IPL 2023ರಲ್ಲಿ ಕೋಟಿ ಕೋಟಿ ಹಣ ಗಳಿಸಲಿದ್ದಾರೆ ಈ ಆಟಗಾರರು: ಭಾರತೀಯರಿಗಿಲ್ಲ ಸ್ಥಾನ!

IPL 2023: ಐಪಿಎಲ್ ಫ್ರಾಂಚೈಸಿಗಳು 2022ರ ಟಿ 20ವಿಶ್ವಕಪ್‌ನಲ್ಲಿ ಸಂವೇದನಾಶೀಲ ಪ್ರದರ್ಶನಗಳಿಂದ ಪ್ರಭಾವಿತರಾದ ಅನೇಕ ಆಟಗಾರರನ್ನು ಪಡೆಯಲು ಈಗಾಗಲೇ ಪ್ಲ್ಯಾನ್ ನಡೆಸುತ್ತಿವೆ. ಡಿಸೆಂಬರ್ 23 ರಂದು ನಡೆಯಲಿರುವ IPL 2023 ಮಿನಿ ಹರಾಜಿನಲ್ಲಿ ಇನ್-ಫಾರ್ಮ್ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಹಣವನ್ನು ವ್ಯಯ ಮಾಡಲು ಸಿದ್ಧವಾಗಿವೆ. ಅನೇಕ ಫ್ರಾಂಚೈಸಿಗಳು ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರ್ರನ್ ಅವರ ಮೇಲೆ ಕಣ್ಣಿಟ್ಟಿದ್ದಾರೆ.

Written by - Bhavishya Shetty | Last Updated : Nov 16, 2022, 03:44 PM IST
    • IPL 2023 ಗಾಗಿ ರಿಟೈನ್ ಪ್ರಕ್ರಿಯೆಯು ನವೆಂಬರ್ 16 ರಂದು ಪೂರ್ಣಗೊಂಡಿದೆ
    • 10 ಫ್ರಾಂಚೈಸಿಗಳು ತಮ್ಮ ಉಳಿಸಿಕೊಳ್ಳುವ ಮತ್ತು ರಿಲೀಸ್ ಮಾಡುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ
    • ಐಪಿಎಲ್ 2023 ರ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ
IPL 2023ರಲ್ಲಿ ಕೋಟಿ ಕೋಟಿ ಹಣ ಗಳಿಸಲಿದ್ದಾರೆ ಈ ಆಟಗಾರರು: ಭಾರತೀಯರಿಗಿಲ್ಲ ಸ್ಥಾನ! title=
IPL 2023

IPL 2023 auction: PL 2023 ಗಾಗಿ ರಿಟೈನ್ ಪ್ರಕ್ರಿಯೆಯು ನವೆಂಬರ್ 16 ರಂದು ಪೂರ್ಣಗೊಂಡಿದೆ. ಮಂಗಳವಾರ ಸಂಜೆ 5 ಗಂಟೆಗೆ ಬಿಸಿಸಿಐ ವಿಧಿಸಿದ ಗಡುವು ಮುಗಿದ ನಂತರ 10 ಫ್ರಾಂಚೈಸಿಗಳು ತಮ್ಮ ಉಳಿಸಿಕೊಳ್ಳುವ ಮತ್ತು ರಿಲೀಸ್ ಮಾಡುವ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಐಪಿಎಲ್ 2022 ರಲ್ಲಿ, ಉತ್ತಮವಾಗಿ ಆಡದ ಸ್ಟಾರ್ ಆಟಗಾರರನ್ನು ಹೊರಹಾಕಲು ಆಯಾ ಫ್ರಾಂಚೈಸಿಗಳು ಹಿಂಜರಿದಿಲ್ಲ. ಕೀರನ್ ಪೊಲಾರ್ಡ್, ಕೇನ್ ವಿಲಿಯಮ್ಸನ್ ಮತ್ತು ನಿಕೋಲಸ್ ಪೂರನ್ ಅವರನ್ನೂ ಫ್ರಾಂಚೈಸಿಗಳು ಹೊರಹಾಕಿದ್ದಾರೆ. ಐಪಿಎಲ್ 2023 ರ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: Hardik Pandya: ಬೀದಿ ಬೀದಿಯಲ್ಲಿ ರಿಕ್ಷಾ ಓಡಿಸಿದ ಹಾರ್ದಿಕ್ ಪಾಂಡ್ಯ: ಕಾರಣವೇನು ಗೊತ್ತಾ?

ಐಪಿಎಲ್ ಫ್ರಾಂಚೈಸಿಗಳು 2022ರ ಟಿ 20ವಿಶ್ವಕಪ್‌ನಲ್ಲಿ ಸಂವೇದನಾಶೀಲ ಪ್ರದರ್ಶನಗಳಿಂದ ಪ್ರಭಾವಿತರಾದ ಅನೇಕ ಆಟಗಾರರನ್ನು ಪಡೆಯಲು ಈಗಾಗಲೇ ಪ್ಲ್ಯಾನ್ ನಡೆಸುತ್ತಿವೆ. ಡಿಸೆಂಬರ್ 23 ರಂದು ನಡೆಯಲಿರುವ IPL 2023 ಮಿನಿ ಹರಾಜಿನಲ್ಲಿ ಇನ್-ಫಾರ್ಮ್ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಹಣವನ್ನು ವ್ಯಯ ಮಾಡಲು ಸಿದ್ಧವಾಗಿವೆ. ಅನೇಕ ಫ್ರಾಂಚೈಸಿಗಳು ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರ್ರನ್ ಅವರ ಮೇಲೆ ಕಣ್ಣಿಟ್ಟಿದ್ದಾರೆ.

ಆಸ್ಟ್ರೇಲಿಯಾದ ಆಟಗಾರ ಕ್ಯಾಮರೂನ್ ಗ್ರೀನ್ ಮತ್ತು ಜಿಂಬಾಬ್ವೆ ಆಟಗಾರ ಸಿಕಂದರ್ ರಜಾಗೆ ಭಾರಿ ಬೇಡಿಕೆಯಿದೆ. ಅದೇ ರೀತಿ, ಜೋಶುವಾ ಲಿಟಲ್ (ಐರ್ಲೆಂಡ್), ರಿಲೆ ರೊಸ್ಸೊ (ದಕ್ಷಿಣ ಆಫ್ರಿಕಾ), ಅಲೆಕ್ಸ್ ಹೇಲ್ಸ್ (ಇಂಗ್ಲೆಂಡ್) ಮೇಲೆ ಹಣದ ಮಳೆ ಸುರಿಯಲಿದೆ. 5ರಿಂದ 7 ಕೋಟಿ ಸಂಭಾವನೆ ಪಡೆಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಲಿಟನ್ ದಾಸ್, ಜೇಸನ್ ರಾಯ್, ಹ್ಯಾರಿ ಬ್ರೂಕ್, ಎವಿನ್ ಲೂಯಿಸ್, ಜೇಸನ್ ಹೋಲ್ಡರ್, ಆದಿಲ್ ರಶೀದ್, ಫಿಲಿಪ್ ಸಾಲ್ಟ್, ಕೇಶವ್ ಮಹಾರಾಜ್ ಮೇಲೆ 2 ಕೋಟಿ ಖರ್ಚು ಮಾಡುವ ಅವಕಾಶವಿದೆ.

ಇದನ್ನೂ ಓದಿ: CSK Retained-Released Players List : ಜಡೇಜಾ ಉಳಿಸಿಕೊಂಡು; ಬ್ರಾವೋ, ರಾಯುಡು ರಿಲೀಸ್ ಮಾಡಿದ CSK 

ಕೋಟಿ ಹಣ ಬಾಚುವ ಸಾಮಾರ್ಥ್ಯವುಳ್ಳ ಆಟಗಾರರು:

  • ಬೆನ್ ಸ್ಟೋಕ್ಸ್
  • ಸ್ಯಾಮ್ ಕರಣ್
  • ಕ್ಯಾಮರೂನ್ ಗ್ರೀನ್
  • ಸಿಕಂದರ್ ರಜಾ
  • ಜೋಶುವಾ ಲಿಟಲ್
  • ರಿಲೆ ರೊಸ್ಸೊ

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News