IPL 2023: ಕೊಹ್ಲಿ, ಧೋನಿ ಅಲ್ಲವೇ ಅಲ್ಲ… ಇವರೇ ನೋಡಿ IPL 2023ರ ಅತ್ಯಂತ ಡೇಂಜರಸ್ ಆಟಗಾರರು!

IPL 2023 Top 5 Cricketers: ಐಪಿಎಲ್ 2023 ರಲ್ಲಿ, ಅನೇಕ ಬ್ಯಾಟ್ಸ್‌ ಮನ್‌ ಗಳು ತಮ್ಮ ಸ್ಟ್ರೋಕ್‌ ಪ್ಲೇ ಮೂಲಕ ಮಿಂಚಿದ್ದಾರೆ, ಕೆಲವು ಬೌಲರ್‌ಗಳು ತಮ್ಮ ವೇಗ ಮತ್ತು ಬದಲಾವಣೆಯಿಂದ ಬ್ಯಾಟ್ಸ್‌ ಮನ್‌ ಗಳಿಗೆ ಸಾಕಷ್ಟು ತೊಂದರೆ ನೀಡಿದ್ದಾರೆ. ಇಂದು IPL 2023 ರ ಅಗ್ರ 5 ಬ್ಯಾಟ್ಸ್‌ ಮನ್‌ ಗಳು ಮತ್ತು ಬೌಲರ್‌ ಗಳ ಬಗ್ಗೆ ತಿಳಿಯೋಣ.

Written by - Bhavishya Shetty | Last Updated : May 22, 2023, 01:55 PM IST
    • IPL 2023 ಸೀಸನ್ ಈಗ ಕೊನೆಯ ಹಂತದಲ್ಲಿದೆ
    • ಐಪಿಎಲ್ 2023 ರಲ್ಲಿ, ಅನೇಕ ಬ್ಯಾಟ್ಸ್‌ ಮನ್‌ ಗಳು ತಮ್ಮ ಸ್ಟ್ರೋಕ್‌ ಪ್ಲೇ ಮೂಲಕ ಮಿಂಚಿದ್ದಾರೆ
    • IPL 2023 ರ ಅಗ್ರ 5 ಬ್ಯಾಟ್ಸ್‌ ಮನ್‌ ಗಳು ಮತ್ತು ಬೌಲರ್‌ ಗಳ ಬಗ್ಗೆ ತಿಳಿಯೋಣ
IPL 2023: ಕೊಹ್ಲಿ, ಧೋನಿ ಅಲ್ಲವೇ ಅಲ್ಲ… ಇವರೇ ನೋಡಿ IPL 2023ರ ಅತ್ಯಂತ ಡೇಂಜರಸ್ ಆಟಗಾರರು!  title=
IPL 2023

IPL 2023 Top 5 Cricketers: IPL 2023 ಸೀಸನ್ ಈಗ ಕೊನೆಯ ಹಂತದಲ್ಲಿದೆ. ಈ ಸಮಯದಲ್ಲಿ, ಕೆಲವು ರೋಚಕ ಕ್ಷಣಗಳು ಕಂಡುಬಂದಿವೆ. ಐಪಿಎಲ್ 2023 ರಲ್ಲಿ, ಅನೇಕ ಬ್ಯಾಟ್ಸ್‌ ಮನ್‌ ಗಳು ತಮ್ಮ ಸ್ಟ್ರೋಕ್‌ ಪ್ಲೇ ಮೂಲಕ ಮಿಂಚಿದ್ದಾರೆ, ಕೆಲವು ಬೌಲರ್‌ಗಳು ತಮ್ಮ ವೇಗ ಮತ್ತು ಬದಲಾವಣೆಯಿಂದ ಬ್ಯಾಟ್ಸ್‌ ಮನ್‌ ಗಳಿಗೆ ಸಾಕಷ್ಟು ತೊಂದರೆ ನೀಡಿದ್ದಾರೆ. ಇಂದು IPL 2023 ರ ಅಗ್ರ 5 ಬ್ಯಾಟ್ಸ್‌ ಮನ್‌ ಗಳು ಮತ್ತು ಬೌಲರ್‌ ಗಳ ಬಗ್ಗೆ ತಿಳಿಯೋಣ.

ಇದನ್ನೂ ಓದಿ: Surya Gochar 2023: ಸೂರ್ಯ ಸಂಯೋಗದಿಂದ ಈ ರಾಶಿಯವರ ಜೇಬು ತುಂಬಾ ದುಡ್ಡು; ಬದುಕಾಗುವುದು ಬಂಗಾರ-ಕಷ್ಟವೆಲ್ಲಾ ಮಾಯ!

1. ಫಾಫ್ ಡು ಪ್ಲೆಸಿಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ತಮ್ಮ T20 ಬ್ಯಾಟಿಂಗ್ ಕೌಶಲ್ಯಕ್ಕೆ ಹೊಸ ಅಧ್ಯಾಯವನ್ನು ಕಂಡುಕೊಂಡಿದ್ದಾರೆ. ಡು ಪ್ಲೆಸಿಸ್ ಐಪಿಎಲ್ 2023 ರ ಋತುವಿನಲ್ಲಿ 14 ಪಂದ್ಯಗಳನ್ನಾಡಿದ್ದು, 56.15 ರ ಸರಾಸರಿಯಲ್ಲಿ 730 ರನ್ ಮತ್ತು 153.68 ರ ಸ್ಟ್ರೈಕ್ ರೇಟ್‌ ನಲ್ಲಿ ಅಗ್ರ ಸ್ಕೋರಿಂಗ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸೇರಿವೆ. ವೇಗದ ಬೌಲರ್‌ ಗಳ ವಿರುದ್ಧ ಸ್ಕೋರ್ ಮಾಡುವುದರ ಹೊರತಾಗಿ, ಡು ಪ್ಲೆಸಿಸ್ ಸ್ಪಿನ್ನರ್‌ ಗಳ ವಿರುದ್ಧವೂ ತಮ್ಮ ಶ್ರೇಷ್ಠ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ.  38ರ ವಯಸ್ಸಿನಲ್ಲಿ ಇಂತಹ ಅದ್ಭುತ ಪ್ರದರ್ಶನ ತೋರುವುದು ಸಾಮಾನ್ಯದ ಮಾತಲ್ಲ. ಆರಂಭಿಕ ಆಟಗಾರ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಆಡಿದರೂ, ಡು ಪ್ಲೆಸಿಸ್ ಆಕ್ರಮಣಕಾರಿಯಾಗಿ ಬೆಂಗಳೂರಿಗೆ ರನ್ ಕೊಡುಗೆ ನೀಡಿದ್ದಾರೆ.

2. ಶುಭ್ಮನ್ ಗಿಲ್:

ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧ ಶುಭ್ಮನ್ ಗಿಲ್ ತಮ್ಮ ಚೊಚ್ಚಲ ಐಪಿಎಲ್ ಶತಕವನ್ನು ಬಾರಿಸಿದಾಗ, ವಿರಾಟ್ ಕೊಹ್ಲಿ ಅವರನ್ನು ಇನ್‌ ಸ್ಟಾಗ್ರಾಂ ಸ್ಟೋರಿ ಮೂಲಕ ಅಭಿನಂದಿಸಿದ್ದರು. ಅವರನ್ನು ಮುಂದಿನ ಪೀಳಿಗೆಯ ಭಾರತೀಯ ಬ್ಯಾಟ್ಸ್‌ಮನ್‌ ಗಳ ನಾಯಕ ಎಂದು ಕರೆಯಲಾಗುತ್ತಿದೆ. ಈ ವರ್ಷ ಗಿಲ್ ಅವರ ಬ್ಯಾಟಿಂಗ್ ನೋಡಿದ ಕೊಹ್ಲಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಐದು ತಿಂಗಳಲ್ಲಿ ಗಿಲ್ 7 ಶತಕಗಳನ್ನು ಗಳಿಸಿದ್ದಾರೆ. ಐದು ಅಂತರಾಷ್ಟ್ರೀಯ ಕ್ರಿಕೆಟ್‌ ನಲ್ಲಿ, ನ್ಯೂಜಿಲೆಂಡ್ ವಿರುದ್ಧದ ODIಗಳಲ್ಲಿ ದ್ವಿಶತಕ ಮತ್ತು ಪ್ರತ್ಯೇಕವಾಗಿ ಎರಡು IPL ಶತಕಗಳು ಸೇರಿವೆ.  ಐಪಿಎಲ್‌ ನ 14 ಇನ್ನಿಂಗ್ಸ್‌ ಗಳಲ್ಲಿ 56.67 ಸರಾಸರಿ ಮತ್ತು 152.46 ಸ್ಟ್ರೈಕ್ ರೇಟ್‌ ನಲ್ಲಿ 680 ರನ್ ಗಳಿಸಿದ್ದಾರೆ. ಗಿಲ್ ಅವರ ಸ್ಟ್ರೋಕ್-ಪ್ಲೇನಲ್ಲಿ ಪ್ರಭಾವಶಾಲಿಯಾಗಿದ್ದಾರೆ.

3. ಯಶಸ್ವಿ ಜೈಸ್ವಾಲ್:

ಎಡಗೈ ಓಪನರ್ ಯಶಸ್ವಿ ಜೈಸ್ವಾಲ್ ನಡೆಯುತ್ತಿರುವ ಸೀಸನ್ ನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. 2020 ರ ಅಂಡರ್-19 ಪುರುಷರ ಕ್ರಿಕೆಟ್ ವಿಶ್ವಕಪ್‌ ನಲ್ಲಿ ಕೆಲವು ಅದ್ಭುತ ಇನ್ನಿಂಗ್ಸ್‌ ಗಳನ್ನು ಆಡಿದ್ದರು. ಇನ್ನು ರಾಜಸ್ಥಾನ್ ರಾಯಲ್ಸ್ 2.4 ಕೋಟಿಗೆ ಖರೀದಿಸಿದ ಜೈಸ್ವಾಲ್, ತಂಡದ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಜೈಸ್ವಾಲ್ 14 ಪಂದ್ಯಗಳಲ್ಲಿ 48.08 ಸರಾಸರಿ ಮತ್ತು 163.61 ಸ್ಟ್ರೈಕ್ ರೇಟ್‌ನಲ್ಲಿ 625 ರನ್ ಗಳಿಸಿದ್ದಾರೆ, ಇದರಲ್ಲಿ ಒಂದು ಶತಕ ಮತ್ತು 5 ಅರ್ಧ ಶತಕಗಳು ಸೇರಿವೆ. ಮುಂಬೈ ಇಂಡಿಯನ್ಸ್ ವಿರುದ್ಧ 62 ಎಸೆತಗಳಲ್ಲಿ 124 ರನ್ ಗಳಿಸಿದ ಅವರನ್ನು ಮುಂದೆ ಟೀಂ ಇಂಡಿಯಾಗೆ ಸೇರಿಸಿಕೊಳ್ಳಬೇಕು ಎಂಬ ಬೇಡಿಕೆ ಹೆಚ್ಚಾಗುತ್ತಿದೆ.

4. ಮೊಹಮ್ಮದ್ ಶಮಿ:

ಐಪಿಎಲ್ 2023 ರಲ್ಲಿ ಪ್ಲೇಆಫ್‌ ಗೆ ಅರ್ಹತೆ ಪಡೆದ ಮೊದಲ ತಂಡ ಗುಜರಾತ್ ಆಗಿದ್ದು, ಶಮಿ ಅವರ ಕೊಡುಗೆ ಅತ್ಯಂತ ಪ್ರಭಾವಶಾಲಿಯಾಗಿದೆ. ಪವರ್ ಪ್ಲೇ ಸ್ಪೆಷಲಿಸ್ಟ್ ಪಾತ್ರದಲ್ಲಿ ಮಿಂಚಿರುವ ಶಮಿ ಎದುರಾಳಿಗಳ ರನ್ ಚೇಸ್ ಮುರಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಚಾಲೆಂಜ್ಡ್ ಲೈನ್ ಮತ್ತು ಲೆಂತ್ ಅನ್ನು ಸ್ಥಿರವಾಗಿ ಬೌಲ್ ಮಾಡುವ ಸಾಮರ್ಥ್ಯದೊಂದಿಗೆ, ಶಮಿ ಪವರ್-ಪ್ಲೇನಲ್ಲಿ 17.66 ರ ಸರಾಸರಿಯಲ್ಲಿ 7.70 ರ ಎಕಾನಮಿ ದರದಲ್ಲಿ 24 ವಿಕೆಟ್ ಗಳನ್ನು ಪಡೆದಿದ್ದಾರೆ. ಪಂದ್ಯಾವಳಿಯಲ್ಲಿ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ.

ಇದನ್ನೂ ಓದಿ: Virat Kohli: ಒಬ್ಬರಲ್ಲ, ಇಬ್ಬರಲ್ಲ.. ಅನುಷ್ಕಾ ಜೊತೆ ಮದುವೆಗೂ ಮುನ್ನ ಕೊಹ್ಲಿ ಈ 6 ಹುಡುಗಿಯರ ಜೊತೆ ಡೇಟಿಂಗ್ ಮಾಡಿದ್ರು!

5. ರಶೀದ್ ಖಾನ್:

ಐಪಿಎಲ್ 2023 ರಲ್ಲಿ ಗುಜರಾತ್ ಪರ ತಮ್ಮ ಸ್ಥಿರ ಪ್ರದರ್ಶನ ನೀಡಿರುವ ರಶೀದ್, ಪ್ರಮುಖ ಸ್ಪಿನ್ನರ್ ಗಳಲ್ಲಿ ಒಬ್ಬರು. ಶಮಿಯಂತೆ, ಅವರು ಸಹ 24 ವಿಕೆಟ್‌ಗಳನ್ನು ಪಡೆದಿದ್ದಾರೆ, ಶಮಿಗೆ ಹೋಲಿಸಿದರೆ, ಇವರು ಸರಾಸರಿ ಮತ್ತು ಎಕಾನಮಿ ದರದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಅತ್ಯಂತ ಅದ್ಭುತ ಪ್ರದರ್ಶನ ನೀಡಿದ್ದರು. 30ಕ್ಕೆ ನಾಲ್ಕು ವಿಕೆಟ್‌ ಗಳನ್ನು ಕಬಳಿಸಿದ್ದರು. ಇನ್ನು ಕೇವಲ 32 ಎಸೆತಗಳಲ್ಲಿ ಅಜೇಯ 79 ರನ್ ಗಳಿಸುವ ಮೂಲಕ ಗುಜರಾತ್ ಅನ್ನು ರನ್ ರೇಟ್‌ ನಲ್ಲಿ ಮುನ್ನಡೆ ಸಾಧಿಸುವಂತೆ ಮಾಡಿದ್ದರು.

 

 

ನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News