IPL Mega Auction: ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜಿನಲ್ಲಿ ಇಂದು 106 ಆಟಗಾರರು ಸೇಲ್..!

ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆಟಗಾರರ ಮೌಲ್ಯ 20 ಕೋಟಿ ರೂ. ತಲುಪುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

Written by - Zee Kannada News Desk | Last Updated : Feb 12, 2022, 11:51 AM IST
  • 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಹುನಿರೀಕ್ಷಿತ ಮೆಗಾ ಹರಾಜು ಇಂದು ಪ್ರಾರಂಭವಾಗಲಿದೆ
  • ಬೆಂಗಳೂರಿನಲ್ಲಿ ಫೆ.12 ಮತ್ತು 13ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಆಟಗಾರರ ಹರಾಜು
  • ವಿವಿಧ ಸ್ಟಾರ್ ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿಯಲು ಸಜ್ಜಾಗಿರುವ ಫ್ರಾಂಚೈಸಿಗಳು
IPL Mega Auction: ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜಿನಲ್ಲಿ ಇಂದು 106 ಆಟಗಾರರು ಸೇಲ್..!   title=
ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು ಇಂದು ಪ್ರಾರಂಭವಾಗಲಿದೆ

ಬೆಂಗಳೂರು: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಹುನಿರೀಕ್ಷಿತ ಮೆಗಾ ಹರಾಜು (IPL 2022 Mega Auction)ಇಂದಿನಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಫೆ.12 ಹಾಗೂ 13ರಂದು ನಡೆಯಲಿರುವ ಈ 2 ದಿನಗಳ ಕಾರ್ಯಕ್ರಮದಲ್ಲಿ ವಿವಿಧ ತಂಡಗಳು ತಮ್ಮ ನೆಚ್ಚಿನ ಆಟಗಾರರನ್ನು ಖರೀದಿಸಲಿವೆ. ಸ್ಟಾರ್ ಆಟಗಾರರ ಮೇಲೆ ಕೋಟಿ ಕೋಟಿ ಹಣ ಸುರಿಯಲು ಸಜ್ಜಾಗಿವೆ. 590 ಆಟಗಾರರನ್ನು ಮಾತ್ರವೇ ಹರಾಜು ಸುತ್ತಿಗೆ ಅಂತಿಮಗೊಳಿಸಲಾಗಿದ್ದು, ಇದರಲ್ಲಿ 370 ಭಾರತೀಯರು ಹಾಗೂ 220 ವಿದೇಶಿ ಆಟಗಾರರಿದ್ದಾರೆ(PL Players Bidding). ಇಂದು ಸುಮಾರು 106 ಆಟಗಾರರ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಈ ಬಾರಿಯ ಐಪಿಎಲ್ ಹರಾಜಿಗೆ(IPL Auction 2022)ವಿಶ್ವದಾದ್ಯಂತ 1,214 ಆಟಗಾರರು ತಮ್ಮ ಹೆಸರುಗಳನ್ನು ನೊಂದಾಯಿಸಿದ್ದರು. ಇದರಲ್ಲಿ 896 ಭಾರತೀಯರಿದ್ದರೆ, 318 ವಿದೇಶಿ ಆಟಗಾರರಿದ್ದರು. ಈ ಪಟ್ಟಿಯನ್ನು ಬಿಸಿಸಿಐ (BCCI) ಪರಿಷ್ಕರಿಸಿದ್ದು, 590 ಆಟಗಾರರನ್ನು ಮಾತ್ರವೇ ಹರಾಜು ಸುತ್ತಿಗೆ ಅಂತಿಮಗೊಳಿಸಿದೆ. ಈ ಬಾರಿ 10ಕ್ಕೂ ಹೆಚ್ಚು ಕ್ರಿಕೆಟಿಗರಿಗೆ 10 ಕೋಟಿಗೂ ಅಧಿಕ ಮೊತ್ತದ ಬಿಡ್ ಸಲ್ಲಿಕೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: IPL ಹರಾಜಿನ ಮುನ್ನಾ ದಿನವೇ Punjab Kings ಪಾಲಿಗೆ ಆಘಾತ , ಕೊನೆ ಕ್ಷಣದಲ್ಲಿ ಹಿಂದೆ ಸರಿದ ಈ ಆಟಗಾರ

ಇನ್ನು ಐಪಿಎಲ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಆಟಗಾರರ(IPL Bidding) ಮೌಲ್ಯ 20 ಕೋಟಿ ರೂ. ತಲುಪುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್, ಇಶಾನ್ ಕಿಶನ್, ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್ (Shreyas Iyer), ಶಿಖರ್ ಧವನ್, ಕಗಿಸೊ ರಬಾಡಾ, ಕ್ವಿಂಟನ್ ಡಿಕಾಕ್, ಪ್ಯಾಟ್ ಕಮಿನ್ಸ್, ಮಿಚ್ ಮಾರ್ಶ್ ಮುಂತಾದವರು ದೊಡ್ಡ ಮೊತ್ತಕ್ಕೆ ಸೇಲ್ ಆಗುವ ಸಾಧ್ಯತೆ ಇದೆ.

ನೇರ ಪ್ರಸಾರವನ್ನು ಎಲ್ಲಿ ವೀಕ್ಷಿಸಬೇಕು?

ಐಪಿಎಲ್ ಹರಾಜಿನ(IPL 2022 Auction) ಲೈವ್ ಟೆಲಿಕಾಸ್ಟ್ 11 ಗಂಟೆಗೆ ಪ್ರಾರಂಭವಾಗಿದ್ದರೂ, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು 2 ಗಂಟೆಯಿಂದ ತೋರಿಸಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಹರಾಜು ನೇರ ಪ್ರಸಾರವಾಗಲಿದೆ. ಹಿಂದಿಯಲ್ಲಿ ವೀಕ್ಷಿಸಲು ನೀವು ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಸ್ಟಾರ್ ಸ್ಪೋರ್ಟ್ಸ್ ಹಿಂದಿ 1 ರಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: IND vs WI: ಮೂರನೇ ಏಕದಿನ ಪಂದ್ಯವನ್ನು 96 ರನ್ ಗಳಿಂದ ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದ Team India

ಕೋಟಿ ಕೋಟಿ ರೂ. ಖರೀದಿಗೆ ಸಜ್ಜು

ಎಲ್ಲಾ 10 ಫ್ರಾಂಚೈಸಿಗಳ ಮಾಲೀಕರು ಮತ್ತು ಅಧಿಕಾರಿಗಳು ತಮ್ಮ ನೆಚ್ಚಿನ ಆಟಗಾರರನ್ನು ಬಿಡ್(IPL 2022 Bidding)ಮಾಡಲಿದ್ದಾರೆ. ಪ್ರತಿಯೊಬ್ಬರೂ ಉತ್ತಮ ಐಪಿಎಲ್ ತಂಡವನ್ನುಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಉತ್ತಮ ಫಾರ್ಮ್ ನಲ್ಲಿರುವ ಆಟಗಾರರಿಗೆ ಕೋಟಿ ಕೋಟಿ ರೂ. ನೀಡಿ ಖರೀದಿಸಲು ಐಪಿಎಲ್ ತಂಡಗಳು ಸಜ್ಜಾಗಿವೆ. ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದ ಭಾರತೀಯ ಅಂಡರ್ 19 ಆಟಗಾರರು ಕೂಡ ಹರಾಜು ಪಟ್ಟಿಯಲ್ಲಿ ತಮ್ಮ ಹೆಸರು ನಮೂದಿಸಿದ್ದು, ಈ ಪೈಕಿ ತಮಗಿಷ್ಟವಾದ ಆಟಗಾರರ ಖರೀದಿಸಲು ಫ್ರಾಂಚೈಸಿಗಳು ಉತ್ಸುಕವಾಗಿವೆ.

ಯಾರ ಬಳಿ ಎಷ್ಟು ಹಣವಿದೆ..?

ಚೆನ್ನೈ ಸೂಪರ್ ಕಿಂಗ್ಸ್(Chennai Super Kings) 48 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ 47.5 ಕೋಟಿ, ಕೋಲ್ಕತ್ತಾ ನೈಟ್ ರೈಡರ್ಸ್ 48 ಕೋಟಿ, ಲಕ್ನೋ ಸೂಪರ್ ಜೈಂಟ್ಸ್ 59 ಕೋಟಿ, ಮುಂಬೈ ಇಂಡಿಯನ್ಸ್ 48 ಕೋಟಿ, ಪಂಜಾಬ್ ಕಿಂಗ್ಸ್ 72 ಕೋಟಿ, ರಾಜಸ್ಥಾನ ರಾಯಲ್ಸ್ 62 ಕೋಟಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು 57 ಕೋಟಿ, ಸನ್ ರೈಸರ್ಸ್ ಹೈದರಾಬಾದ್, 68 ಕ್ರೈಸರ್ಸ್ ಹೈದರಾಬಾದ್ ಟೈಟಾನ್ಸ್ ಬಳಿ ಆಟಗಾರರನ್ನು ಖರೀದಿಸಲು 52 ಕೋಟಿ ರೂ. ಹಣವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News