ಬೆಂಗಳೂರು: ಭಾರತೀಯ ರೈಯುಯೆ ರೈಯು ಕರಾಟೆ ಡು ಕೊಬೊಡೋ ಸಂಘಟನೆಯಿಂದ ಕರಾಟೆಗೆ ಹೊಸ ಸ್ಪರ್ಷ ನೀಡುವ, ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕಾರಣವಾಗಿರುವ ಕ್ರೀಡೆಗೆ ಹೊಸ ಆಯಾಮ ನೀಡುವ ಸಲುವಾಗಿ ನಗರದ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಫೆ. 16 ರಿಂದ 18 ರ ವರೆಗೆ ಅಂತರರಾಷ್ಟ್ರೀಯ ಕರಾಟೆ ಕುರಿತಾದ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಇದನ್ನೂ ಓದಿ: ರಿಷಿ ಅಭಿನಯದ "ರುದ್ರ ಗರುಡ ಪುರಾಣ" ಚಿತ್ರದ ಚಿತ್ರೀಕರಣ ಪೂರ್ಣ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ರೈಯುಯೆ ರೈಯು ಕರಾಟೆ ಡು ಕೊಬೊಡೋ ಸಂಘಟನೆ ಅಧ್ಯಕ್ಷ ಹಾಗೂ ತಾಂತ್ರಿಕ ನಿರ್ದೇಶಕ ಎಸ್. ಚಂದ್ರಶೇಖರ್, 18 ದೇಶಗಳ ಕರಾಟೆ ಪಟುಗಳು, ತರಬೇತುದಾರರು, ಕ್ರೀಡಾ ಉತ್ತೇಜಕರು, ಕರಾಟೆ ಸಂಘಟನೆಗಳ ಪ್ರತಿನಿಧಿಗಳು ಒಳಗೊಂಡಂತೆ ದೇಶ, ವಿದೇಶಗಳ 50 ರಿಂದ 60 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಜಪಾನ್ ನಲ್ಲಿ 1800 ರ ಮಧ್ಯ ಭಾಗದಲ್ಲಿ ನ್ರಿಸಟೋ ನಕೈಮಾ ಅವರು ರೈಯುಯೆ ರೈಯು ಡು ಕೊಬೊಡೋ ಕರಾಟೆಯನ್ನು ಅಸ್ಥಿತ್ವಕ್ಕೆ ತಂದಿದ್ದು, ಶತಮಾನಗಳಿಂದ ಈ ಕರಾಟೆ ಶಾಲೆ ತನ್ನದೇ ಆದ ಮಹತ್ವ ಕಾಯ್ದುಕೊಂಡು ಬರುತ್ತಿದೆ. ಹಲವಾರು ಮಂದಿ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಕರಾಟೆಗೆ ಹೊಸ ಆಯಾಮ ನೀಡುವ ಕುರಿತು ಚರ್ಚೆ ನಡೆಯಲಿದೆ ಎಂದರು.
ಜಗತ್ತಿನಾದ್ಯಂತ ಇರುವ ಮಾರ್ಷಲ್ ಆರ್ಟ್ಸ್ ಕ್ರೀಡಾಪಟುಗಳನ್ನು ಒಂದೆಡೆ ಕರೆ ತರುವ, ಪರಸ್ಪರ ಜ್ಞಾನಹಂಚಿಕೆ, ಅಂತರರಾಷ್ಟ್ರೀಯ ಸಹಕಾರ ವೃದ್ಧಿಸುವ ಧ್ಯೇಯ ಹೊಂದಲಾಗಿದೆ. ದೇಶದಲ್ಲಿ 28 ರಿಂದ 30 ಲಕ್ಷ ಮಂದಿ ಕರಾಟೆ ಕ್ರೀಡಾಪಟುಗಳಿದ್ದು, ಅವರ ಭವಿಷ್ಯವನ್ನು ಉಜ್ವಲಗೊಳಿಸುವ ಕುರಿತು ಚರ್ಚೆ ನಡೆಯಲಿದೆ. ವಿಚಾರಗೋಷ್ಠಿಯನ್ನು ಸಂಸದರಾದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಉದ್ಘಾಟಿಸಲಿದ್ದಾರೆ. ನೆಹರು ಯುವ ಕೇಂದ್ರದ ದಕ್ಷಿಣ ಭಾರತ ನಿರ್ದೇಶಕರಾದ ಎಂ.ಎನ್. ನಟರಾಜನ್, ದಕ್ಷಿಣ ಏಷ್ಯಾ ಕರಾಟೆ ಡು ಫೆಡರೇಷನ್ ನ ಅಧ್ಯಕ್ಷ ಶಿಹಾನ್ ಭರತ್ ಶರ್ಮಾ ಮತ್ತಿತರರು ಉಪಸ್ಥಿತರಲಿದ್ದಾರೆ.
ಇದನ್ನೂ ಓದಿ: ವಿ ಸಿಂಧು ಭರ್ಜರಿ ಕಂಬ್ಯಾಕ್… ಚೀನಾ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶ
ಸುದ್ದಿಗೋಷ್ಠಿಯಲ್ಲಿ ಕಾಟಾ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ಏಳು ಬಾರಿ ವೈಯಕ್ತಿಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿರುವ ಸುಗೋ ಸಕುಮೊಟೊ, ನಾಲ್ಕು ಬಾರಿ ಪ್ರಶಸ್ತಿ ವಿಜೇತ ರೈಯು ಕಿಯುನ, ಮಹಿಳೆಯರ ವಿಭಾಗದಲ್ಲಿ ಮೂರು ಪ್ರಶಸ್ತಿ ಗೆದ್ದಿರುವ ಯುಕು ಶಿಮಿಝು ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ