Mohammed Shami's Surgery Update: 17 ಪಂದ್ಯಗಳಲ್ಲಿ 28 ವಿಕೆಟ್‌ಗಳೊಂದಿಗೆ ಐಪಿಎಲ್ 2023 ರಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಆಟಗಾರ ಶಮಿ ಕಳೆದ ವರ್ಷ ಭಾರತದಲ್ಲಿ ನಡೆದ ಐಸಿಸಿ ವಿಶ್ವಕಪ್ 2023 ರಿಂದ ಗಾಯದ ಕಾರಣ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ.. ಅಷ್ಟೇ ಅಲ್ಲ, ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಈ ಅನುಭವಿ ವೇಗದ ಬೌಲರ್ ಹೊರಗುಳಿದಿದ್ದರು.
ಇದೀಗ ಶಮಿ ಮತ್ತೆ ಪಾದದ ಗಾಯದಿಂದಾಗಿ ಮುಂಬರುವ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲ.. ಬ್ರಿಟನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.. ಈಗಾಗಲೇ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಗುಜರಾತ್ ತೊರೆದು ಮುಂಬೈ ಇಂಡಿಯನ್ಸ್ ಸೇರಿರುವುದರಿಂದ ಫ್ರಾಂಚೈಸಿ ದೊಡ್ಡ ಆಘಾತವನ್ನೆದುರಿಸಿದೆ.. ಇದೇ ವೇಳೆ ಬಲಗೈ ವೇಗಿ ಸಹ ಪಂದ್ಯಾವಳಿಯಲ್ಲಿ ಭಾಗವಹಿಸದೇ ಇರುವುದು ಜಿಟಿ ತಂಡಕ್ಕೆ ಆತಂಕವನ್ನು ಹೆಚ್ಚಿಸಿದೆ..
ಇದನ್ನೂ ಓದಿ: Rohit Sharma: ಸರ್ಫರಾಜ್-ಗಿಲ್ ಇವರ್ಯಾರೂ ಅಲ್ಲ.. ಈ ಇಬ್ಬರೂ ಆಟಗಾರರೇ ಟೀಂ ಇಂಡಿಯಾದ ಹೀರೋಗಳು ಎಂದ ರೋಹಿತ್ ಶರ್ಮಾ
ಇನ್ನು ಶಮಿ ಆರೋಗ್ಯದ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಿಟಿಐಗೆ ತಿಳಿಸಿದ್ದು.."ಚುಚ್ಚುಮದ್ದು ಕಾರ್ಯನಿರ್ವಹಿಸುತ್ತಿಲ್ಲ.. ಈಗ ಶಸ್ತ್ರಚಿಕಿತ್ಸೆ ಮಾತ್ರ ಅವರ ಆಯ್ಕೆಯಾದ್ದು.. ಶೀಘ್ರದಲ್ಲೇ ಶಮಿ ಶಸ್ತ್ರಚಿಕಿತ್ಸೆಗಾಗಿ ಯುಕೆಗೆ ತೆರಳಲಿದ್ದಾರೆ" ಎಂದು ತಿಳಿಸಿದೆ..
ಇತ್ತೀಚೆಗಷ್ಟೇ ಅರ್ಜುನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಶಮಿ ತಮ್ಮ ದಶಕದ ವೃತ್ತಿಜೀವನದಲ್ಲಿ 229 ಟೆಸ್ಟ್, 195 ODI ಮತ್ತು 24 T20 ಅಂತರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅನುಭವಿ ಆಟಗಾರ ಗಾಯಗೊಂಡಿರುವ ಕಾರಣದಿಂದಾಗಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ (ಅಕ್ಟೋಬರ್-ನವೆಂಬರ್) ಟೆಸ್ಟ್ ಸರಣಿಯ ಮೊದಲು ಅವರು ಭಾರತ ತಂಡಕ್ಕೆ ಮರಳುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ..
ಇದನ್ನೂ ಓದಿ: Rohit Sharma: ಸರ್ಫರಾಜ್-ಗಿಲ್ ಇವರ್ಯಾರೂ ಅಲ್ಲ.. ಈ ಇಬ್ಬರೂ ಆಟಗಾರರೇ ಟೀಂ ಇಂಡಿಯಾದ ಹೀರೋಗಳು ಎಂದ ರೋಹಿತ್ ಶರ್ಮಾ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.