ಪ್ರತಿಭೆಯಿದ್ದರೂ ಅವಕಾಶವಿಲ್ಲ !ಒಂದೇ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದರೂ ಆಡುವ ಅವಕಾಶವೇ ಸಿಗದ ಭಾರತದ ನತದೃಷ್ಟ ಬೌಲರ್ !

ಅತ್ಯುತ್ತಮ ಬೌಲಿಂಗ್ ಹೊರತಾಗಿಯೂ, ಈ ಸ್ಪಿನ್ನರ್ ಅನ್ನು ತಂಡದಿಂದ ಕೈಬಿಡಲಾಯಿತು. ಆ ನತದೃಷ್ಟ ಬೌಲರ್ ಯಾರು ನೋಡೋಣ. 

Written by - Ranjitha R K | Last Updated : Dec 3, 2024, 01:10 PM IST
  • ಕ್ರಿಕೆಟ್‌ ಅಂದರೆ ಅದೊಂದು ಮಾಯಾ ಲೋಕ.
  • ಅತ್ಯುತ್ತಮ ಪ್ರದರ್ಶನ ನೀಡಿದರೂ ಅವಕಾಶದಿಂದ ವಂಚಿತರಾಗಿರುವ ಆಟಗಾರರಿದ್ದಾರೆ.
  • ಇವರಲ್ಲಿ ಕೆಲವರು ಬ್ಯಾಟ್ಸ್‌ಮನ್‌ಗಳಾಗಿದ್ದರೆ, ಇನ್ನು ಕೆಲವರು ಬೌಲರ್‌ಗಳು.
ಪ್ರತಿಭೆಯಿದ್ದರೂ ಅವಕಾಶವಿಲ್ಲ !ಒಂದೇ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದರೂ ಆಡುವ ಅವಕಾಶವೇ ಸಿಗದ ಭಾರತದ ನತದೃಷ್ಟ ಬೌಲರ್ !  title=

ಕ್ರಿಕೆಟ್‌ ಅಂದರೆ ಅದೊಂದು ಮಾಯಾ ಲೋಕ. ಇಲ್ಲಿ ಪ್ರತಿಭೆ ಇದ್ದರೆ ಬೆಳೆಯುತ್ತಾರೆ ನಿಜ, ಆದರೆ ಪ್ರತಿಭೆ ಇದ್ದ ಪ್ರತಿಯೊಬ್ಬರೂ ಮಿಂಚುತ್ತಾರೆ ಎನ್ನುವುದು ಪೂರ್ಣ ಸತ್ಯವಲ್ಲ. ಆಟದ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಅವಕಾಶದಿಂದ ವಂಚಿತರಾಗಿರುವ ಅದೆಷ್ಟೋ ಆಟಗಾರರಿದ್ದಾರೆ. ಇವರಲ್ಲಿ ಕೆಲವರು  ಬ್ಯಾಟ್ಸ್‌ಮನ್‌ಗಳಾಗಿದ್ದರೆ, ಇನ್ನು ಕೆಲವರು ಬೌಲರ್‌ಗಳು. 

ಕರ್ನಾಟಕದ ಬ್ಯಾಟ್ಸ್ ಮನ್ ಕರುಣ್ ನಾಯರ್ ಹೆಸರನ್ನು ಯಾರು ಮರೆಯಲು ಸಾಧ್ಯ.ತ್ರಿಶತಕ ಬಾರಿಸಿದ ಬಳಿಕವೂ ಕೆಲವೇ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು.  ನಂತರ ಅವಕಾಶ ವಂಚಿತರಾಗಿ ಮರೆಯಾಗಿಯೇ ಬಿಟ್ಟರು. ಮತ್ತೊಬ್ಬ ಸ್ಟಾರ್ ಸ್ಪಿನ್ನರ್‌ನ ವಿಷಯದಲ್ಲೂ ಇದೇ ರೀತಿಯಾಗಿದೆ. ಅತ್ಯುತ್ತಮ ಬೌಲಿಂಗ್ ಹೊರತಾಗಿಯೂ, ಅವರನ್ನು ತಂಡದಿಂದ ಕೈಬಿಡಲಾಯಿತು.

ಇದನ್ನೂ ಓದಿ : ಕಪ್ಪು ದಾರ, ಹಳದಿ ಕರವಸ್ತ್ರ ಇಲ್ಲದೆ ಮೈದಾನಕ್ಕೆ ಇಳಿಯುತ್ತಿರಲಿಲ್ಲವಂತೆ ಈ ದಿಗ್ಗಜ್ಜ !ಕ್ರಿಕೆಟ್ ಅಂಗಣದಲ್ಲೂ ಶಕುನದ ಮಹಿಮೆ

ಕೊನೆ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ ಮಾಂತ್ರಿಕ : 
ಇಲ್ಲಿ ನಾವು ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಬಗ್ಗೆ ಮಾತನಾಡುತ್ತಿದ್ದೇವೆ. ಪ್ರಗ್ಯಾನ್ ಟೀಂ ಇಂಡಿಯಾ ಭಾಗವಾಗಿ 5 ವರ್ಷ ಮಾತ್ರ ಆಡಿರುವುದು. ಇವರು 2008 ರಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. 2013 ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಕೊನೆಯ ಪಂದ್ಯವೇ ಇವರ ವೃತ್ತಿಜೀವನದ ಕೊನೆಯ ಪಂದ್ಯವೂ ಆಯಿತು.

ಆ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಪ್ರಗ್ಯಾನ್ 10 ವಿಕೆಟ್ ಪಡೆದಿದ್ದರು. ಮೊದಲ ಇನಿಂಗ್ಸ್‌ನಲ್ಲಿ 40 ರನ್‌ಗಳಿಗೆ 5 ವಿಕೆಟ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 49 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇಷ್ಟಾದರೂ ನಂತರ ಆಡುವ ಅವಕಾಶವೇ ಅವರಿಗೆ ಸಿಗಲಿಲ್ಲ.  

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಧೋನಿ ನಾಯಕತ್ವದಲ್ಲಿ ಕೊನೆಯ ಪಂದ್ಯ : 
2013ರಲ್ಲಿ ಆ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಭಾರತ ತಂಡದ ನಾಯಕರಾಗಿದ್ದರು. ನಂತರವೂ ಅವರು ಸುಮಾರು 14 ತಿಂಗಳ ಕಾಲ ಟೆಸ್ಟ್ ನಾಯಕರಾಗಿದ್ದರು. ಓಜಾ 2013ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರೂ, 2020ರಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು.   

ಇತ್ತೀಚೆಗಷ್ಟೇ ಪ್ರಗ್ಯಾನ್ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಸಂದರ್ಶನದಲ್ಲಿ  ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಬಳಿಕ ತಂಡದಿಂದ ಹೊರಗಿಟ್ಟಿರುವ ಬಗ್ಗೆ ಎಂದಾದರೂ ಧೋನಿ ಬಳಿ ಮಾತನಾಡಿದ್ದೀರಾ ಎಂದು ಕೇಳಲಾಯಿತು. ಇದಕ್ ಉತ್ತರಿಸಿದ ಪ್ರಗ್ಯಾನ್, ''ನಾನು ಅದರ ಬಗ್ಗೆ ಯೋಚಿಸಲೇ ಇಲ್ಲ. ಇವುಗಳ ಹಿಂದೆ ಹೋದರೆ ನನ್ನ ಇತರ ಕೆಲಸಗಳು ಹಾಳಾಗುತ್ತವೆ. ನಾನು 100 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದೇನೆ ಮತ್ತು ಶ್ರೇಷ್ಠರೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದೇನೆ. ಅಂಥಹ ಒಳ್ಳೆಯ ನೆನಪುಗಳೊಂದಿಗೆ ಇದ್ದೇನೆ ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News