IPL: ಧೋನಿ ವಿನ್ನಿಂಗ್ ಶಾಟ್ ಕಂಡು ಪತ್ನಿ ಸಾಕ್ಷಿ ಪ್ರತಿಕ್ರಿಯೆ, ವಿಡಿಯೋ ವೈರಲ್

IPL 2021 CSK vs DC: ಎಂ.ಎಸ್. ಧೋನಿಯವರ ವಿನ್ನಿಂಗ್ ಶಾಟ್ ಕಂಡ ಕ್ಷಣ ಅವರ ಪತ್ನಿ ಸಾಕ್ಷಿ ಧೋನಿಯವರ ಕಣ್ತುಂಬಿ ಬಂದಿತು. ಭಾನುವಾರ ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್  ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಧೋನಿ ಮತ್ತೆ ತಮ್ಮ ಶಕ್ತಿ ಪ್ರದರ್ಶಿಸಿದರು. ಕೊನೆಯ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವನ್ನು ತಿರುಗಿಸಿದರು. ಸೋಲಿನ ದವಡೆಯಿಂದ ತಂಡವನ್ನು ಪಾರುಮಾಡಿದರು.

Written by - Yashaswini V | Last Updated : Oct 11, 2021, 09:15 AM IST
  • ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡರು
  • ತಂಡಕ್ಕೆ ಫಿನಿಶರ್ ಪಾತ್ರವನ್ನು ನಿರ್ವಹಿಸಿದ ಧೋನಿ ತಂಡಕ್ಕೆ ಸ್ಮರಣೀಯ ವಿಜಯವನ್ನು ನೀಡಿದರು
  • ಎಂ.ಎಸ್. ಧೋನಿ ವಿನ್ನಿಂಗ್ ಶಾಟ್ ಹೊಡೆದ ತಕ್ಷಣ ಅವರ ಪತ್ನಿ ಸಾಕ್ಷಿ ಧೋನಿಯವರ ಕಣ್ತುಂಬಿ ಬಂದಿತು
IPL: ಧೋನಿ ವಿನ್ನಿಂಗ್ ಶಾಟ್ ಕಂಡು ಪತ್ನಿ ಸಾಕ್ಷಿ ಪ್ರತಿಕ್ರಿಯೆ, ವಿಡಿಯೋ ವೈರಲ್ title=
Sakshi Dhoni Emotional

ದುಬೈ: IPL 2021 CSK vs DC: ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕ ಮಹೇಂದ್ರ ಸಿಂಗ್ ಧೋನಿ  (MS Dhoni)  ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಐಪಿಎಲ್ 2021 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ತನ್ನ ಹಳೆಯ ದಿನಗಳನ್ನು ನೆನಪಿಸುವ ಮೂಲಕ ವಿಶ್ವದ ಅತಿದೊಡ್ಡ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಿದರು. ಚೆನ್ನೈ ಸೂಪರ್ ಕಿಂಗ್ಸ್ ಗೆ ಫೈನಲ್ ತಲುಪಲು ಕೊನೆಯ ಓವರ್ ನಲ್ಲಿ 13 ರನ್ ಬೇಕಿತ್ತು. ಈ ಸಂದರ್ಭದಲ್ಲಿ ಧೋನಿ ತನ್ನ ಶಕ್ತಿಯನ್ನು ತೋರಿಸಿದರು ಮತ್ತು ಕೊನೆಯ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವನ್ನು ತಿರುಗಿಸಿದರು ಮತ್ತು ಸೋಲಿನ ದವಡೆಯಿಂದ ತಂಡವನ್ನು ಪಾರು ಮಾಡಿ ಗೆಲುವಿನ ಗುರಿ ಮುಟ್ಟಿದರು.

ಧೋನಿ ಪತ್ನಿಯ ಭಾವನಾತ್ಮಕ ಪ್ರತಿಕ್ರಿಯೆ:
ಮಹೇಂದ್ರ ಸಿಂಗ್ ಧೋನಿ  (MS Dhoni) 6 ಎಸೆತಗಳಲ್ಲಿ ಅಜೇಯ 18 ರನ್ ಗಳಿಸಿದರು ಮತ್ತು ಒಂದು ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಹೊಡೆದರು. ವಾಸ್ತವವಾಗಿ, ಈ ರೋಮಾಂಚಕ ಕಠಿಣ ಪಂದ್ಯದಲ್ಲಿ ಮತ್ತು 5 ಎಸೆತಗಳಲ್ಲಿ 13 ರನ್ ಗಳ ಅಗತ್ಯವಿತ್ತು. ಒಂದು ಕ್ಷಣ, 40 ವರ್ಷದ ಧೋನಿ ಈ ಪಂದ್ಯವನ್ನು ಮುಗಿಸಲು ಸಾಧ್ಯವಿಲ್ಲ ಎಂದು ತೋರುತ್ತಿತ್ತು, ಆದರೆ ಧೋನಿ ತನ್ನ ಉಗ್ರ ಸ್ವರೂಪವನ್ನು ತೋರಿಸಿದರು ಮತ್ತು ಸತತ 3 ಬೌಂಡರಿಗಳನ್ನು ಹೊಡೆದರು, ಇದರಲ್ಲಿ ಒಂದು ಚೆಂಡು ವೈಡ್ ಆಗಿತ್ತು ಮತ್ತು ಹೀಗೆ ಸೋಲಿನ ದವಡೆಯಿಂದ ಮಹಿ ಗೆಲುವನ್ನು ಕಸಿದುಕೊಂಡರು. 

ಆರಂಭಿಕ ಪೃಥ್ವಿ ಶಾ (60 ರನ್) ಮತ್ತು ನಾಯಕ ರಿಷಭ್ ಪಂತ್ (ಔಟಾಗದೆ 51) ಅರ್ಧಶತಕಗಳ ಕಾರಣದಿಂದಾಗಿ, ದೆಹಲಿ ಕ್ಯಾಪಿಟಲ್ಸ್ ತಂಡವು ಬ್ಯಾಟಿಂಗ್‌ಗೆ ಆಹ್ವಾನಿಸಿದ ನಂತರ ಐದು ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಹಳೆಯ ಶೈಲಿಯಲ್ಲಿ ಕಾಣಿಸಿಕೊಂಡರು ಮತ್ತು ತಂಡಕ್ಕೆ ಫಿನಿಶರ್ ಪಾತ್ರವನ್ನು ನಿರ್ವಹಿಸಿದರು. ತಂಡಕ್ಕೆ ಸ್ಮರಣೀಯ ವಿಜಯವನ್ನು ನೀಡಿದರು. ಧೋನಿ 6 ಎಸೆತಗಳಲ್ಲಿ ಔಟಾಗದೆ 18 ರನ್ ಗಳಿಸಿದರು ಮತ್ತು ಸಿಕ್ಸರ್ ಮತ್ತು ಬೌಂಡರಿಗಳೊಂದಿಗೆ ತಂಡಕ್ಕೆ ಸ್ಮರಣೀಯ ಗೆಲುವು ನೀಡಿದರು. ಎಂ.ಎಸ್. ಧೋನಿ ವಿನ್ನಿಂಗ್ ಶಾಟ್ ಹೊಡೆದ ತಕ್ಷಣ ಅವರ ಪತ್ನಿ ಸಾಕ್ಷಿ ಧೋನಿಯವರ ಕಣ್ತುಂಬಿ ಬಂದಿತು.

ಇದನ್ನೂ ಓದಿ- Delhi vs Chennai, Qualifier 1: ಫೈನಲ್ ಗೆ ಲಗ್ಗೆ ಇಟ್ಟ ಚೆನ್ನೈ ಸೂಪರ್ ಕಿಂಗ್ಸ್

ಜೀವಾಳನ್ನು ಬಿಗಿಯಾಗಿ ಅಪ್ಪಿ ಮುದ್ದಾಡಿದ ಸಾಕ್ಷಿ:
ಸಾಕ್ಷಿಯ ಜೊತೆಗೆ, ಅವರ ಮಗಳು ಜೀವ ಕೂಡ ಕ್ರೀಡಾಂಗಣದಲ್ಲಿ ಹಾಜರಿದ್ದರು. ಧೋನಿ ವಿನ್ನಿಂಗ್ ಶಾಟ್ ಹೊಡೆದ ತಕ್ಷಣ, ಸಾಕ್ಷಿ ಮಗಳು ಜೀವಾಳನ್ನು ಅಪ್ಪಿ ಭಾವನಾತ್ಮಕವಾಗಿ ಕಾಣಿಸಿಕೊಂಡರು. ಧೋನಿ ಪತ್ನಿ ಮತ್ತು ಮಗಳ ಈ ಸಂಭ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

ಒಂಬತ್ತನೇ ಬಾರಿಗೆ ಫೈನಲ್‌ನಲ್ಲಿ ಸಿಎಸ್‌ಕೆ :
ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ತಮ್ಮ ತಂಡಕ್ಕೆ ಐತಿಹಾಸಿಕ ಗೆಲುವು ನೀಡಲು ಕೊನೆಯ ಓವರ್ ಗಳಲ್ಲಿ ಬಂದರು ಮತ್ತು ಇದರೊಂದಿಗೆ ಚೆನ್ನೈ ಒಂಬತ್ತನೇ ಬಾರಿಗೆ ಐಪಿಎಲ್ ಪ್ರವೇಶಿಸಿತು. ವಾಸ್ತವವಾಗಿ, ಚೆನ್ನೈ ಸೂಪರ್ ಕಿಂಗ್ಸ್ 2020 ರಲ್ಲಿ ಏಳನೇ ಸ್ಥಾನದಲ್ಲಿತ್ತು, ನಂತರ ಧೋನಿ ನಮ್ಮ ತಂಡವು ಮತ್ತೆ ಅದ್ಭುತವಾದ ಕಮ್ ಬ್ಯಾಕ್ ಮಾಡಲಿದೆ ಎಂದು ಹೇಳಿದ್ದರು. ಈಗ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ಎಂಎಸ್ ಧೋನಿ ನಾಯಕತ್ವದಲ್ಲಿ ಫೈನಲ್ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಫೈನಲ್ ತಲುಪಿರುವುದು ಇದು ಒಂಬತ್ತನೇ ಬಾರಿಗೆ ಎಂಬುದು ಗಮನಾರ್ಹ ವಿಷಯವಾಗಿದೆ.

ಪಂದ್ಯದ ನಂತರ ಧೋನಿ ಈ ಪ್ರತಿಕ್ರಿಯೆ ನೀಡಿದರು:
ಪಂದ್ಯದ ನಂತರ ಪ್ರತಿಕ್ರಿಯಿಸಿದ ಎಂ.ಎಸ್. ಧೋನಿ, 'ನನ್ನ ಇನ್ನಿಂಗ್ಸ್ ಮುಖ್ಯವಾಗಿತ್ತು. ದೆಹಲಿ ಕ್ಯಾಪಿಟಲ್ಸ್ ಬೌಲಿಂಗ್ ದಾಳಿ ಉತ್ತಮವಾಗಿದೆ. ಅವರು ಪರಿಸ್ಥಿತಿಗಳ ಸಂಪೂರ್ಣ ಲಾಭವನ್ನು ಪಡೆದರು, ಆದ್ದರಿಂದ ಈ ಪಂದ್ಯವು ನಮಗೆ ಸುಲಭವಾಗುವುದಿಲ್ಲ ಎಂದು ನಮಗೆ ತಿಳಿದಿತ್ತು ಎಂದು ಹೇಳಿದರು. ತಮ್ಮ ಇನಿಂಗ್ಸ್ ಬಗ್ಗೆ ಪ್ರತಿಕ್ರಿಯಿಸಿದ ಧೋನಿ, 'ನಾನು ಟೂರ್ನಿಯಲ್ಲಿ ಉತ್ತಮ ಇನ್ನಿಂಗ್ಸ್ ಆಡಿಲ್ಲ, ಆದರೆ ಚೆಂಡನ್ನು ನೋಡುತ್ತಾ ಆಡಲು ಬಯಸಿದ್ದೆ. ನಾನು ನೆಟ್ಸ್‌ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೆ, ಆದರೆ ಹೆಚ್ಚು ಯೋಚಿಸುತ್ತಿಲ್ಲ, ಏಕೆಂದರೆ ನೀವು ಬ್ಯಾಟಿಂಗ್ ಮಾಡುವಾಗ ಹೆಚ್ಚು ಯೋಚಿಸಿದರೆ, ನಿಮ್ಮ ತಂತ್ರವನ್ನು ಹಾಳು ಮಾಡುತ್ತೀರಿ ಎಂದರು. 

ಇದನ್ನೂ ಓದಿ- IPL 2021: ಲೀಗ್ ಹಂತದಲ್ಲಿ ಇದುವರೆಗೆ ಅಧಿಕ ರನ್ ಗಳಿಸಿರುವ ಐದು ಆಟಗಾರರಿವರು

ಶಾರ್ದೂಲ್ ಠಾಕೂರ್ ಅವರನ್ನು ಬ್ಯಾಟಿಂಗ್ ಕ್ರಮಾಂಕಕ್ಕೆ ಕಳುಹಿಸುವ ನಿರ್ಧಾರದ ಬಗ್ಗೆಯೂ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧೋನಿ, 'ಶಾರ್ದೂಲ್ ಠಾಕೂರ್ ಇತ್ತೀಚಿನ ದಿನಗಳಲ್ಲಿ ಉತ್ತಮವಾಗಿ ಬ್ಯಾಟ್ ಮಾಡಿದ್ದಾರೆ, ಆದ್ದರಿಂದ ಅವರನ್ನು ಕಳುಹಿಸಲಾಗಿದೆ' ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News