ಮಾಡಿದ್ದುಣ್ಣೋ ಮಾರಾಯ ಅಂದ್ರೆ ಇದೇ ಅನ್ಸುತ್ತೆ! ಮುಂಬೈ ಬಾಯ್ಸ್ ಮ್ಯಾಂಗೋ ಬಾಯ್ ನವೀನನ ಕಾಲೆಳೆದದ್ದು ಹೇಗೆ ನೋಡಿ…

Mumbai Indians Player Eat Sweet Mango For Naveen Ul Haq: ಈ ಐಪಿಎಲ್ ಸೀಸನ್‌ ನಲ್ಲಿ ಬಹಳ ವೈರಲ್ ಆದ ‘ಸ್ವೀಟ್ ಮ್ಯಾಂಗೊ’ ಎಂಬ ಪದವನ್ನು ನೀವೆಲ್ಲರೂ ಕೇಳಿರಬಹುದು. ಹೌದು ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ನಡೆದ ಚರ್ಚೆಯ ಬಳಿಕ ಈ ಪದ ಕಾಣಿಸಿಕೊಂಡಿತ್ತು. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (GT vs RCB) ಗುಜರಾತ್ ಟೈಟಾನ್ಸ್ ಕೈಯಲ್ಲಿ ಸೋಲನ್ನು ಎದುರಿಸಿತ್ತು.

Written by - Bhavishya Shetty | Last Updated : May 25, 2023, 11:22 AM IST
    • ಐಪಿಎಲ್ ಸೀಸನ್‌ ನಲ್ಲಿ ಬಹಳ ವೈರಲ್ ಆದ ‘ಸ್ವೀಟ್ ಮ್ಯಾಂಗೊ’ ಎಂಬ ಪದವನ್ನು ನೀವೆಲ್ಲರೂ ಕೇಳಿರಬಹುದು
    • ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ನಡೆದ ಚರ್ಚೆಯ ಬಳಿಕ ಈ ಪದ ಕಾಣಿಸಿಕೊಂಡಿತ್ತು.
    • ಕಿಂಗ್ ಕೊಹ್ಲಿ ಅಭಿಮಾನಿಗಳು ನವೀನ್ ಉಲ್ ಹಕ್ ನನ್ನು ಟ್ರೋಲ್ ಮಾಡೋ ಅವಕಾಶವನ್ನು ಬಿಟ್ಟು ಕೊಡುತ್ತಿಲ್ಲ
ಮಾಡಿದ್ದುಣ್ಣೋ ಮಾರಾಯ ಅಂದ್ರೆ ಇದೇ ಅನ್ಸುತ್ತೆ! ಮುಂಬೈ ಬಾಯ್ಸ್ ಮ್ಯಾಂಗೋ ಬಾಯ್ ನವೀನನ ಕಾಲೆಳೆದದ್ದು ಹೇಗೆ ನೋಡಿ… title=
Mumabi Indians players Mango

Mumbai Indians Player Eat Sweet Mango For Naveen Ul Haq: ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆದ ಎಲಿಮಿನೇಟರ್ (MI vs LSG ಎಲಿಮಿನೇಟರ್) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಲಕ್ನೋ ವಿರುದ್ಧ 81 ರನ್‌ ಗಳಿಂದ ದೊಡ್ಡ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ (MI) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು ಮತ್ತು ಲಕ್ನೋಗೆ 20 ಓವರ್‌ ಗಳಲ್ಲಿ 182 ರನ್‌ ಗಳ ಗುರಿಯನ್ನು ನೀಡಿತು. ಗುರಿ ತಲುಪಲೆಂದು ಕಣಕ್ಕಿಳಿದ ಲಕ್ನೋ ತಂಡವು 101 ರನ್‌ ಗಳಿಗೆ ಆಲ್ ಔಟ್ ಆಗಿ ಸೋಲೊಪ್ಪಿಕೊಂಡಿತು.

ಇದನ್ನೂ ಓದಿ: IPL 2023: ಕೃನಾಲ್ ಮಾಡಿದ ಅದೊಂದು ತಪ್ಪಿಗೆ ಸೋಲು ಕಂಡಿತೇ ಲಕ್ನೋ?

ಈ ಐಪಿಎಲ್ ಸೀಸನ್‌ ನಲ್ಲಿ ಬಹಳ ವೈರಲ್ ಆದ ‘ಸ್ವೀಟ್ ಮ್ಯಾಂಗೊ’ ಎಂಬ ಪದವನ್ನು ನೀವೆಲ್ಲರೂ ಕೇಳಿರಬಹುದು. ಹೌದು ವಿರಾಟ್ ಕೊಹ್ಲಿ ಮತ್ತು ನವೀನ್ ಉಲ್ ಹಕ್ ನಡುವೆ ನಡೆದ ಚರ್ಚೆಯ ಬಳಿಕ ಈ ಪದ ಕಾಣಿಸಿಕೊಂಡಿತ್ತು. ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (GT vs RCB) ಗುಜರಾತ್ ಟೈಟಾನ್ಸ್ ಕೈಯಲ್ಲಿ ಸೋಲನ್ನು ಎದುರಿಸಿತ್ತು. ಈ ಸಂದರ್ಭದಲ್ಲಿ ಲಕ್ನೋ ಆಟಗಾರ ನವೀನ್ ಉಲ್ ಹಕ್ ಅವರು ತಮ್ಮ Instagram ಸ್ಟೋರಿಯಲ್ಲಿ RCB ಸೋಲನ್ನು ಆನಂದಿಸುತ್ತಾ ‘ಸ್ವೀಟ್ ಮ್ಯಾಂಗೋ’ ಎಂದು ಫೋಟೋ ಹಾಕಿದ್ದರು. ಇದನ್ನು ಕಂಡ ಕೊಹ್ಲಿ ಮತ್ತು ಆರ್ ಸಿ ಬಿ ಫ್ಯಾನ್ಸ್ ಕೆಂಡಾಮಂಡಲಗೊಂಡಿದ್ದರು. ಅದಾದ ಬಳಿಕ ನವೀನ್ ಗ್ರಹಚಾರವೇ ಸರಿಯಿಲ್ಲ ಅನ್ಸುತ್ತೆ.

ಹೀಗಿರುವಾಗ ಕಿಂಗ್ ಕೊಹ್ಲಿ ಅಭಿಮಾನಿಗಳು ನವೀನ್ ಉಲ್ ಹಕ್ ನನ್ನು ಟ್ರೋಲ್ ಮಾಡೋ ಅವಕಾಶವನ್ನು ಬಿಟ್ಟು ಕೊಡುತ್ತಿಲ್ಲ. ಮುಂಬೈ vs ಲಖನೌ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದ ನವೀನ್ 4 ಓವರ್‌ ಗಳಲ್ಲಿ 38 ರನ್ ನೀಡಿ 4 ವಿಕೆಟ್ ಕಬಳಿಸಿ ಮುಂಬೈ ತಂಡವನ್ನು ಒಂದು ಹಂತದಲ್ಲಿ ಸಂಕಷ್ಟಕ್ಕೆ ಸಿಲುಕಿಸಿದ್ದರು, ಆದರೆ ಈ ಬಾರಿ ಅದು ವಿಭಿನ್ನವಾಗಿ ಕಾಣಿಸಿಕೊಂಡಿತ್ತು. ಹೌದು, ಈ ಬಾರಿ ನವೀನ್-ಉಲ್-ಹಕ್ ಅವರನ್ನು ಅಭಿಮಾನಿಗಳು ಹಾಗೂ ಮುಂಬೈ ಇಂಡಿಯನ್ಸ್ ಆಟಗಾರರು ಟ್ರೋಲ್ ಮಾಡಿದ್ದಾರೆ.

ರೋಹಿತ್ ಶರ್ಮಾರನ್ನು ಔಟಾ ಮಾಡಿದ ನಂತರ ನವೀನ್ ಉಲ್ ಹಕ್ ಕಿವಿ ಮುಚ್ಚಿಕೊಂಡು ಸಂಭ್ರಮಿಸಿದ್ದರು. ಅದೇ ರೀತಿಯಲ್ಲಿ, ಮುಂಬೈ ಇಂಡಿಯನ್ಸ್ ಆಟಗಾರರು ಸಿಹಿ ಮಾವಿನ ಹಣ್ಣುಗಳನ್ನು ಮೇಜಿನ ಮೇಲೆ ಇಟ್ಟುಕೊಂಡು ಕಿವಿ, ಕಣ್ಣು, ಬಾಯಿ ಮುಚ್ಚಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇದನ್ನೂ ಓದಿ: ಊಟಕ್ಕೆ ಬಂದವ ಗೆಳೆಯನ ಪತ್ನಿಯನ್ನೇ ಪಟಾಯ್ಸಿದ! ಬ್ಯಾಟ್ಸ್’ಮನ್ ಜೀವನ ಬರ್ಬಾದ್ ಮಾಡಿದ್ದೇ ಈ ಆಟಗಾರ!

ನವೀನ್ ಉಲ್ ಹಕ್ ಇತ್ತೀಚೆಗೆ ಟೀಂ ಇಂಡಿಯಾದ ಆಟಗಾರರ ವಿರುದ್ಧ ವಿಭಿನ್ನ ಧೋರಣೆ ತೋರುವುದನ್ನು ಕಾಣಬಹುದು. ಅಂದು ವಿರಾಟ್ ಕೊಹ್ಲಿ, ಇಂದು ರೋಹಿತ್ ಶರ್ಮಾ ವಿಚಾರದಲ್ಲಿ ಅದೇ ಮನೋಭಾವನೆ ತೋರಿದ್ದಾರೆ. ಆದರೆ ಪಂದ್ಯವನ್ನು ಪಂದ್ಯದ ರೀತಿಯಲ್ಲಿ ತೆಗೆದುಕೊಳ್ಳದೆ ವೈಯಕ್ತಿಕ ದ್ವೇಷಕ್ಕೆ ಎಡೆ ಮಾಡಿಕೊಡುತ್ತಿರುವುದು ಎಲ್ಲೋ ಕ್ರೀಡಾಸ್ಪೂರ್ತಿ ಮರೆಯಾಗುತ್ತಿರುವ ಅನುಮಾನ ಮೂಡಿಸುತ್ತಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News