IPL 2023: 14 ರನ್.. 5 ವಿಕೆಟ್… ಡೇವಿಡ್ ವಾರ್ನರ್ ಸರ್ವಪ್ರಯತ್ನಕ್ಕೆ 'ಪಂಚ್' ಕೊಟ್ಟ ಮಾರ್ಕ್ ವುಡ್

Lucknow Supergiants vs Delhi Capitals highlights: ಲಕ್ನೋ ನಿಗದಿತ 20 ಓವರ್‌ಗ’ಳಲ್ಲಿ 6 ವಿಕೆಟ್‌ ನಷ್ಟಕ್ಕೆ 193 ರನ್ ಗಳಿಸಿತು, ನಂತರ ಬ್ಯಾಟಿಂಗ್ ನಡೆಸಿದ ದೆಹಲಿ ತಂಡವು 9 ವಿಕೆಟ್‌ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. 4 ಓವರ್‌ಗಳಲ್ಲಿ 14 ರನ್‌ ನೀಡಿ 5 ವಿಕೆಟ್‌ ಕಬಳಿಸಿದ ವೇಗಿ ಮಾರ್ಕ್‌ ವುಡ್‌ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.

Written by - Bhavishya Shetty | Last Updated : Apr 2, 2023, 12:16 AM IST
    • ಮೂರನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ಗೆಲುವಿನ ಚೊಚ್ಚಲ ಪಂದ್ಯವನ್ನು ಆಡಿದೆ.
    • ಕೆಎಲ್ ರಾಹುಲ್ ಸಾರಥ್ಯದ ಈ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 50 ರನ್‌ಗಳಿಂದ ಸೋಲಿಸಿದೆ.
    • ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಕಠಿಣ ಪ್ರಯತ್ನ ಮಾಡಿದರೂ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ.
IPL 2023: 14 ರನ್.. 5 ವಿಕೆಟ್… ಡೇವಿಡ್ ವಾರ್ನರ್ ಸರ್ವಪ್ರಯತ್ನಕ್ಕೆ 'ಪಂಚ್' ಕೊಟ್ಟ ಮಾರ್ಕ್ ವುಡ್  title=
Lucknow Super Giants

Lucknow Supergiants vs Delhi Capitals highlights: ಇಂದು ನಡೆದ ಐಪಿಎಲ್-2023 16 ನೇ ಸೀಸನ್‌’ನ ಮೂರನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್ ಗೆಲುವಿನ ಚೊಚ್ಚಲ ಪಂದ್ಯವನ್ನು ಆಡಿದೆ. ತವರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಎಲ್ ರಾಹುಲ್ ಸಾರಥ್ಯದ ಈ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 50 ರನ್‌ಗಳಿಂದ ಸೋಲಿಸಿದೆ. ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಕಠಿಣ ಪ್ರಯತ್ನ ಮಾಡಿದರೂ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ.

ಲಕ್ನೋ ನಿಗದಿತ 20 ಓವರ್‌ಗ’ಳಲ್ಲಿ 6 ವಿಕೆಟ್‌ ನಷ್ಟಕ್ಕೆ 193 ರನ್ ಗಳಿಸಿತು, ನಂತರ ಬ್ಯಾಟಿಂಗ್ ನಡೆಸಿದ ದೆಹಲಿ ತಂಡವು 9 ವಿಕೆಟ್‌ ನಷ್ಟಕ್ಕೆ 143 ರನ್ ಗಳಿಸಲಷ್ಟೇ ಶಕ್ತವಾಯಿತು. 4 ಓವರ್‌ಗಳಲ್ಲಿ 14 ರನ್‌ ನೀಡಿ 5 ವಿಕೆಟ್‌ ಕಬಳಿಸಿದ ವೇಗಿ ಮಾರ್ಕ್‌ ವುಡ್‌ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದರು.

ಇದನ್ನೂ ಓದಿ: Virat Kohli Alcohol: ವಿರಾಟ್’ಗೆ ಕುಡಿತದ ಚಟ! ಮದ್ಯ ಸೇವಿಸಿದರೆ ಅವರು ಮಾಡೋ ಈ ಕೆಲಸವನ್ನು ತಡೆಯೋರೆ ಇಲ್ಲ..!

ಮಾರ್ಕ್ ವುಡ್ ತೀಕ್ಷ್ಣ ಬೌಲಿಂಗ್:

194 ರನ್’ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮಾರ್ಕ್ ವುಡ್ ಇನಿಂಗ್ಸ್’ನ 5ನೇ ಓವರ್’ನಲ್ಲಿ ಸತತ ಎಸೆತಗಳಲ್ಲಿ 2 ಬಾರಿ ಆಘಾತ ನೀಡಿದರು. ಮೂರನೇ ಎಸೆತದಲ್ಲಿ ಪೃಥ್ವಿ ಶಾ (12) ಅವರನ್ನು ಬೌಲ್ಡ್ ಮಾಡಿದರೆ, ಮುಂದಿನ ಎಸೆತದಲ್ಲಿ ಮಿಚೆಲ್ ಮಾರ್ಷ್ ಅವರನ್ನೂ ಪೆವಿಲಿಯನ್’ಗೆ ಕಳುಹಿಸಿದರು. ಈ ಮೂಲಕ ಡೆಲ್ಲಿ 48 ರನ್ ನೀಡುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಈ ಪಂದ್ಯದಲ್ಲಿ ಮಾರ್ಕ್ ವುಡ್ 5 ವಿಕೆಟ್ ಕಬಳಿಸಿದ್ದಾರೆ.

ವಾರ್ನರ್ ಪ್ರಯತ್ನ ವಿಫಲ:

ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಕ್ರೀಸ್’ನ ಒಂದು ತುದಿಯಲ್ಲಿ ಫ್ರೀಜ್ ಆಗಿದ್ದರು. ಪೃಥ್ವಿ ಶಾ ಅವರೊಂದಿಗೆ ಮೊದಲ ವಿಕೆಟ್‌ಗೆ 41 ರನ್ ಸೇರಿಸಿದರೆ, ರಿಲೆ ರೊಸ್ಸೊ (30) ಅವರೊಂದಿಗೆ ನಾಲ್ಕನೇ ವಿಕೆಟ್‌;ಗೆ 38 ರನ್ ಸೇರಿಸಿದರು. ಕೈಲ್ ಮೇಯರ್ಸ್ ಕೈಗೆ ರವಿ ಬಿಷ್ಣೋಯ್ ಕ್ಯಾಚ್ ನೀಡಿದ್ದರು. ರಿಲೆ 20 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದರು. ಇನಿಂಗ್ಸ್’ನ 16ನೇ ಓವರ್’ನ ಕೊನೆಯ ಎಸೆತದಲ್ಲಿ ವೇಗಿ ಅವೇಶ್ ಖಾನ್ ವಾರ್ನರ್ ಅವರ ವಿಕೆಟ್ ಕಿತ್ತರು. 48 ಎಸೆತಗಳನ್ನು ಎದುರಿಸಿದ ಅವರು 7 ಬೌಂಡರಿಗಳ ನೆರವಿನಿಂದ 56 ರನ್ ಗಳಿಸಿದರು. ಲಕ್ನೋ ಪರ ಮಾರ್ಕ್ ವುಡ್ ಹೊರತಾಗಿ, ಅವೇಶ್ ಖಾನ್ ಮತ್ತು ರವಿ ಬಿಷ್ಣೋಯ್ ತಲಾ 2 ವಿಕೆಟ್ ಪಡೆದಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್ ನಿಗದಿತ 20 ಓವರ್‌’ಗಳಲ್ಲಿ 6 ವಿಕೆಟ್‌ಗೆ 193 ರನ್ ಗಳಿಸಿತು. ಆರಂಭಿಕರಾದ ಕೈಲ್ ಮೇಯರ್ಸ್ ಅದ್ಭುತ ಪ್ರದರ್ಶನ ನೀಡಿ 73 ರನ್’ಗಳ ಇನ್ನಿಂಗ್ಸ್ ಆಡಿದರು. ಮೇಯರ್ಸ್ ತಮ್ಮ 38 ಎಸೆತಗಳ ಇನ್ನಿಂಗ್ಸ್‌’ನಲ್ಲಿ 2 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಸಹ ಹೊಡೆದಿದ್ದಾರೆ. ಲಕ್ನೋ ಇನ್ನಿಂಗ್ಸ್‌’ನಲ್ಲಿ 16 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳು ಹೊರಬಂದಿವೆ. ಮೇಯರ್ಸ್ ಹೊರತುಪಡಿಸಿ, ನಿಕೋಲಸ್ ಪೂರನ್ 36 ರನ್ ಕೊಡುಗೆ ನೀಡಿದರೆ, ಕೊನೆಯಲ್ಲಿ ಆಯುಷ್ ಬಡೋನಿ 7 ಎಸೆತಗಳಲ್ಲಿ 18 ರನ್ ಸೇರಿಸಿದರು.

ಇದನ್ನೂ ಓದಿ: Viral Video: ಸ್ಟಂಟ್ ಮಾಡಲು ಹೋದ ವಧುವಿನ ಮುಖಕ್ಕೆ ಹಿಡದ ಬೆಂಕಿ! ಮುಂದೆ... ಈ ವಿಡಿಯೋ ನೋಡಿ

ದೀಪಕ್ ಮತ್ತು ಮೇಯರ್ಸ್ ಜೊತೆಯಾಟ ಮುರಿದ ಕುಲದೀಪ್ ಯಾದವ್:

ಡೆಲ್ಲಿ ಕ್ಯಾಪಿಟಲ್ಸ್ ಪರ ಎಡಗೈ ವೇಗಿ ಖಲೀಲ್ ಅಹ್ಮದ್ 30 ರನ್ ನೀಡಿ 2 ವಿಕೆಟ್ ಪಡೆದರು. ಲಕ್ನೋ ತಂಡವು ಪವರ್‌ಪ್ಲೇನಲ್ಲಿ ಒಂದು ವಿಕೆಟ್‌’ಗೆ 30 ರನ್‌ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು, ಇದು ಪವರ್‌ ಪ್ಲೇನಲ್ಲಿ ತಂಡದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಲಕ್ನೋ ನಾಯಕ ಕೆಎಲ್ ರಾಹುಲ್ ನಾಲ್ಕನೇ ಓವರ್‌ನಲ್ಲಿ ಚೇತನ್ ಸಕರಿಯಾ ಮೇಲೆ ಇನ್ನಿಂಗ್ಸ್‌ನ ಮೊದಲ ಸಿಕ್ಸರ್ ಬಾರಿಸಿದರು, ಆದರೆ ಅದೇ ಬೌಲರ್ ಡೀಪ್ ಸ್ಕ್ವೇರ್ ಲೆಗ್‌’ನಲ್ಲಿ ಅಕ್ಷರ್ ಪಟೇಲ್‌’ಗೆ ಸುಲಭ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್‌’ಗೆ ಮರಳುವಂತೆ ಮಾಡಿದರು. ಚೇತನ್ 53 ರನ್ ನೀಡಿ 2 ವಿಕೆಟ್ ಪಡೆದರು. ಮೇಯರ್ಸ್ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ದೀಪಕ್ ಹೂಡಾ (17 ರನ್) ಮೇಯರ್ಸ್‌ಗೆ ಉತ್ತಮ ಬೆಂಬಲ ನೀಡುತ್ತಿದ್ದರು. ಆದರೆ ಎರಡನೇ ವಿಕೆಟ್‌ಗೆ 79 ರನ್‌ಗಳ ಪಾರ್ಟ್’ನರ್ಶಿಪ್’ನ್ನು ಕುಲದೀಪ್ ಯಾದವ್ 11 ನೇ ಓವರ್‌ನಲ್ಲಿ ಮುರಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News