದರ್ಭ ವಿಕೆಟ್‌ ಕೀಪರ್ ಅವರನ್ನು ಕಳೆದ ವರ್ಷ ಪಂಜಾಬ್ ಕಿಂಗ್ಸ್ ಕೇವಲ 20 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತ್ತು. ತಂಡದ ಪ್ರಮುಖ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ ಸ್ಟೋವ್ ಅವರ ಅನುಪಸ್ಥಿತಿಯ ಕಾರಣ,  ಜಿತೇಶ್ ಶರ್ಮಾ ಅವರು ಈ ಸೀಸನ್ ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

Written by - Bhavishya Shetty | Last Updated : May 8, 2023, 10:00 AM IST
    • ಪಂಜಾಬ್ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ
    • ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ ನಿಂದ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.
    • ಕಳೆದ ವರ್ಷ ಪಂಜಾಬ್ ಕಿಂಗ್ಸ್ ಕೇವಲ 20 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತ್ತು.
World Cupನಲ್ಲಿ ರಿಷಬ್ ಪಂತ್ ಬದಲಿಗೆ ಆಡೋದು ಈ ವಿಕೆಟ್ ಕೀಪರ್! ಬ್ಯಾಟಿಂಗ್’ನಲ್ಲಿ ಧೋನಿಯನ್ನೇ ಮೀರಿಸುವ ಕಿಲಾಡಿ title=
jitesh sharma

Team India Cricketer: ಪಂಜಾಬ್ ಕಿಂಗ್ಸ್ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ ಅವರು ಪ್ರಸಕ್ತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ ನಿಂದ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಐಪಿಎಲ್ ನಲ್ಲಿ ಅಬ್ಬರಿಸುತ್ತಿರುವ ಜಿತೇಶ್ ಶರ್ಮಾ ಸದ್ಯ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ ಎಂದು ತಂಡದ ಬ್ಯಾಟಿಂಗ್ ಕೋಚ್ ವಾಸಿಂ ಜಾಫರ್ ಹೇಳಿದ್ದಾರೆ.

ಇದನ್ನೂ ಓದಿ: IPL 2023, DC vs RCB: ವಿರಾಟ್ ಕೊಹ್ಲಿಯಿಂದ ಆರ್‌ಸಿಬಿಗೆ ಸೋಲು..?  

ಈ 29ರ ಹರೆಯದ ವಿದರ್ಭ ವಿಕೆಟ್‌ ಕೀಪರ್ ಅವರನ್ನು ಕಳೆದ ವರ್ಷ ಪಂಜಾಬ್ ಕಿಂಗ್ಸ್ ಕೇವಲ 20 ಲಕ್ಷ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತ್ತು. ತಂಡದ ಪ್ರಮುಖ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈರ್‌ ಸ್ಟೋವ್ ಅವರ ಅನುಪಸ್ಥಿತಿಯ ಕಾರಣ,  ಜಿತೇಶ್ ಶರ್ಮಾ ಅವರು ಈ ಸೀಸನ್ ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಆದರೆ ಸಿಕ್ಕ ಅವಕಾಶವನ್ನು ಅದ್ಭುತವಾಗಿ ಬಳಸಿಕೊಂಡು ಆಡುತ್ತಿದ್ದಾರೆ ಜಿತೇಶ್ ಶರ್ಮಾ.

ವಿಶ್ವಕಪ್‌ ನಲ್ಲಿ ರಿಷಬ್ ಪಂತ್ ಬದಲಿಗೆ ಆಡೋದು ಇವರು!

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮುನ್ನಾ ದಿನದಂದು ಭಾರತ ತಂಡದ ಮಾಜಿ ಓಪನರ್ ಜಾಫರ್ ಮಾತನಾಡಿದ್ದು, ಜಿತೇಶ್ ಶರ್ಮಾ ಬಗ್ಗೆ ಈ ರೀತಿ ಹೇಳಿಕೆ ನೀಡಿದ್ದಾರೆ. “ಖಂಡಿತವಾಗಿಯೂ ಅವರು (ಜಿತೇಶ್ ಶರ್ಮಾ) ಕಳೆದ ವರ್ಷವೂ ಉತ್ತಮ ಪ್ರದರ್ಶನ ನೀಡಿದ್ದರು. ನನ್ನ ಪ್ರಕಾರ ಈಗಲೂ ಕಳೆದ ವರ್ಷಕ್ಕಿಂತ ಇನ್ನೂ ಉತ್ತಮವಾಗಿ ಆಡುತ್ತಿದ್ದಾರೆ. ಅವರ ಬ್ಯಾಟಿಂಗ್ ಸುಧಾರಿಸಿದೆ. ಈಗಾಗಲೇ ಉತ್ತಮ ವಿಕೆಟ್ ಕೀಪರ್ ಆಗಿದ್ದಾರೆ” ಎಂದು ಹೇಳಿದ್ದಾರೆ.

ಧೋನಿಯಂತೆ ಬಿರುಸಿನ ಬ್ಯಾಟಿಂಗ್!

ರಿಷಬ್ ಪಂತ್ ಗಾಯಗೊಂಡಿರುವ ಕಾರಣ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ ನಿಂದ ಹೊರಗುಳಿದಿದ್ದಾರೆ. ಇದೇ ಕಾರಣದಿಂದ ಆಯ್ಕೆ ಸಮಿತಿ ಟೀಂ ಇಂಡಿಯಾಗೆ ಉತ್ತಮ ವಿಕೆಟ್‌ ಕೀಪರ್ ನ್ನು ಆಯ್ಕೆ ಮಾಡಲು ಹೆಣಗಾಡುತ್ತಿದೆ. ಸದ್ಯ ಮುಂಬೈ ವಿರುದ್ಧ ಜಿತೇಶ್ 27 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದರು. ಈ ವರ್ಷ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ 20 ಅಂತರರಾಷ್ಟ್ರೀಯ ಪಂದ್ಯಗಳಿಗಾಗಿ ಜಿತೇಶ್ ಶರ್ಮಾ ಭಾರತೀಯ ತಂಡದಲ್ಲಿ ಸ್ಥಾನ ಕೂಡ ಪಡೆದಿದ್ದರು. ಆದರೆ ಚೊಚ್ಚಲ ಪಂದ್ಯದಲ್ಲಿಯೇ ಅವಕಾಶವನ್ನು ಪಡೆಯಲಿಲ್ಲ.

“ಭಾರತ ತಂಡದಲ್ಲಿ ಸ್ಥಾನ ಪಡೆದರೂ ಪದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. ಅವನ ಬಗ್ಗೆ ನನಗೆ ಗೊತ್ತು. ನಾನು ಅವರೊಂದಿಗೆ ವಿದರ್ಭ ಟೀಂ ನಲ್ಲಿ ಆಡಿದ್ದೇನೆ. ಅವರ ಆಟದಲ್ಲಿ ಸುಧಾರಣೆ ಕಾಣುತ್ತಿರುವುದು ಸಂತಸ ತಂದಿದೆ” ಎಂದು ಜಾಫರ್ ಹೇಳಿದ್ದಾರೆ.

ಇದನ್ನೂ ಓದಿ: IND vs PAK: BCCI ಈ ಷರತ್ತು ಒಪ್ಪಿಕೊಂಡರೆ 7 ವರ್ಷಗಳ ಬಳಿಕ ಭಾರತಕ್ಕೆ ಬರಲಿದೆ ಪಾಕಿಸ್ತಾನ!

 ಐದು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವರು ಧೋನಿಯಂತೆ ಫಿನಿಶರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸದ್ಯ ಭಾರತ ತಂಡದಲ್ಲಿ ಆಡಲು ಅವಕಾಶ ಸಿಕ್ಕರೆ, ಬಹುತೇಕ ಅಬ್ಬರಿಸೋದು ಕನ್ಫರ್ಮ್ ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News