IPL 2024: 'ನಿನ್ನ ಪತ್ನಿ' ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ!

Indian Premier League 2024: ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಟವಾಗುತ್ತಿದ್ದಾರೆ. ಈ ಋತುವಿನಲ್ಲಿ ಇದುವರೆಗೆ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಮತ್ತು RCB ಗೆ ಅತ್ಯುತ್ತಮ ಫಿನಿಶರ್ ಆಗಿ ಹೊರ ಹೊಮ್ಮಿದ್ದಾರೆ.   

Written by - Nitin Tabib | Last Updated : Apr 20, 2024, 05:20 PM IST
  • ಈ ಋತುವಿನಲ್ಲಿ ಇದುವರೆಗೆ ಆರ್‌ಸಿಬಿಗೆ ಏನೂ ಉತ್ತಮವಾಗಿಲ್ಲ.
  • ತಂಡ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.
  • ಆದರೆ, ವಿರಾಟ್ ಮತ್ತು ಕಾರ್ತಿಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
IPL 2024: 'ನಿನ್ನ ಪತ್ನಿ' ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ! title=

Virat Kohli And Dinesh Karthik: ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಟವಾಗುತ್ತಿದ್ದಾರೆ. ಈ ಋತುವಿನಲ್ಲಿ ಇದುವರೆಗೆ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಮತ್ತು RCB ಗೆ ಅತ್ಯುತ್ತಮ ಫಿನಿಶರ್ ಆಗಿ ಹೊರ ಹೊಮ್ಮಿದ್ದಾರೆ. ಕಾರ್ತಿಕ್ ಇತ್ತೀಚೆಗೆ ಬೆಂಗಳೂರು ತಂಡದ ಕೆಲವು ದಿಗ್ಗಜ ಆಟಗಾರರ ಸಂದರ್ಶನ ತೆಗೆದುಕೊಂಡಿದ್ದಾರೆ, ಇದರಲ್ಲಿ ಅವರು ಕೇಳಿದ ಒಂದು ಪ್ರಶ್ನೆಗೆ ವಿರಾಟ್ ಕೊಹ್ಲಿಯ ಉತ್ತರವನ್ನು ಕೇಳಿದ ನಂತರ ದಿನೇಶ್ ಇದ್ದಕ್ಕಿದ್ದಂತೆ ಸೈಲೆಂಟ್ ಆಗಿದ್ದಾರೆ. ಸದ್ಯ ಈ ಕುರಿತಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಜನರು ಇದನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. 

ಬಲಗೈ ಬ್ಯಾಟ್ಸ್‌ಮನ್ ಆಗಿರುವ ಕಾರ್ತಿಕ್ ಈ ಋತುವಿನಲ್ಲಿ ತಮ್ಮ ತಂಡಕ್ಕಾಗಿ ಅದ್ಭುತವಾಗಿ ಆಟ ಆಡಿದ್ದಾರೆ ಮತ್ತು 6 ಇನ್ನಿಂಗ್ಸ್‌ಗಳಲ್ಲಿ 75.33 ರ ಅತ್ಯುತ್ತಮ ಸರಾಸರಿಯಲ್ಲಿ 226 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ ಎರಡು ಅರ್ಧಶತಕಗಳು ಬಂದಿವೆ. ಭಾರತವು ಈ ವರ್ಷ 2024 ರ ಟಿ 20 ವಿಶ್ವಕಪ್‌ನಲ್ಲಿ ಭಾಗವಹಿಸಬೇಕಾಗಿದೆ ಮತ್ತು ಅದಕ್ಕೂ ಮೊದಲು, ಅನುಭವಿ ಆಟಗಾರ ಐಪಿಎಲ್ 2024 ರಲ್ಲಿ 205.45 ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸುತ್ತಿದ್ದಾರೆ ಮತ್ತು ತಮ್ಮ ಪ್ರದರ್ಶನದಿಂದ ಆಯ್ಕೆದಾರರ ಮೇಲೆ ಒತ್ತಡ ಹೇರುತ್ತಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದೆ, ಇದರಲ್ಲಿ RCB ನಾಯಕ ಫಾಫ್ ಡು ಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಮತ್ತು ಮೊಹಮ್ಮದ್ ಸಿರಾಜ್ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾರ್ತಿಕ್ ತಮ್ಮ ಬಗ್ಗೆ ಪ್ರಶ್ನೆಯೊಂದನ್ನು ಕೇಳುತ್ತಾರೆ, ಯಾವುದೇ ಕ್ರಿಕೆಟ್ ಆಟಗಾರರನ್ನು ಹೊರತುಪಡಿಸಿ ನನ್ನ ನೆಚ್ಚಿನ ಕ್ರೀಡಾಪಟು ಯಾರು? ಎಂದು ಉಳಿದ ದಿಗ್ಗಜ ಆಟಗಾರರಿಗೆ ದಿನೇಷ್ ಪ್ರಶ್ನಿಸುತ್ತಾರೆ.ಈ ಪ್ರಶ್ನೆಗೆ ವಿರಾಟ್ ಥಟ್ ಅಂತ ಉತ್ತರ ನೀಡುತ್ತಾ "ನಿಮ್ಮ ಪತ್ನಿ" ಎಂದು ಉತ್ದ್ತರಿಸುತ್ತಾರೆ. ಇದಾದ ಬಳಿಕ ಕಾರ್ತಿಕ್ ಕೂಡ "ಇದು ಒಳ್ಳೆಯ ಉತ್ತರ ಆದರೆ ನನ್ನ ಮನಸ್ಸಿನಲ್ಲಿ ಬೇರೆ ಏನೋ ನಡೆಯುತ್ತಿದೆ, ನನ್ನ ಹೆಂಡತಿ ಅಲ್ಲ" ಎಂದು ಹೇಳುತ್ತಾರೆ. ಸದ್ಯ ಈ ತಮಾಷೆಯ ವಿಡಿಯೋ ಅಂತರ್ಜಾಲದಲ್ಲಿ ಚರ್ಚೆಯ ವಿಷಯವಾಗಿ ಉಳಿದಿದೆ.

ಇದನ್ನೂ ಓದಿ-ACC Men's Premium Cup 2024: ಕ್ರಿಕೆಟ್ ಇತಿಹಾಸದಲ್ಲಿಯೇ ಇಂತಹ ಕ್ಯಾಚ್ ನೋಡಲು ಸಿಗುವುದು ಅಪರೂಪ, Watch Video

ಕಾರ್ತಿಕ್ ಅವರ ಪತ್ನಿ ದೀಪಿಕಾ ಪಳ್ಳಿಕಲ್ ಭಾರತೀಯ ಸ್ಕ್ವಾಷ್ ಆಟಗಾರ್ತಿ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರಿಬ್ಬರೂ 2015 ರಲ್ಲಿ ವಿವಾಹವಾಗಿದ್ದಾರೆ ಮತ್ತು ಉಭಯ ದಂಪತಿಗಳು ಆಗಾಗ್ಗೆ ಚರ್ಚೆಯ ವಿಷಯವಾಗಿ ಉಳಿಯುತ್ತಾರೆ. ಮತ್ತೊಂದೆಡೆ, ದಿನೇಶ್ ನವೆಂಬರ್ 2022 ರಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ ಮತ್ತು ಅವರು ಅನೇಕ ಸಂದರ್ಭಗಳಲ್ಲಿ ಕಾಮೆಂಟರಿ ಮಾಡುವುದನ್ನು ನೀವು ನೋಡಬಹುದು. ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಸಮಯದಲ್ಲಿ ಈ ಪಾತ್ರವನ್ನು ನಿರ್ವಹಿಸಿದರು, ಇದಲ್ಲದೆ ಆಶಸ್ ಸರಣಿ 2023 ರ ಸಂದರ್ಭದಲ್ಲಿಯೂ ಕೂಡ ಕಾರ್ತಿಕ್ ಕಾಮೆಂಟರಿ ಮಾಡುತ್ತಿದ್ದರು.

ಇದನ್ನೂ ಓದಿ-IPL 2024: 'ಇದು ಎಲ್ಲಕ್ಕಿಂತ ಮಿಗಿಲಾದದ್ದು...', ಶಿಖರ್ ಧವನ್ ಭಾವನಾತ್ಮಕ ಪೋಸ್ಟ್ ಗೆ ಮನಸೋತ ಈ ಸುಂದರಿ ಯಾರು?

IPL 2024 ರಲ್ಲಿ RCB ನಿರಾಶಾದಾಯಕ ಪ್ರದರ್ಶನ 
ಈ ಋತುವಿನಲ್ಲಿ ಇದುವರೆಗೆ ಆರ್‌ಸಿಬಿಗೆ ಏನೂ ಉತ್ತಮವಾಗಿಲ್ಲ. ತಂಡ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆದರೆ, ವಿರಾಟ್ ಮತ್ತು ಕಾರ್ತಿಕ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 

ಇಲ್ಲಿದೆ ವೈರಲ್ ವಿಡಿಯೋ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News