IPL 2023: ಪಂಜಾಬ್ ಸೋಲಿನಿಂದ RCBಗೆ ಲಾಭ! ಪ್ಲೇಆಫ್’ಗೆ ಹೋಗುತ್ತಾ ಬೆಂಗಳೂರು? ಲೆಕ್ಕಾಚಾರ ಹೀಗಿದೆ

RCB Playoff: ಇಂಗ್ಲೆಂಡ್ ಬ್ಯಾಟ್ಸ್‌ಮನ್ ಲಿವಿಂಗ್‌ ಸ್ಟೋನ್ ಐದು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳ ಸಹಾಯದಿಂದ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಆದರೆ ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸೋಲಿನ ನಂತರ ಪಂಜಾಬ್ 13 ಪಂದ್ಯಗಳಲ್ಲಿ ಕೇವಲ 12 ಅಂಕಗಳನ್ನು ಪಡೆದಿದೆ. ಕೊನೆಯ ಪಂದ್ಯವನ್ನು ಗೆದ್ದ ನಂತರ ಡೆಲ್ಲಿ 14 ಅಂಕಗಳನ್ನು ಗಳಿಸಿದೆ.

Written by - Bhavishya Shetty | Last Updated : May 18, 2023, 11:57 AM IST
    • ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್‌ ಗಳ ಸೋಲು ಕಂಡಿದೆ
    • ಪಂಜಾಬ್ ತಂಡದ ಪ್ಲೇಆಫ್‌ ನ ಸಂಪೂರ್ಣ ಲೆಕ್ಕಾಚಾರವೇ ಬದಲಾಗಿದೆ
    • 15 ರನ್‌ ಗಳಿಂದ ಸೋತ ಪಂಜಾಬ್ ಕಿಂಗ್ಸ್ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿದೆ.
IPL 2023: ಪಂಜಾಬ್ ಸೋಲಿನಿಂದ RCBಗೆ ಲಾಭ! ಪ್ಲೇಆಫ್’ಗೆ ಹೋಗುತ್ತಾ ಬೆಂಗಳೂರು? ಲೆಕ್ಕಾಚಾರ ಹೀಗಿದೆ title=
RCB Playoff

RCB Playoff: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್‌ ಗಳ ಸೋಲು ಕಂಡಿದೆ. ಈ ಸೋಲಿನೊಂದಿಗೆ ಪಂಜಾಬ್ ತಂಡದ ಪ್ಲೇಆಫ್‌ ನ ಸಂಪೂರ್ಣ ಲೆಕ್ಕಾಚಾರವೇ ಬದಲಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಈ ಸೋಲಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರೀ ಲಾಭವಾಗಿದೆ. ಲಿಯಾಮ್ ಲಿವಿಂಗ್‌ಸ್ಟೋನ್ ಅವರ 48 ಎಸೆತಗಳಲ್ಲಿ 94 ರನ್‌ ಗಳ ಹೊರತಾಗಿಯೂ, ಬುಧವಾರದ ಮಹತ್ವದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 15 ರನ್‌ ಗಳಿಂದ ಸೋತ ಪಂಜಾಬ್ ಕಿಂಗ್ಸ್ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿದೆ.

ಇದನ್ನೂ ಓದಿ: Team India: ರೋಹಿತ್ ಶರ್ಮಾ ನಿವೃತ್ತಿ ಬಳಿಕ ಟೀಂ ಇಂಡಿಯಾದ ನಾಯಕನಾಗೋದು ಈ ಸ್ಟಾರ್ ಬ್ಯಾಟ್ಸ್’ಮನ್!

ಈಗಾಗಲೇ ಪ್ಲೇಆಫ್ ರೇಸ್‌ ನಿಂದ ಹೊರಗುಳಿದ ಡೆಲ್ಲಿ, ರಿಲೆ ರೊಸೊವ್ ಅವರ 37 ಎಸೆತಗಳಲ್ಲಿ ಅಜೇಯ 82 ರನ್‌ ಗಳ ನೆರವಿನಿಂದ ಎರಡು ವಿಕೆಟ್‌ ಗೆ 213 ರನ್ ಗಳಿಸಿ ಪಂಜಾಬ್‌ ಗೆ ಮಾರಕವಾಯಿತು. ಇದಕ್ಕೆ ಉತ್ತರ ನೀಡಲು ಕಣಕ್ಕಿಳಿದ ಪಂಜಾಬ್ ತಂಡ ಎಂಟು ವಿಕೆಟ್‌ ಗೆ 198 ರನ್ ಗಳಿಸಲಷ್ಟೇ ಶಕ್ತವಾಯಿತು.

ಇಂಗ್ಲೆಂಡ್ ಬ್ಯಾಟ್ಸ್‌ಮನ್ ಲಿವಿಂಗ್‌ ಸ್ಟೋನ್ ಐದು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳ ಸಹಾಯದಿಂದ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. ಆದರೆ ತಂಡಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸೋಲಿನ ನಂತರ ಪಂಜಾಬ್ 13 ಪಂದ್ಯಗಳಲ್ಲಿ ಕೇವಲ 12 ಅಂಕಗಳನ್ನು ಪಡೆದಿದೆ. ಕೊನೆಯ ಪಂದ್ಯವನ್ನು ಗೆದ್ದ ನಂತರ ಡೆಲ್ಲಿ 14 ಅಂಕಗಳನ್ನು ಗಳಿಸಿದೆ. ಆದರೆ ಪ್ಲೇ ಆಫ್ ತಲುಪಲು ಈ ಅಂಕ ಸಾಕಾಗುವುದಿಲ್ಲ. ಅವರ ನೆಟ್ ರನ್ ರೇಟ್ ಕೂಡ ಮೈನಸ್ 0.308 ಆಗಿದೆ. ಮತ್ತೊಂದೆಡೆ ಡೆಲ್ಲಿ ಹತ್ತು ತಂಡಗಳ ಪೈಕಿ ಒಂಬತ್ತನೇ ಸ್ಥಾನದಲ್ಲಿದೆ.

ಪ್ಲೇ ಆಫ್‌’ಗೆ ಹೋಗುತ್ತಾ ಕೊಹ್ಲಿ ಪಡೆ?

ಪಂಜಾಬ್ ಕಿಂಗ್ಸ್ 2014 ರಲ್ಲಿ ಫೈನಲ್ ತಲುಪಿತ್ತು. ಆ ನಂತರ 9 ವರ್ಷಗಳಿಂದ ಪ್ಲೇ ಆಫ್ ಗೆ ಎಂಟ್ರಿ ಕೊಡಲು ಪರದಾಡುತ್ತಿದೆ. ದೆಹಲಿಯ ಕಳಪೆ ಫೀಲ್ಡಿಂಗ್‌’ನ ಲಾಭವನ್ನೂ ತಂಡ (ಪಂಜಾಬ್)ಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಇನ್ನು ಪಂಜಾಬ್ ಕಿಂಗ್ಸ್ ತಂಡದ ಈ ಸೋಲಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರೀ ಲಾಭವಾಗಿದೆ.

ಐಪಿಎಲ್ 2023 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ 12 ಪಂದ್ಯಗಳಿಂದ 12 ಅಂಕಗಳನ್ನು ಹೊಂದಿದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ 13 ಪಂದ್ಯಗಳಲ್ಲಿ 14 ಅಂಕಗಳನ್ನು ಪಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದರೆ, 14 ಪಂದ್ಯಗಳಲ್ಲಿ 16 ಅಂಕಗಳನ್ನು ಪಡೆಯುತ್ತದೆ. ಇನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ 112 ರನ್ ಗಳ ಗೆಲುವಿನ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು +0.166 ನಿವ್ವಳ ರನ್ ರೇಟ್ ಹೊಂದಿದೆ. ಪ್ಲೇಆಫ್‌ಗೆ ಹೋಗಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೈದರಾಬಾದ್ ಮತ್ತು ಗುಜರಾತ್ ವಿರುದ್ಧದ ತನ್ನ ಕೊನೆಯ ಎರಡು ಪಂದ್ಯಗಳನ್ನು ಮಾತ್ರ ಗೆಲ್ಲಬೇಕಾಗಿದೆ.

ಮುಬೈ ಇಂಡಿಯನ್ಸ್ ಪ್ರಸ್ತುತ 13 ಪಂದ್ಯಗಳಲ್ಲಿ 14 ಅಂಕಗಳನ್ನು ಹೊಂದಿದ್ದು, ಅವರ ರನ್ ರೇಟ್ -0.128 ಆಗಿದೆ. ಮುಂಬೈ ಇಂಡಿಯನ್ಸ್ ಹೈದರಾಬಾದ್ ವಿರುದ್ಧದ ತನ್ನ ಕೊನೆಯ ಪಂದ್ಯವನ್ನು ಗೆದ್ದರೂ ಸಹ, ಅವರು 16 ಅಂಕಗಳನ್ನು ಪಡೆಯುತ್ತಾರೆ. ಆದರೆ ರನ್ ದರವು ಸಮತೋಲನ ಸಾಧಿಸುವುದಿಲ್ಲ. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16 ಅಂಕಗಳು ಮತ್ತು ಉತ್ತಮ ರನ್ ರೇಟ್‌ ನೊಂದಿಗೆ ಪ್ಲೇಆಫ್‌ಗೆ ಹೋಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಇದೀಗ ಮುಂಬೈ ಇಂಡಿಯನ್ಸ್ ಹೈದರಾಬಾದ್ ವಿರುದ್ಧದ ತನ್ನ ಕೊನೆಯ ಪಂದ್ಯವನ್ನು ಗೆಲ್ಲುವುದು ಮಾತ್ರವಲ್ಲದೆ, ಕೊನೆಯ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೋಲಿಗೆ ಪ್ರಾರ್ಥಿಸಬೇಕಾಗಿದೆ.

ಇದನ್ನೂ ಓದಿ: Arjun Tendulkar: ಅರ್ಜುನ್ ತೆಂಡೂಲ್ಕರ್ ಮೇಲೆ ನಾಯಿ ದಾಳಿ: ಸ್ವಲ್ಪದರಲ್ಲೇ ಪಾರಾದ ಸಚಿನ್ ಪುತ್ರನ ಭವಿಷ್ಯ!

ಮುಂಬೈ ಇಂಡಿಯನ್ಸ್ ಹಾದಿ ಸುಗಮವಾಗುವುದು ಹೀಗೆ!

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಕೊನೆಯ ಲೀಗ್ ಪಂದ್ಯಗಳಲ್ಲಿ ಸೋತ ತಕ್ಷಣ ಮುಂಬೈ ಇಂಡಿಯನ್ಸ್‌ ನ ಹಾದಿ ಸುಗಮವಾಗಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ ನ ಕೊನೆಯ ಲೀಗ್ ಪಂದ್ಯದಲ್ಲಿ ಸೋತರೆ, ಈ ಎರಡೂ ತಂಡಗಳು ತಲಾ 14 ಪಂದ್ಯಗಳಲ್ಲಿ 15-15 ಅಂಕಗಳನ್ನು ಗಳಿಸುತ್ತವೆ. ತಲಾ 16 ಅಂಕಗಳೊಂದಿಗೆ ಮುಂಬೈ ಮತ್ತು ಬೆಂಗಳೂರು ತಂಡಗಳು ಪ್ಲೇ ಆಫ್‌ ಗೆ ಲಗ್ಗೆ ಇಡಲಿವೆ. ಗುಜರಾತ್ ತಂಡ ಈಗಾಗಲೇ 18 ಅಂಕಗಳೊಂದಿಗೆ ಪ್ಲೇ ಆಫ್‌ ನಲ್ಲಿದೆ. ಅಂತಿಮವಾಗಿ, ಉತ್ತಮ ರನ್ ರೇಟ್ ಆಧಾರದ ಮೇಲೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್‌ ನ ಒಂದು ತಂಡ ಮಾತ್ರ ಪ್ಲೇ ಆಫ್‌ ಗೆ ಪ್ರವೇಶಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News