ಬೆಂಗಳೂರು: 3 ವರ್ಷದ ಕಾಯುವಿಕೆ ಇಂದು ಕೊನೆಗೂ ಅಂತ್ಯವಾಗಲಿದೆ. ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಆರ್‌ಸಿಬಿ ಪ್ಯಾನ್ಸ್ ಗೆ ಇಂದು ಪಕ್ಕ ಹಬ್ಬ. ಮೂರು ವರ್ಷಗಳ ಬಳಿಕ ಸಿಲಿಕಾನ್ ಸಿಟಿಯಲ್ಲಿ RCB… RCB… ಎಂಬ ಕೂಗೂ ದೊಡ್ಡ ಮಟ್ಟದಲ್ಲಿ ಕೇಳಿ ಬರಲಿದೆ. ಸಂಜೆ ಬೆಂಗಳೂರಿನಲ್ಲಿ ಐಪಿಎಲ್ ಹಂಗಾಮ ಆರಂಭವಾಗಲಿದೆ.
ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ಸಾಹ ಮತ್ತು ಕಪ್ ಗೆಲ್ಲುವ ಕನಸಿನೊಂದಿಗೆ ಇಂದು ಈ ಬಾರಿಯ ಐಪಿಎಲ್ ಟೂರ್ನಿಯ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಅದು ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ. 5 ಬಾರಿಯ ಚಾಂಪಿಯನ್ ಆಗಿರುವ ಮುಂಬೈ ವಿರುದ್ಧ ಆರ್‌ಸಿಬಿ ದಾಖಲೆ ಹೇಳಿಕೊಳ್ಳುವ ಹಾಗಿಲ್ಲ. ಆದರೆ, ತವರಿನಲ್ಲಿ ಕಣಕ್ಕಿಳಿಯುತ್ತಿರುವುದರಿಂದ ಅಭಿಮಾನಿಗಳ ಬೆಂಬಲ RCBಗೆ ಹೆಚ್ಚಾಗಿದೆ.
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಮ್ಯಾಕ್ಸ್‌ವೆಲ್ ಆಟದ ಮೇಲೆ RCB ಭವಿಷ್ಯ ನಿಂತಿದೆ. ಫಿನಿಷರ್ ಡಿಕೆ ಮೇಲೆ ನೀರಿಕ್ಷೆ ಹೆಚ್ಚಿದೆ. ಬೌಲಿಂಗ್ ವಿಭಾಗದಲ್ಲೂ ಸಹ RCB ಸಮತೋಲದಿಂದ ಕೂಡಿದೆ. ಆದರೆ ಹೆಜಲ್ವುಡ್, ಹಸರಂಗ, ಪಾಟಿದಾರ್ ಕೆಲ ಪಂದ್ಯಗಳಿಗೆ ಲಭ್ಯವಿಲ್ಲದ ಕಾರಣ ತಂಡಕ್ಕೆ ಕೊಂಚ ಹಿನ್ನಡೆಯಾಗಲಿದೆ.
ಇದನ್ನೂ ಓದಿ: MS Dhoniಗೆ ಗಂಭೀರ ಗಾಯ! CSK ಕೋಚ್ ನೀಡಿದ ಹೆಲ್ತ್ ಅಪ್ಡೇಟ್’ನಲ್ಲಿದೆ ಈ ಮಹತ್ವದ ಮಾಹಿತಿ
ಮ್ಯಾಕ್ಸಿ ಫುಲ್ ಫಿಟ್!
RCBಯ ಪ್ರಮುಖ ಆಟಗಾರ ಗಾಯದ ಕಾರಣದಿಂದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಲಭ್ಯತೆ ಬಗ್ಗೆ ಸಂದೇಹವಿತ್ತು. ಆದರೆ ಮುಂಬೈ ವಿರುದ್ಧದ ಮೊದಲ ಪಂದ್ಯಕ್ಕೆ ಮ್ಯಾಕ್ಸಿ ಲಭ್ಯವಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಆಸೀಸ್ ಆಲ್‌ರೌಂಡರ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಮ್ಯಾಕ್ಸ್‌ವೆಲ್ ಲಭ್ಯತೆ RCBಯ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಬಲ ತಂದಿದೆ. ಇನ್ನೂ ಮುಂಬೈ ಸಹ ಬಲಿಷ್ಠವಾಗಿದ್ದು RCBಗೆ ಶಾಕ್ ಕೊಡಲು ಸರ್ವಸನ್ನದ್ಧವಾಗಿದೆ. ಆದರೆ RCB ಅಭಿಮಾನಿಗಳು ಮಾತ್ರ ‘ಈ ಸಲ ಕಪ್ ನಮ್ದೆ’ ಎಂಬ ವಿಶ್ವಾಸದಲ್ಲಿದ್ದಾರೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ
ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ಆರ್‌ಸಿಬಿ ತಂಡ
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಶಹಬಾಜ್ ಅಹಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೊರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಕರ್ಣ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲಿ, ರೀಸ್ ಟಾಪ್ಲಿ, ಹಿಮಾಂಶು ಶರ್ಮಾ, ಮನೋಜ್ ಬಾಂಢಗೆ, ರಾಜನ್ ಕುಮಾರ್, ಅವಿನಾಶ್ ಸಿಂಗ್, ಸೋನು ಯಾದವ್, ಮಿಚೆಲ್ ಬ್ರೇಸ್‌ವೆಲ್.
ಮುಂಬೈ ಇಂಡಿಯನ್ಸ್ ತಂಡ
ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟಿಮ್ ಡೇವಿಡ್, ಡೇವಿಡ್ ಬ್ರೆವಿಸ್, ತಿಲಕ್ ವರ್ಮಾ, ಟ್ರಿಸ್ಟನ್ ಸ್ಟಬ್ಸ್, ವಿಷ್ಣು ವಿನೋದ್, ಕ್ಯಾಮೆರಾನ್ ಗ್ರೀನ್, ರಮಣದೀಪ್ ಸಿಂಗ್, ಶಮ್ಸ್ ಮುಲಾನಿ, ನೇಹಲ್ ವಡೇರಾ, ಹೃತಿಕ್ ಶೊಕೀನ್, ಅರ್ಷದ್ ಖಾನ್, ಡಾನ್ ಜೇನ್ಸನ್, ಪಿಯೂಷ್ ಚಾವ್ಲಾ, ಅರ್ಜುನ್ ತೆಂಡೂಲ್ಕರ್, ಕುಮಾರ್ ಕಾರ್ತಿಕೆಯ, ರಾಘವ್ ಗೋಯಲ್, ಜೋಫ್ರಾ ಆರ್ಚರ್, ಜೇಸನ್ ಬೆಹ್ರೆನ್‌ಡ್ರಾಫ್, ಆಕಾಶ್ ಮದವಾಲ್.
ಇದನ್ನೂ ಓದಿ: IPL 2023: ಟೀಂ ಇಂಡಿಯಾದಿಂದ ಹೊರಗಿಟ್ಟ ಈ ಆಟಗಾರನಿಗೆ ಪಾಂಡ್ಯ ಕೂಡ ಕೊಡುತ್ತಿಲ್ಲ ಅವಕಾಶ! ಅಂತ್ಯವಾಯ್ತ ವೃತ್ತಿ ಜೀವನ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.