INDvsSA: ನಾವು ಯಾರನ್ನೂ ಹಗುರವಾಗಿ ಪರಿಗಣಿಸುವುದಿಲ್ಲ: ವಿರಾಟ್ ಕೊಹ್ಲಿ

ದಕ್ಷಿಣ ಆಫ್ರಿಕಾ ಅತ್ಯಂತ ಅಪಾಯಕಾರಿ ತಂಡ. ಕೆಲ ಪ್ರಮುಖ ಆಟಗಾರರು ಇಂಜ್ಯುರಿಗಳಿಂದಾಗಿ ತಂಡದಿಂದ ಹೊರಗುಳಿದಿರುಬಹುದು, ಆದರೆ ತಂಡದ ಯುವ ಆಟಗಾರರನ್ನು ಕಡೆಗಣಿಸುವಂತಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

Last Updated : Jun 4, 2019, 08:43 PM IST
INDvsSA: ನಾವು ಯಾರನ್ನೂ ಹಗುರವಾಗಿ ಪರಿಗಣಿಸುವುದಿಲ್ಲ: ವಿರಾಟ್ ಕೊಹ್ಲಿ title=

ನವದೆಹಲಿ: ವಿಶ್ವಕಪ್ 2019ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ನಾಳೆ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ. ಸತತ ಎರಡು ಬಾರಿ ವಿಶ್ವಕಪ್ ನಲ್ಲಿ ಸೋತ ಬಳಿಕ ನಾಳೆ ತನ್ನ ಮೊದಲ ಪಂದ್ಯವನ್ನು ದಕ್ಷಿಣಾ ಆಫ್ರಿಕಾ ವಿರುದ್ಧ ಆಡಲಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಈ ಪಂದ್ಯ ಮಹತ್ವದ್ದಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿರಾಟ್ ಕೊಹ್ಲಿ, ತನ್ನ ಕ್ರಿಕೆಟ್ ಜೀವನದಲ್ಲಿ ವಿಶ್ವಕಪ್ ಅತ್ಯಂತ ಕಠಿಣ ಪರೀಕ್ಷೆ ಎಂದಿದ್ದಾರೆ. "ದಕ್ಷಿಣ ಆಫ್ರಿಕಾ ಅತ್ಯಂತ ಅಪಾಯಕಾರಿ ತಂಡ. ಕೆಲ ಪ್ರಮುಖ ಆಟಗಾರರು ಇಂಜ್ಯುರಿಗಳಿಂದಾಗಿ ತಂಡದಿಂದ ಹೊರಗುಳಿದಿರುಬಹುದು, ಆದರೆ ತಂಡದ ಯುವ ಆಟಗಾರರನ್ನು ಕಡೆಗಣಿಸುವಂತಿಲ್ಲ. ನಾಳಿನ ಪಂದ್ಯವನ್ನು ನಾವು ನಿರ್ಲಕ್ಷಿಸುವುದಿಲ್ಲ. ನಾವು ಯಾರನ್ನೂ ಹಗುರವಾಗಿ ಪರಿಗಣಿಸುವುದಿಲ್ಲ. ನಮ್ಮ ಸಾಮರ್ಥ್ಯದ ಮೇಲೆ ಹೆಚ್ಚು ಗಮನ ಹರಿಸಬೇಕಿದೆ" ಎಂದು ಹೇಳಿದರು.

ಕುಲ್ದೀಪ್ ಅವರ ಫಿಟ್ನೆಸ್ ಬಗ್ಗೆ ಮಾತನಾಡಿದ ಕೊಹ್ಲಿ, "ಕುಲ್ದೀಪ್ ಯಾದವ್ ಉತ್ತಮವಾಗಿ ಆಡುತ್ತಿದ್ದಾರೆ, ಅವರು ಪ್ರತಿಯೊಂದು ಬಾಲ್ ನಲ್ಲಿಯೂ ಸ್ಟಂಪ್  ಹಿಟ್ ಮಾಡುತ್ತಾರೆ, ಆದ್ದರಿಂದಲೇ ಅವರು ವಿಶ್ವಕಪ್ ತಂಡದಲ್ಲಿದ್ದಾರೆ" ಎಂದು ಹೇಳಿದರು.

Trending News