Virat-Anushka: ವಿರಾಟ್-ಅನುಷ್ಕಾ ಸೇವಿಸಿದ ಕಾರ್ನರ್ ಐಸ್ ಕ್ರೀಂ ಬೆಲೆ ಎಷ್ಟು ಗೊತ್ತಾ? ಬೆಂಗಳೂರಿನಲ್ಲಿ ಸಖತ್ ಫೇಮಸ್ ಇದು

Virat Kohli-Anushka Sharma: ಬೆಂಗಳೂರಿನ ಪ್ರಸಿದ್ಧ ಸೆಂಟ್ರಲ್ ಟಿಫಿನ್ ರೂಮ್‌’ನಲ್ಲಿ ರುಚಿಕರವಾದ ಬ್ರೇಕ್’ಫಾಸ್ಟ್ ಕೂಡ ಸೇವನೆ ಮಾಡಿದ್ದರು ಈ ದಂಪತಿ. ಈ ಬಳಿಕ ಅನುಷ್ಕಾ ಮತ್ತು ವಿರಾಟ್ ದಾರಿಯಲ್ಲಿ ಬರುತ್ತಾ ಕಾರ್ನರ್ ಹೌಸ್‌’ನಿಂದ ಐಸ್ ಕ್ರೀಂ ಖರೀದಿಸಿ ಸೇವಿಸಿದ್ದಾರೆ. ಈ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Written by - Bhavishya Shetty | Last Updated : Apr 25, 2023, 09:56 AM IST
    • ಬೆಂಗಳೂರಿಗೆ ಆಗಮಿಸಿರುವ ವಿರುಷ್ಕಾ ಕುಟುಂಬ, ಸಖತ್ ಎಂಜಾಯ್ ಮಾಡುತ್ತಿದೆ
    • ಸೆಂಟ್ರಲ್ ಟಿಫಿನ್ ರೂಮ್‌’ನಲ್ಲಿ ರುಚಿಕರವಾದ ಬ್ರೇಕ್’ಫಾಸ್ಟ್ ಕೂಡ ಸೇವನೆ ಮಾಡಿದ್ದರು
    • ತಮ್ಮ ನೆಚ್ಚಿನ ತಾರೆಯರನ್ನು ನೋಡಲೆಂದು ಅಭಿಮಾನಿಗಳು ಜಮಾಯಿಸಿದ್ದು ಕಂಡುಬಂತು.
Virat-Anushka: ವಿರಾಟ್-ಅನುಷ್ಕಾ ಸೇವಿಸಿದ ಕಾರ್ನರ್ ಐಸ್ ಕ್ರೀಂ ಬೆಲೆ ಎಷ್ಟು ಗೊತ್ತಾ? ಬೆಂಗಳೂರಿನಲ್ಲಿ ಸಖತ್ ಫೇಮಸ್ ಇದು title=
Virat-Anushka

Virat Kohli-Anushka Sharma: ಒಂದಿಷ್ಟು ಸಮಯ ಬೆಂಗಳೂರಿನಲ್ಲೇ ಸಮಯ ಕಳೆದಿದ್ದ ನಟಿ ಅನುಷ್ಕಾ ಶರ್ಮಾ ಅವರು ಈಗ ಮತ್ತೆ ಬೆಂಗಳೂರಿಗೆ ಆಗಮಿಸಿದ್ದಾರೆ. ಕ್ರಿಕೆಟಿಗ-ಪತಿ ವಿರಾಟ್ ಕೊಹ್ಲಿ ಮತ್ತು ತನ್ನ ಪೋಷಕರೊಂದಿಗೆ ರಾಜ್ಯ ರಾಜಧಾನಿಯ ಬೀದಿಯಲ್ಲಿ ಸುತ್ತಾಡಿದ ವಿರುಷ್ಕಾ ದಂಪತಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಸಂಬಂಧ ಫೋಟೋಗಳನ್ನು ಅನುಷ್ಕಾ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ; Health Tips: ಒಂದಲ್ಲ, ಎರಡಲ್ಲ…11 ಔಷಧೀಯ ಗುಣವುಳ್ಳ ಈ ಬಣ್ಣದ ಅಕ್ಕಿಯ ಗಂಜಿ ಕ್ಯಾನ್ಸರ್ ರೋಗವನ್ನು ಬುಡಸಮೇತ ಕಿತ್ತುಹಾಕುತ್ತೆ!

ಬೆಂಗಳೂರಿನ ಪ್ರಸಿದ್ಧ ಸೆಂಟ್ರಲ್ ಟಿಫಿನ್ ರೂಮ್‌’ನಲ್ಲಿ ರುಚಿಕರವಾದ ಬ್ರೇಕ್’ಫಾಸ್ಟ್ ಕೂಡ ಸೇವನೆ ಮಾಡಿದ್ದರು ಈ ದಂಪತಿ. ಈ ಬಳಿಕ ಅನುಷ್ಕಾ ಮತ್ತು ವಿರಾಟ್ ದಾರಿಯಲ್ಲಿ ಬರುತ್ತಾ ಕಾರ್ನರ್ ಹೌಸ್‌’ನಿಂದ ಐಸ್ ಕ್ರೀಂ ಖರೀದಿಸಿ ಸೇವಿಸಿದ್ದಾರೆ. ಈ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಸದ್ಯ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ವಿರುಷ್ಕಾ ಕುಟುಂಬ, ಸಖತ್ ಎಂಜಾಯ್ ಮಾಡುತ್ತಿದೆ. ಇನ್ನು ಸೆಂಟ್ರಲ್ ಟಿಫಿನ್ ರೂಮ್’ಗೆ ಆಗಮಿಸಿದ್ದ ಸಂದರ್ಭದಲ್ಲಿ ತಮ್ಮ ನೆಚ್ಚಿನ ತಾರೆಯರನ್ನು ನೋಡಲೆಂದು ಅಭಿಮಾನಿಗಳು ಜಮಾಯಿಸಿದ್ದು ಕಂಡುಬಂತು.

ಹಾಲಿ ನಾಯಕ ಫಾಫ್ ಡು ಪ್ಲೆಸಿಸ್ ಗಾಯಗೊಂಡಿರುವ ಕಾರಣ ವಿರಾಟ್ ಆರ್‌’ಸಿಬಿಯ ಹಂಗಾಮಿ ನಾಯಕರಾಗಿದ್ದಾರೆ. ಇನ್ನು ಅನುಷ್ಕಾ ಕೊನೆಯದಾಗಿ ನೆಟ್‌’ಫ್ಲಿಕ್ಸ್‌’ನ ಕ್ವಾಲಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ; Budh Asta 2023: ಈ 3 ರಾಶಿಯವರ ಕೀರ್ತಿ, ಗೌರವ ಹೆಚ್ಚಿಸಲಿದ್ದಾನೆ ಬುಧ; ಅಪಾರ ಧನಪ್ರಾಪ್ತಿ ಖಚಿತ!

ಇನ್ನು ವಿರಾಟ್ ಕುಟುಂಬ ಸವಿದ ಕಾರ್ನರ್ ಹೌಸ್ ಐಸ್​ಕ್ರೀಂ ಬೆಲೆ, ಅಲ್ಲಿನ ಮೆನು ಕಾರ್ಡ್ ಪ್ರಕಾರ 230 ರೂಪಾಯಿ ಇದೆ. ಈ ಐಸ್ ಕ್ರೀಂ ಬೆಂಗಳೂರಿನಲ್ಲಿ ಸಖತ್ ಫೇಮಸ್ ಎಂಬುದು ಎಲ್ಲರಿಗೂ ತಿಳಿದ ವಿಚಾರ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News