IPL 2024: Mumbai Indians ಪಾಲಿಗೊಂದು ಗುಡ್ ನ್ಯೂಸ್, ತಂಡಕ್ಕೆ ಮರಳಿದ್ದಾನೆ ಈ ಸ್ಫೋಟಕ ಬ್ಯಾಟ್ಸ್ ಮನ್!

IPL 2024 Mumbai Indians: ಈ ಬಾರಿಯ ಐಪಿಎಲ್ (IPL) ನಲ್ಲಿ ಶತದ ಮೂರು ಸೋಲಿನ ಬಳಿಕ ಇದೀಗ ಮುಂಬೈ ಇಂಡಿಯನ್ಸ್‌ (Mumbai Indians Team) ತಂಡದ ಪಾಲಿಗೆ ಒಂದು ಗುಡ್ ನ್ಯೂಸ್ ಪ್ರಕಟವಾಗಿದೆ. ಹೌದು, ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ (Suryakumar Yadav) ಅವರಿಗೆ ಐಪಿಎಲ್ 2024 ರಲ್ಲಿ ಆಡಲು ಗ್ರೀನ್ ಸಿಗ್ನಲ್ ದೊರೆತಿದೆ. (IPL News In Kannada)  

Written by - Nitin Tabib | Last Updated : Apr 3, 2024, 08:53 PM IST
  • ಸೂರ್ಯಕುಮಾರ್ ಯಾದವ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 139 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ,
  • ಇದರಲ್ಲಿ ಅವರು 124 ಇನ್ನಿಂಗ್ಸ್‌ಗಳಲ್ಲಿ 31.85 ಸರಾಸರಿ ಮತ್ತು 143.32 ಸ್ಟ್ರೈಕ್ ರೇಟ್‌ನಲ್ಲಿ 3249 ರನ್ ಗಳಿಸಿದ್ದಾರೆ.
  • ಈ ಅವಧಿಯಲ್ಲಿ, ಅವರು 1 ಶತಕ ಮತ್ತು 21 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಇದರಲ್ಲಿ ಅವರ ಗರಿಷ್ಠ ಸ್ಕೋರ್ 103 ರನ್ ಆಗಿದೆ.
IPL 2024: Mumbai Indians ಪಾಲಿಗೊಂದು ಗುಡ್ ನ್ಯೂಸ್, ತಂಡಕ್ಕೆ ಮರಳಿದ್ದಾನೆ ಈ ಸ್ಫೋಟಕ ಬ್ಯಾಟ್ಸ್ ಮನ್! title=

IPL 2024: ಈ ಬಾರಿಯ ಇಂಡಿಯನ್ಸ್ ಪ್ರಿಮಿಯರ್ ಲೀಗ್ (Indian Premier League 2024)ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದು, ಮೂರು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಪಾಯಿಂಟ್ ಪಟ್ಟಿಯಲ್ಲಿ ಮುಂಬೈ 10ನೇ ಸ್ಥಾನದಲ್ಲಿದೆ. ಆದರೆ ಈಗ ಇಷ್ಟೆಲ್ಲಾ ಸಂಕಷ್ಟಗಳ ಮಧ್ಯೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ರೂಪದಲ್ಲಿ ಒಂದು ದೊಡ್ಡ ಗುಡ್ ನ್ಯೂಸ್ ಸಿಕ್ಕಿದೆ. ಮಾಧ್ಯಮಗಳ ವರದಿ ಪ್ರಕಾರ ಗಾಯಗೊಂಡಿರುವ ಸೂರ್ಯಕುಮಾರ್ ಯಾದವ್ ಗೆ  ಐಪಿಎಲ್ ನಲ್ಲಿ ಆಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ. (IPL News In Kannada)

ಸೂರ್ಯಕುಮಾರ್ ಅವರ ಅನುಪಸ್ಥಿತಿಯು ಮುಂಬೈಗೆ ಹಲವು ಸವಾಲುಗಳನ್ನು ನೀಡಿದೆ. ಮುಂಬೈ ತಂಡದ ಫಿನಿಶರ್ ಪಾತ್ರವನ್ನು ಸೂರ್ಯ ನಿರ್ವಹಿಸಲಿದ್ದಾರೆ. ಕ್ಷಣದಲ್ಲಿ ಪಂದ್ಯವನ್ನೇ ಬದಲಿಸುವ ಸಾಮರ್ಥ್ಯ ಅವರಲ್ಲಿದೆ. 'ಎಕ್ಸ್‌ಪ್ರೆಸ್ ಸ್ಪೋರ್ಟ್ಸ್' ಪ್ರಕಾರ, ಸೂರ್ಯ ಐಪಿಎಲ್ 2024 ರಲ್ಲಿ ಆಡಲು ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಮುಂಬೈ ತನ್ನ ಮುಂದಿನ ಪಂದ್ಯ ಏಪ್ರಿಲ್ 7 ರಂದು  ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ  ಆಡಲಿದ್ದು, ಸೂರ್ಯ ಈ ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ. ಸೂರ್ಯ ದೆಹಲಿ ವಿರುದ್ಧ ಆಡಿದರೆ, ಕೆಟ್ಟ ಹಂತದಲ್ಲಿರುವ ಮುಂಬೈಗೆ ಇದು ದೊಡ್ಡ ಪರಿಹಾರವೇ ಸಿಕ್ಕಂತಾಗಿದೆ.(suryakumar yadav gets green signal to return team)

ಇದನ್ನೂ ಓದಿ-BAN vs SL: ಆಹಾ! ಬಾಂಗ್ಲಾದೇಶ ತಂಡದ 'ಲಗಾನ್' ಫೀಲ್ಡಿಂಗ್, ಬೌಂಡರಿ ತಡೆಯಲು 5 ಆಟಗಾರರ ಹರಸಾಹಸ Watch Video

ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಸೂರ್ಯ ಗಾಯಗೊಂಡಿದ್ದರು
ಡಿಸೆಂಬರ್ 2023 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಆಡಿದ T20 ಸರಣಿಯಲ್ಲಿ ಸೂರ್ಯ ಗಾಯಗೊಂಡಿದ್ದರು, ನಂತರ ಅವರು ಮೈದಾನಕ್ಕೆ ಮರಳಲು ಸಾಧ್ಯವಾಗಿರಲಿಲ್ಲ.  ಇದೀಗ ಅವರು ಟಿ 20 ವಿಶ್ವಕಪ್‌ ನಲ್ಲಿ  ಹಿಂದಿರುಗುವ ಸುದ್ದಿ ಬಂದಿದೆ, ಇದು ಮುಂಬೈ ಮತ್ತು ಭಾರತ ತಂಡಕ್ಕೆ (Team India) ಒಳ್ಳೆಯ ಸುದ್ದಿ ಎಂದರೆ ತಪ್ಪಾಗಲಾರದು.  ಏಕೆಂದರೆ ಐಪಿಎಲ್ ನಂತರ, ಟಿ 20 ವಿಶ್ವಕಪ್ 2024 (ICC T20 World Cup 2024) ಜೂನ್ 1 ರಿಂದ ಆರಂಭಗೊಳ್ಳಲಿದೆ. ಸೂರ್ಯ ಅವರ ಪಾದಕ್ಕೆ ಗಾಯವಾಗಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದಾಗ್ಯೂ, ಅವರು ಹಿಂದಿರುಗುವ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

ಇದನ್ನೂ ಓದಿ-

ಐಪಿಎಲ್ ವೃತ್ತಿಜೀವನ ಹೇಗಿದೆ? (Surya Kumar Yadav IPL Career)
ಸೂರ್ಯಕುಮಾರ್ ಯಾದವ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 139 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ, ಇದರಲ್ಲಿ ಅವರು 124 ಇನ್ನಿಂಗ್ಸ್‌ಗಳಲ್ಲಿ 31.85 ಸರಾಸರಿ ಮತ್ತು 143.32 ಸ್ಟ್ರೈಕ್ ರೇಟ್‌ನಲ್ಲಿ 3249 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 1 ಶತಕ ಮತ್ತು 21 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಇದರಲ್ಲಿ ಅವರ ಗರಿಷ್ಠ ಸ್ಕೋರ್ 103 ರನ್ ಆಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News