Delhi Capitals New Jersey : IPL 2022 ಕ್ಕೆ 'ಹೊಸ ಜೆರ್ಸಿ' ಲಾಂಚ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್

ಫ್ರಾಂಚೈಸಿ ನೀಡಿದ ಮಾಹಿತಿ ಪ್ರಕಾರ, ಮೊದಲ ಕೆಲವು ಜೆರ್ಸಿಗಳನ್ನು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಅಭಿಮಾನಿಗಳಿಗೆ ತಂಡದ ತವರು ಮೈದಾನವಾದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಧರಿಸಿಲು ನೀಡಲಾಯಿತು.

Written by - Channabasava A Kashinakunti | Last Updated : Mar 12, 2022, 03:16 PM IST
  • ಮಾರ್ಚ್ 26 ರಿಂದ ಪ್ರಾರಂಭವಾಗುವ 2022 ರ ಇಂಡಿಯನ್ ಪ್ರೀಮಿಯರ್ ಲೀಗ್‌
  • ಡೆಲ್ಲಿ ಕ್ಯಾಪಿಟಲ್ಸ್ ಇಂದು ತನ್ನ ಆಟಗಾರರಿಗೆ ಹೊಸ ಜೆರ್ಸಿ
  • ತನ್ನ ಮೊದಲ ಮ್ಯಾಚ್ ಅನ್ನು ಮಾರ್ಚ್ 27 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.
Delhi Capitals New Jersey : IPL 2022 ಕ್ಕೆ 'ಹೊಸ ಜೆರ್ಸಿ' ಲಾಂಚ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್  title=

ನವದೆಹಲಿ : ಮಾರ್ಚ್ 26 ರಿಂದ ಪ್ರಾರಂಭವಾಗುವ 2022 ರ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಡೆಲ್ಲಿ ಕ್ಯಾಪಿಟಲ್ಸ್ ಇಂದು ತನ್ನ ಆಟಗಾರರಿಗೆ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ.

ಫ್ರಾಂಚೈಸಿ ನೀಡಿದ ಮಾಹಿತಿ ಪ್ರಕಾರ, ಮೊದಲ ಕೆಲವು ಜೆರ್ಸಿಗಳನ್ನು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಅಭಿಮಾನಿಗಳಿಗೆ ತಂಡದ ತವರು ಮೈದಾನವಾದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಧರಿಸಿಲು ನೀಡಲಾಯಿತು.

ನಗರದಿಂದ ಆಯ್ದ ಮಕ್ಕಳಿಗೆ, DC ಕ್ಯೂಬ್ಸ್ ಅಧಿಕೃತ ಜರ್ಸಿಗಳನ್ನು(New Jersey) ಸಹ ನೀಡಲಾಯಿತು, ಅವರಿಗಾಗಿ ವಿಶೇಷವಾಗಿ ಕ್ಯುರೇಟ್ ಮಾಡಿದ ಸ್ಟೈಲ್ ಡ್ರೆಸ್ ನೀಡಲಾಗಿತ್ತು.

ಈ ಕುರಿತು ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್‌ನ ಮಧ್ಯಂತರ ಸಿಇಒ ವಿನೋದ್ ಬಿಶ್ತ್(Vinod Bisht), "ಇದು ಐಪಿಎಲ್‌ನ ಹೊಸ ಸೀಸನ್ ಮತ್ತು ಈ ಹೊಚ್ಚ ಹೊಸ ಜೆರ್ಸಿಯಲ್ಲಿ ನಮ್ಮ ಆಟಗಾರರನ್ನು ನೋಡಲು ಕುತೂಹಲದಲ್ಲಿದ್ದೇವೆ" ಎಂದು  ಹೇಳಿದ್ದಾರೆ.

"ಈ ತಂಡವನ್ನು ವೈಭವದ ಅನ್ವೇಷಣೆಯಲ್ಲಿ ಬೆಂಬಲಿಸುವುದು ನಮ್ಮ ಅಭಿಮಾನಿಗಳ ಸೈನ್ಯ, ಆದ್ದರಿಂದ ಪ್ರತಿ ಹಂತದಲ್ಲೂ ಅವರನ್ನು ನಮ್ಮ ಪ್ರಯಾಣದ ಭಾಗವಾಗಿ ಮಾಡುವುದು ನಮಗೆ ಸೂಕ್ತವಾಗಿದೆ."

ಈ ಸೀಸನ್ ನಲ್ಲಿ  ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಮ್ಯಾಚ್ ಅನ್ನು  ಮಾರ್ಚ್ 27 ರಂದು ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಬ್ರಬೋರ್ನ್ ಸ್ಟೇಡಿಯಂನಲ್ಲಿ ಆಡಲಿದೆ.  

ಐಪಿಎಲ್ 15 ಸೀಸನ್(IPL 15) ಅನ್ನು ನಾಲ್ಕು ಸ್ಥಳಗಳಲ್ಲಿ ನಡೆಸಲಾಗುತ್ತಿದೆ - ಮುಂಬೈನ ವಾಂಖೆಡೆ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ, ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಪುಣೆಯ ಎಂಸಿಎ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಮಾರ್ಚ್ 26 ರಿಂದ ಮೇ 29 ರವರೆಗೆ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News